Friday, 10th January 2025

Viral Video: ಅಬ್ಬಾ… ಎಂಥಾ ಭೀಕರ ದೃಶ್ಯ! ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ಕನ್ವೇಯರ್ ಬೆಲ್ಟ್ ಒಳಗೆ ಹೋದ ವೃದ್ಧೆ

Viral Video

ಮಾಸ್ಕೋ: ವೃದ್ಧೆಯೊಬ್ಬರು ಪ್ರಯಾಣಿಕರ ಬ್ಯಾಗೇಜ್ ಕನ್ವೇಯರ್ ಬೆಲ್ಟ್ ಅನ್ನು ಒಳಗೆ ಹೋಗುವ ಮಾರ್ಗವೆಂದು ತಪ್ಪಾಗಿ ತಿಳಿದುಕೊಂಡು ಅದರೊಳಗೆ ನುಸುಳಿದ  ಘಟನೆ ನಡೆದಿದೆ. ಈ ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ವೃದ್ಧ ಮಹಿಳೆ ವ್ಲಾಡಿಕಾವ್ಕಾಜ್‍ನಿಂದ ಮಾಸ್ಕೋದ ಡೊಮೊಡೆಡೊವೊ ವಿಮಾನ ನಿಲ್ದಾಣಕ್ಕೆ ಎಸ್ 7 ಏರ್‌ಲೆನ್ಸ್‌ ವಿಮಾನದಲ್ಲಿ ಪ್ರಯಾಣಿಸಲು  ತಯಾರಿ ನಡೆಸುತ್ತಿದ್ದಾಗ ಈ ವಿಲಕ್ಷಣ ಘಟನೆ ಸಂಭವಿಸಿದೆ. ಇಬ್ಬರು ಸಿಬ್ಬಂದಿ ಇನ್ನೊಬ್ಬ ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದಾಗ, ಇತ್ತ ಕಡೆ ವೃದ್ಧ ಮಹಿಳೆ ಚಲಿಸುವ ಕನ್ವೇಯರ್ ಬೆಲ್ಟ್ ಮೇಲೆ ಕಾಲಿಟ್ಟಿದ್ದಾರೆ. ಅದು ಬೋರ್ಡಿಂಗ್ ಪ್ರದೇಶಕ್ಕೆ ಕಾಲುದಾರಿ ಎಂದು ಅವರು ತಿಳಿದು ಆತ್ಮವಿಶ್ವಾಸದಿಂದ ಮುಂದೆ ಸಾಗಿದ್ದಾರೆ. ಆದರೆ ಚಲಿಸುತ್ತಿರುವ ಕನ್ವೇಯರ್ ಬೆಲ್ಟ್ ಮೇಲೆ ಹೆಜ್ಜೆ ಹಾಕಿದ ಕೂಡಲೇ ವೃದ್ಧ ಮಹಿಳೆ ತನ್ನ ಸಮತೋಲನವನ್ನು ಕಳೆದುಕೊಂಡು ಕನ್ವೇಯರ್ ಬೆಲ್ಟ್ ಮೇಲೆ ಬಿದ್ದು ಒಳಗೆ ಹೋಗಿದ್ದಾರೆ.

ತಮ್ಮ ಸಂಭಾಷಣೆಯಲ್ಲಿ ನಿರತರಾಗಿದ್ದ ಮೂವರು ಚೆಕ್-ಇನ್ ಸಿಬ್ಬಂದಿ, ಮಹಿಳೆ ಬ್ಯಾಗೇಜ್ ಕನ್ವೇಯರ್ ಬೆಲ್ಟ್ ಒಳಗೆ ಹೋಗುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ಪಾಕಿಸ್ತಾನದಲ್ಲಿ ಕೂಡ ಇಂತಹದೊಂದು ಘಟನೆ ನಡೆದಿದ್ದು, ಪಾಕಿಸ್ತಾನ-ಅಫ್ಘಾನಿಸ್ತಾನ ಟೋರ್ಖಾಮ್ ಗಡಿಯ ಬಳಿ ಬ್ಯಾಗೇಜ್ ಸ್ಕ್ಯಾನರ್ ಮೂಲಕ ವ್ಯಕ್ತಿಯೊಬ್ಬರು ಹಾದುಹೋಗಿದ್ದಾರೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಭದ್ರತಾ ಸಿಬ್ಬಂದಿ ಸಾಮಾನುಗಳನ್ನು ಕನ್ವೇಯರ್ ಬೆಲ್ಟ್‌ನಲ್ಲಿ ಇರಿಸಲು ಹೇಳಿದಾಗ ವ್ಯಕ್ತಿಯು ಕೈಯಲ್ಲಿದ್ದ ಸಾಮಾನುಗಳೊಂದಿಗೆ ತಾನು ಬ್ಯಾಗೇಜ್ ಸ್ಕ್ಯಾನಿಂಗ್ ವ್ಯವಸ್ಥೆಯ ಮೂಲಕ ಮುಂದೆ ಹೋಗಿದ್ದಾರೆ. ಕೊನೆಗೆ ಅವರು ಗಲಿಬಿಲಿಗೊಂಡು ಕನ್ವೇಯರ್ ಬೆಲ್ಟ್‌ನಿಂದ ಕೆಳಗೆ ಹಾರಿದ್ದಾರೆ.

ಈ ಸುದ್ದಿಯನ್ನೂ ಓದಿ: ತಪ್ಪಿಸಿಕೊಂಡು ಓಡುತ್ತಿದ್ದ ಚಿರತೆಯ ಬಾಲ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ! ವಿಡಿಯೊ ವೈರಲ್

ಕನ್ವೇಯರ್ ಬೆಲ್ಟ್‌ಗಳನ್ನು ಬ್ಯಾಗೇಜ್ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಎಂಬ ಮಾಹಿತಿ ತಿಳಿಯದಿದ್ದರೆ ಸಿಬ್ಬಂದಿಗಳ  ಸಹಾಯವನ್ನು ಪಡೆಯಲು ಪ್ರಯಾಣಿಕರಿಗೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *