Friday, 10th January 2025

Health tips: ಸಸ್ಯಾಹಾರಿಗಳು ವಿಟಮಿನ್ ಡಿ ಪಡೆಯಲು ಸುಲಭ ಮಾರ್ಗ ಇಲ್ಲಿದೆ

vegetarians to get Vitamin D

ನವದೆಹಲಿ: ಆರೋಗ್ಯಕರ ಜೀವನಕ್ಕಾಗಿ ವಿಟಮಿನ್‌ ಡಿ ಎನ್ನುವುದು  ಬಹಳ ಅವಶ್ಯಕ. ನಮ್ಮ ದೇಹದಲ್ಲಿ ವಿಟಮಿನ್‌ ಡಿ ಕೊರತೆಯಾದರೆ ನಮ್ಮಲ್ಲಿ‌ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಖಿನ್ನತೆ, ಆತಂಕದಂತಹ ಹಲವು ಸಮಸ್ಯೆ ಎದುರಾಗಲಿದೆ. ಹಾಗಾಗಿ ವಿಟಮಿನ್ ಡಿ ದೇಹಕ್ಕೆ ಬಹಳ ಅಗತ್ಯ. ಇನ್ನು  ಮಾಂಸಾಹಾರಿಗಳು, ಮೀನು ಮತ್ತು ಇತರ  ಮಾಂಸದಿಂದ ಸಾಕಷ್ಟು ವಿಟಮಿನ್ ಡಿ ಪಡೆಯುತ್ತಾರೆ. ಆದರೆ ಸಸ್ಯಾಹಾರಿಗಳು ಯಾವ ರೀತಿ  ವಿಟಮಿನ್‌ ಡಿ ಪಡೆಯಬಹುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಹಾಗಾಗಿ ಸಸ್ಯಾಹಾರಿಗಳಿಗೆ ವಿಟಮಿನ್‌ ಡಿ (Health tips)  ನೀಡಲು ಸುಲಭ ಮಾರ್ಗಗಳನ್ನುಇಲ್ಲಿ ತಿಳಿಸಲಾಗಿದೆ.

ಚೀಸ್‌:

ಚೀಸ್‌ನಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಇರಲಿದ್ದು ಇದು ವಿವಿಧ  ರೀತಿಯ ಪೋಷಕಾಂಶಗಳನ್ಮು ಕೂಡ ಹೊಂದಿದೆ. ಚೀಸ್ ದೇಹದ ಮೂಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೆ  ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.ಪ್ರತಿದಿನ ಸಣ್ಣ ಪ್ರಮಾಣದ ಚೀಸ್ ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನಾ ಅಧ್ಯಯನಗಳು ಹೇಳಿವೆ.

ಅಣಬೆಗಳ ಸೇವನೆ:

ಅಣಬೆ ಕೂಡ ವಿಟಮಿನ್ ಡಿ ಯ ಪ್ರಮುಖ ಕೇಂದ್ರ ಬಿಂದುವಾಗಿದ್ದು  ಸಸ್ಯಾಹಾರಿಗಳ ಸೇವನೆಗೆ ಇದು ಪ್ರಮುಖ ಆಹಾರ ವಾಗಿದೆ.ಅಣಬೆಗಳಲ್ಲಿ ಕೊಬ್ಬಿನಾಂಶ ಇರುವುದಿಲ್ಲ. ಕಡಿಮೆ ಕ್ಯಾಲೋರಿ ಮತ್ತು ಕೊಲೆಸ್ಟ್ರಾಲ್-ಮುಕ್ತ ಆಗಿದ್ದು ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗಲಿದೆ. ಹಾಗಾಗಿ  ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಅಣಬೆ ತಿಂದರೆ ಉತ್ತಮ.

ಹಸುವಿನ ಹಾಲು:

ಹಸುವಿನ ಹಾಲಿನಲ್ಲಿ  ವಿಟಮಿನ್ ಡಿ ಇರಲಿದ್ದು  ಇದು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದ್ದು  ನಿಯಮಿತವಾಗಿ ಹಾಲಿನ ಸೇವನೆಯಿಂದ  ನಿಮ್ಮ ಮೂಳೆ ಗಟ್ಟಿಯಾಗಲು ಸಹಾಯ ಮಾಡುತ್ತದೆ.

ಸೂರ್ಯನ ಬೆಳಕು:

ಸೂರ್ಯನ ಬೆಳಕಿನ‌ ಮೂಲಕ‌ ವಿಟಮಿನ್ ಡಿ  ಹೆಚ್ಚಿನ ಪ್ರಮಾಣದಲ್ಲಿ ಪಡೆಯಬಹುದು. ನಮ್ಮ ಚರ್ಮವು ಸೂರ್ಯನ ಕಿರಣಗಳನ್ನು ಹೀರಿದರೆ  ವಿಟಮಿನ್ ಡಿ ಅನ್ನು ಸಂಶ್ಲೇಷಣೆ ಮಾಡುತ್ತದೆ. ಹಾಗಾಗಿ 5 ರಿಂದ 30 ನಿಮಿಷಗಳ ಕಾಲ ಕಳೆಯುವುದರಿಂದ ಹೆಚ್ಚಿನ ಜನರಿಗೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ  ಸಿಗಲಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತುಕೊಳ್ಳುವುದು ಆರೋಗ್ಯಕ್ಕೆ ಬಹಳ ಒಳಿತು.

ಬಲವರ್ಧಿತ ತೋಫು: 

ತೋಫು  ಎನ್ನುವುದು ಸಸ್ಯ  ಆಧಾರಿತ ಪ್ರೊಟೀನ್‌ನ ಜನಪ್ರಿಯ  ಭಾಗವಾಗಿದ್ದು  ಇದರಿಂದ ವಿಟಮಿನ್ ಡಿ ಹೆಚ್ಚಲಿದೆ. ಸಸ್ಯಾಹಾರಿಗಳು ತಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಇದರಿಂದ ಸುಲಭ ವಾಗುತ್ತದೆ.100 ಗ್ರಾಂ ಫೋರ್ಟಿಫೈಡ್ ತೋಫುದಲ್ಲಿ ವಿಟಮಿನ್ ಡಿ 101 ಐಯು ಇರಲಿದ್ದು ಸಸ್ಯಹಾರಿಗಳು ಈ ವಿಧಾನದಿಂದ ವಿಟಮಿನ್ ಡಿ ಹೆಚ್ಚಿಸಬಹುದು.

ಈ ಸುದ್ದಿಯನ್ನೂ ಓದಿ:Police Harassment: ಠಾಣೆಗೆ ಬಂದ ಮಹಿಳೆ ಮೇಲೆ ಡಿವೈಎಸ್‌ಪಿ ಲೈಂಗಿಕ ವಿಕೃತಿ, ವಿಡಿಯೋ ವೈರಲ್‌

Leave a Reply

Your email address will not be published. Required fields are marked *