ನವದೆಹಲಿ: ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ನಡುವೆ ನಡೆದ ಮಾರಾಮಾರಿ ನಡೆದಿದ್ದು, ಈ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಸುತ್ತ ಮುತ್ತ ಪ್ರಯಾಣಿಕರಿದ್ದರೂ ಯುವತಿಯರು ಕ್ಯಾರೇ ಎನ್ನದೆ ಜಗಳ ತೆಗೆದಿದ್ದಾರೆ. ಸಹ ಪ್ರಯಾಣಿಕರೊಬ್ಬರು ಈ ವಿಡಿಯೊ ರೆಕಾರ್ಡ್ ಮಾಡಿದ್ದು ವಿಡಿಯೋ ಈಗ ಫುಲ್ ವೈರಲ್ ಆಗಿದೆ(Viral Video)
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊ ದೆಹಲಿಯ ಮೆಟ್ರೋದಲ್ಲಿ ನಡೆದಿದೆ. ಬಹುಶಃ ಇಲ್ಲಿ ಇಬ್ಬರು ಯುವತಿಯರ ನಡುವೆ ಸೀಟಿನ ವಿಚಾರವಾಗಿ ಜಗಳ ನಡೆದಿದೆ. ಈ ಜಗಳ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ಪರಸ್ಪರ ಹೊಡೆದಾಡುವ ಹಂತಕ್ಕೂ ತಲುಪಿತು. ವಾಗ್ವಾದದಲ್ಲಿ ಒಬ್ಬರು ಮತ್ತೊಬ್ಬರನ್ನು ತಳ್ಳಿ ಹೊಡೆದಾಡಿಕೊಂಡಿದ್ದಾರೆ.
ಮಹಿಳೆಯೊಬ್ಬರು ಮತ್ತೊಬ್ಬ ಮಹಿಳಾ ಪ್ರಯಾಣಿಕನ ಮೇಲೆ “ಮೇರಿ ಗಾಡ್ ಮೆ ಬೈತ್ ಜಾ” ನನ್ನ ತೊಡೆಯ ಮೇಲೆ ಕುಳಿತುಕೊಳ್ಳಿ ಎಂದು ಜಗಳ ತೆಗೆದಿದ್ದಾಳೆ. ಇಲ್ಲಿಂದ ಆರಂಭ ವಾದ ಮಾತಿನ ಚಕಮಕಿ ಹೊಡೆದಾಟದ ವರೆಗೂ ಹೋಗಿದೆ. ಒಬ್ಬ ಮಹಿಳೆ ಸೀಟಿನಲ್ಲಿ ಕುಳಿತು ಕೊಂಡಿದ್ದಾಳೆ. ಮೊತ್ತೊಬ್ಬ ಮಹಿಳೆ ಸೀಟಿಲ್ಲದೆ ನಿಂತು ಪ್ರಯಾಣಿಸುವಾಗ ಆಕೆ ತನ್ನ ತೊಡೆಯ ಮೇಲೆ ಕುಳಿತುಕೊಳ್ಳಿ ಎಂದು ಜಗಳ ತೆಗಿದಿದ್ದಾಳೆ. ಮೆಟ್ರೊದಲ್ಲಿ ಇತರ ಪ್ರಯಾಣಿಕರು ದಿಗ್ಭ್ರಮೆಗೊಂಡು ನೋಡುತ್ತಿದ್ದಾರೆ. ಆದರೂ ಇಬ್ಬರು ಮಹಿಳೆಯರು ದೈಹಿಕ ವಾಗ್ವಾದದಲ್ಲಿ ತೊಡಗಿರುವುದನ್ನು ದೃಶ್ಯಾವಳಿ ತೋರಿಸುತ್ತದೆ.
ವಿಡಿಯೊದಲ್ಲಿ ಏನಿದೆ?
ಯುವತಿಯ ಜೊತೆಗೆ ಮತ್ತೊಬ್ಬ ಯುವತಿ ವಾಗ್ವಾದಕ್ಕಿಳಿದಿದ್ದು, ಈ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ಯುವತಿ ಮತ್ತೊಬ್ಬ ಯುವತಿಯನ್ನು ತಳ್ಳಿ ಹೊಡೆದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.ವಿಡಿಯೊದಲ್ಲಿ ಪಕ್ಕದಲ್ಲಿ ನಿಂತಿದ್ದ ಮಹಿಳೆ ಇಬ್ಬರನ್ನೂ ತಡೆಯಲು ಪ್ರಯತ್ನಿಸಿದ್ದಾರೆ.ಈ ವಿಡಿಯೊ ನೋಡಿ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.ಒಬ್ಬ ಬಳಕೆದಾರ ಸೀಟು ಸಿಕ್ಕವರು ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕುಳಿತುಕೊಳ್ಳುತ್ತಾರೆ, ಮತ್ತೆ ಜಗಳ ತೆಗೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ಮಹಿಳೆಯ ಕೋಪ ತೀವ್ರ ಗೊಂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮೆಟ್ರೋದಲ್ಲಿ ಇಂತಹ ಘಟನೆ ಹೊಸದಲ್ಲ. ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ದೆಹಲಿ ಮೆಟ್ರೋದಲ್ಲಿ ಈ ಹಿಂದೆಯೂ ಸೀಟಿಗಾಗಿ ನಡೆದಿದ್ದ ಜಗಳಗಳು ವೈರಲ್ ಆಗಿತ್ತು. ಅಷ್ಟೇ ಅಲ್ಲ ಮೆಟ್ರೋದಲ್ಲಿ ರೀಲ್ಸ್ ಮಾಡುವುದು, ಅಸಭ್ಯ ವರ್ತನೆಗಳ ವಿಡಿಯೊಗಳು ಸಹ ವೈರಲ್ ಆಗಿವೆ.
ಇದನ್ನು ಓದಿ:Viral Video: ಲೈವ್ ಸಂದರ್ಶನದ ವೇಳೆ ಕಾಲಿಗೆ ಗುಂಡು ಹಾರಿಸಿಕೊಂಡ ರ್ಯಾಪರ್; ವಿಡಿಯೊ ವೈರಲ್