Thursday, 9th January 2025

Pritish Nandy: ಹಿರಿಯ ನಿರ್ಮಾಪಕ, ರಾಜಕಾರಣಿ ಪ್ರೀತೀಶ್ ನಂದಿ ನಿಧನ

Pritish Nandy

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ, ರಾಜಕಾರಣಿ ಪ್ರೀತೀಶ್ ನಂದಿ (Pritish Nandy) ಅವರು ಬುಧವಾರ (ಡಿ. 8) ಮುಂಬೈಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪ್ರೀತೀಶ್ ನಂದಿ ನಿಧನವನ್ನು ಅವರ ಪುತ್ರ ಹಾಗೂ ಹಿರಿಯ ನಟ ಅನುಪಮ್ ಖೇರ್ ದೃಢಪಡಿಸಿದ್ದಾರೆ.

ತಮ್ಮ ತಂದೆ ದಕ್ಷಿಣ ಮುಂಬೈಯಲ್ಲಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಪ್ರೀತೀಶ್ ನಂದಿ ಅವರ ಪುತ್ರ, ಚಲನಚಿತ್ರ ನಿರ್ಮಾಪಕ ಕುಶಾನ್ ನಂದಿ ಅವರು ತಿಳಿಸಿದ್ದಾರೆ. ʼಝಂಕಾರ್ ಬೀಟ್ಸ್ʼ (2003), ʼಮುಂಬೈ ಮ್ಯಾಟ್ನಿʼ (2003), ʼಚಮೇಲಿʼ (2004), ʼಪಾಪ್‌ಕಾರ್ನ್‌ ಖಾವೊʼ ಸೇರಿದಂತೆ ಹಲವು ಯಶಸ್ವಿ ಬಾಲಿವುಡ್‌ ಚಿತ್ರಗಳನ್ನು ನಂದಿ ಪ್ರೀತೀಶ್ ನಂದಿ ನಿರ್ಮಿಸಿದ್ದಾರೆ. ಮಾತ್ರವಲ್ಲ ʼಮಸ್ತ್ ಹೋ ಜಾವೊʼ (2004), ʼಶಬ್ದ್ʼ (2005), ʼಹಜಾರೋನ್ ಖ್ವಾಯಿಶೇನ್ ಐಸಿʼ (2005), ʼಏಕ್ ಖಿಲಾಡಿ ಏಕ್ ಹಸೀನಾʼ (2005), ʼಅಂಕಾಹೀʼ (2006), ʼಪ್ಯಾರ್ ಕೆ ಸೈಡ್ ಎಫೆಕ್ಟ್ಸ್ʼ (2006), ಮತ್ತು ʼಬೌ ಬ್ಯಾರಕ್ಸ್ ಫಾರೆವರ್ʼ (2006) ಮೊದಲಾದ ಜನಪ್ರಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.

ಸಂತಾಪ ಸೂಚಿಸಿದ ಅನುಪಮ್‌ ಖೇರ್‌

ಅನುಪಮ್‌ ಖೇರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. “ನನ್ನ ಆತ್ಮೀಯ ಮತ್ತು ಆಪ್ತ ಸ್ನೇಹಿತ ಪ್ರೀತೀಶ್ ನಂದಿ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖ ಮತ್ತು ಆಘಾತವಾಗಿದೆ. ಅವರು ಅದ್ಭುತ ಕವಿ, ಬರಹಗಾರ, ಚಲನಚಿತ್ರ ನಿರ್ಮಾಪಕ ಮತ್ತು ಧೈರ್ಯಶಾಲಿ ಮತ್ತು ಅನನ್ಯ ಸಂಪಾದಕ / ಪತ್ರಜರ್ತರಾಗಿದ್ದರು. ಮುಂಬೈಯಲ್ಲಿನ ನನ್ನ ಆರಂಭಿಕ ದಿನಗಳಲ್ಲಿ ಅವರು ನೀಡಿದ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ನಾವು ಬಹಳಷ್ಟು ವಿಷಯಗಳನ್ನು ಹಂಚಿಕೊಂಡಿದ್ದೇವೆ. ನಾನು ಕಂಡ ಅತ್ಯಂತ ನಿರ್ಭೀತ ವ್ಯಕ್ತಿಗಳಲ್ಲಿ ಅವರು ಒಬ್ಬರು. ನಾನು ಅವರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ ಕೂಡ. ಿತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಭೇಟಿಯಾಗಿರಲಿಲ್ಲʼʼ ಎಂದು ಬರೆದುಕೊಂಡಿದ್ದಾರೆ.

ಬಿಹಾರದ ಭಾಗಲ್ಪುರದಲ್ಲಿ 1951ರ ಜನವರಿ 15ರಂದು ಜನಿಸಿದ ನಂದಿ ಅವರು ಚಿತ್ರ ನಿರ್ಮಾಣದ ಜತೆಗೆ ವಿವಿದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು 1998ರಿಂದ 2004ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *