Saturday, 11th January 2025

Health Benefits: ಖಾಲಿ ಹೊಟ್ಟೆಗೆ ತುಳಸಿ ರಸ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?

Health tips

ನವದೆಹಲಿ: ಪುರಾತನ ಕಾಲದಿಂದಲೂ ತುಳಸಿಗೆ ಎಷ್ಟು ಪೂಜ್ಯನೀಯ ಗೌರವ ಇದೆಯೋ(Tulsi) ಅಷ್ಟೇ ಅದನ್ನು ಔಷಧಿಯಾಗಿ ಬಳಕೆ ಮಾಡಲಾತ್ತಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ತುಳಸಿ ರಸ ಅಥವಾ ಎಲೆ ಸೇರಿಸಿಕೊಳ್ಳುವುದರಿಂದ ನಿಮ್ಮ ದೇಹಕ್ಕೆ ಉಂಟಾಗುವ ಸಣ್ಣಪುಟ್ಟ ಕಾಯಿಲೆಯಿಂದ ನೀವು  ಮುಕ್ತಿ ಪಡೆಯಬಹುದು(Health Benefits). ತುಳಸಿ ಎಲೆಯಲ್ಲಿ ವಿವಿಧ ರೀತಿಯ ಔಷಧೀಯ ಗುಣ ಇರಲಿದ್ದು ನಿಮ್ಮ ಆಹಾರ ಪದ್ಧತಿಯಲ್ಲಿ ತುಳಸಿ ಎಲೆಗಳನ್ನು ಸೇರಿಸಿ ಸೇವಿಸುವುದು ಬಹಳ ಒಳ್ಳೆಯದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಬಹಳಷ್ಟು  ಆರೋಗ್ಯ ಪ್ರಯೋಜನ ಇರಲಿದ್ದು ಏನೆಲ್ಲಾ ಲಾಭ ಇದೆ ಎನ್ನುವ  ಮಾಹಿತಿ ಇಲ್ಲಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇದ್ದು, ಇದು ವಿವಿಧ ಸೋಂಕುಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ನಿಮಗೆ ಬರುವಂತಹ ಸಾಮಾನ್ಯ ಶೀತ, ಜ್ವರ ಮತ್ತು ಇತರ ಉಸಿರಾಟದ ಸೋಂಕುಗಳಂತಹ ಸಾಮಾನ್ಯ ಕಾಯಿಲೆಗಳಿಂದ ಇದರ ಸೇವನೆಯಿಂದ ರಕ್ಷಿಸಬಹುದು. ತುಳಸಿ ರೋಗನಿರೋಧಕವಾಗಿ ಕೆಲಸ ಮಾಡಲಿದ್ದು ತುಳಸಿ ಎಲೆಗಳು ವಿಟಮಿನ್ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ಕೂಡಿದೆ.

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ:

ತುಳಸಿ ಸೇವನೆಯು ಅಜೀರ್ಣ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ‌‌ ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸಲು ತುಳಸಿ ಸೇವನೆ ಬಹಳ ಉತ್ತಮ.ನೀವು ಖಾಲಿ ಹೊಟ್ಟೆಯಲ್ಲಿ  ತುಳಸಿ ರಸ  ಸೇವಿಸುವ ಮೂಲಕ, ನೀವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿ ಉತ್ತೇಜಿಸುವಂತೆ ಮತ್ತು ದಿನವಿಡೀ ಸರಿಯಾದ ಜೀರ್ಣಕ್ರಿಯೆ ಖಚಿತ ಪಡಿಸಿಕೊಳ್ಳಬಹುದು.

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ:

ತುಳಸಿ ನೈಸರ್ಗಿಕ ಅಡಾಪ್ಟೋಜೆನ್ ಅಂಶ ಹೊಂದಿದ್ದು ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲಿದೆ. ತುಳಸಿ ಎಲೆ ತಿನ್ನುವುದರಿಂದ  ಖಿನ್ನತೆಯ ಸಮಸ್ಯೆಯನ್ನು ದೂರ ಮಾಡಬಹುದು. ತುಳಸಿಯಲ್ಲಿರುವ ಪೊಟ್ಯಾಶಿಯಮ್ ಅಂಶವು ಮೆದುಳಿನಲ್ಲಿರುವ ಸಿರೋಟೋನಿಕ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:

ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಆರೋಗ್ಯಕ್ಕೆ ಮಾತ್ರವಲ್ಲದೆ  ಚರ್ಮಕ್ಕೂ ಪ್ರಯೋಜನ ಕಾರಿಯಾಗಿದೆ.  ತುಳಸಿಯ ನಿಯಮಿತ ಸೇವನೆಯು ಮೊಡವೆ, ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುವ ಮೂಲಕ  ಕಾಂತಿಯುತ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೃದ್ರೋಗಗಳನ್ನು ತಡೆಯುತ್ತದೆ:

ತುಳಸಿಯಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್‌  ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರಿಂದ  ರಕ್ತದ ಪರಿಚಲನೆಯು ಸುಗಮವಾಗುತ್ತದೆ. ಇದರಿಂದ ಹೃದಯ ಸಂಬಂಧಿತ ಕಾಯಿಲೆಗಳು  ದೂರವಾಗಲಿದೆ. ತುಳಸಿ ಸೇವನೆ  ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಮ್ಮ ಬೆಳಗಿನ ದಿನಚರಿಯಲ್ಲಿ ತುಳಸಿಯನ್ನು ಸೇರಿಸುವುದು ಹೃದಯದ ಆರೋಗ್ಯವನ್ನು ವೃದ್ದಿಸಲು ಪರಿಣಾಮಕಾರಿ ಮಾರ್ಗವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ:

ತುಳಸಿ ಮಧುಮೇಹವನ್ನು ತಡೆಗಟ್ಟಲು ಪ್ರಮುಖ ಪಾತ್ರ ವಹಿಸಲಿದೆ. ಇದು ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬಿನ ದೇಹದ ಚಯಾಪಚಯವನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಪ್ರತಿದಿನ ಬೆಳಿಗ್ಗೆ ತುಳಸಿ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡಲಿದೆ.

ಶ್ವಾಸಕೋಶದ ಕಾಯಿಲೆ ತಡೆಯುವುದು:

ತುಳಸಿ ಎಲೆಗಳಲ್ಲಿ ಕ್ಯಾಂಪೇನ್, ವಿಟಮಿನ್ ಸಿ, ಸಿನೋಲ್ ಮತ್ತು ಯುಜೆನಾಲ್  ಅಂಶ ಇರಲಿದ್ದು ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡಲು ನೆರವಾಗುವುದು ಮತ್ತು ಉಸಿರುಗಟ್ಟುವ ಸಮಸ್ಯೆ ನಿವಾರಣೆ ಮಾಡಲಿದೆ‌.

ದೇಹ ಶುದ್ದೀಕರಣ ಮಾಡಲಿದೆ:

ತುಳಸಿ ಎಲೆ  ರಕ್ತವನ್ನು ಶುದ್ಧೀಕರಿಸಲು ಮತ್ತು ವಿಷವನ್ನು ಹೊರಹಾಕುವ ಮೂಲಕ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.ಇದರ ಉತ್ಕರ್ಷಣ ನಿರೋಧಕ ಅಂಶವು ಹಾನಿಕಾರಕ ಸ್ವತಂತ್ರ ರಾಡಿಕಲ್ ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನೂ ಓದಿ:Neem Leaf: ಕಹಿಯೆಂದು ಬೇವಿನ ಎಲೆಯನ್ನು ದೂರ ಎಸೆಯಬೇಡಿ; ಆರೋಗ್ಯಕ್ಕೆ ಎಷ್ಟೆಲ್ಲ ಪ್ರಯೋಜನವಿದೆ ನೋಡಿ

Leave a Reply

Your email address will not be published. Required fields are marked *