ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೊಬಾಲ್ಟ್ ಕಲೆ ಮತ್ತು ಸಂಗೀತ ವೇದಿಕೆಯಲ್ಲಿ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ, ಶ್ರೀರಂಗಪಟ್ಟಣ ಇವರ ಸಹಯೋಗದಲ್ಲಿ ಜ.12 ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಮೈಸೂರಿನ ಮಹಿಮಾ ಪ್ರಕಾಶನ ಹೊರತರುತ್ತಿರುವ ವಿದ್ವಾನ್ ಗ.ನಾ. ಭಟ್ಟ ಅವರ ‘ಸಮ್ಮುಖ’ ಪುಸ್ತಕ ಬಿಡುಗಡೆ (Book Release) ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಎಂಎಲ್‌ಸಿ ಮತ್ತು ಖ್ಯಾತ ಸಾಹಿತಿ ಡಾ. ಎಸ್.ಆರ್.ಲೀಲಾ ಅಧ್ಯಕ್ಷತೆ ವಹಿಸುವರು. ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಕೃತಿ ಕುರಿತು ಮಾತನಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ | Shri Raghavendra Chitravani Awards 2024: ಶ್ರೀ ರಾಘವೇಂದ್ರ ಚಿತ್ರವಾಣಿ ವಾರ್ಷಿಕ ಪ್ರಶಸ್ತಿ ಪ್ರಕಟ
ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಖ್ಯಾತ ಉದ್ಯಮಿ ಯು.ಡಿ. ಶೆಟ್ಟಿ, ಮುಂಬಯಿ, ಖ್ಯಾತ ಚಿತ್ರ ಕಲಾವಿದ ಗಣಪತಿ ಎಸ್. ಹೆಗಡೆ, ಪುಸ್ತಕ ಪ್ರಕಾಶಕ ಕೆ.ವಿ. ಶ್ರೀನಿವಾಸ ಮತ್ತು ಕೃತಿ ಕರ್ತೃ ವಿದ್ವಾನ್ ಗ.ನಾ. ಭಟ್ಟ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.