ದಿಸ್ಪುರ್ : ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ (coal mine) ಸಿಲುಕಿದ್ದ ಒಂಬತ್ತು ಕಾರ್ಮಿಕರಲ್ಲಿ ಒಬ್ಬರ ಮೃತದೇಹವನ್ನು ರಕ್ಷಣಾ ತಂಡಗಳು ಬುಧವಾರ ಬೆಳಿಗ್ಗೆ ಹೊರತೆಗೆದಿವೆ. ಉಮ್ರಾಂಗ್ಸೊದ 3 ಕಿಲೋ ಪ್ರದೇಶದಲ್ಲಿ ನೆಲೆಗೊಂಡಿರುವ ಗಣಿಯಲ್ಲಿ ಸೋಮವಾರ ಹಠಾತ್ ನೀರು ಹರಿದ ನಂತರ ಕಾರ್ಮಿಕರು ಸಿಕ್ಕಿಬಿದ್ದರು(Assam Horror). ಇದೀಗ ಒಬ್ಬನ ಮೃತದೇಹ ಸಿಕ್ಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವ ಭೀತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
#WATCH | UPDATE | Dima Hasao, Assam: One body recovered from the coal mine at 3 Kilo, Umrangso area where 9 people were trapped on January 6. Search and rescue operation is still underway. pic.twitter.com/q4KvJQjQvJ
— ANI (@ANI) January 8, 2025
ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸೇರಿದಂತೆ ಏಜೆನ್ಸಿಗಳ ಡೈವರ್ಗಳು ಮತ್ತು ತಜ್ಞರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಗಣಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕರ ಕುಟುಂಬಗಳಿಗೆ ಧೈರ್ಯ ಹೇಳಿದ್ದಾರೆ.
#WATCH | Dima Hasao's coal mine incident | Assam Mines and Minerals minister Kaushik Rai says, "One body is recovered today. An Army team has again dived in (in the mine). The Navy team will also go. We have started the process of dewatering the mine… A few people are saying… pic.twitter.com/4TaHIpghEl
— ANI (@ANI) January 8, 2025
ದಿಮಾ ಹಸಾವೊದ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಕುಮಾರ್ ಝಾ ಮಾತನಾಡಿ, ಗಣಿಯೊಳಗೆ ಸಿಲುಕಿರುವ ಮೂವರು ಕಾರ್ಮಿಕರು ಮೃತಪಟ್ಟಿರುವ ವರದಿಗಯನ್ನು ತಳ್ಳಿಹಾಕಿದ್ದಾರೆ. ಕ್ವಾರಿಯೊಳಗಿನ ನೀರಿನ ಮಟ್ಟವು ಸುಮಾರು 100 ಅಡಿಗಳಿಗೆ ಏರಿದ್ದರಿಂದ ಕಾರ್ಮಿಕರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಲು ನೌಕಾಪಡೆಯ ಡೈವರ್ಗಳನ್ನು ಕರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : ಮಣಿಪುರ-ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ; ತೀವ್ರ ನಿಗಾ