ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) 100 ದಿನಗಳನ್ನು ಪೂರೈಸಿ ಸಾಗುತ್ತಿದೆ. ಫಿನಾಲೆಗೆ ಇನ್ನೇನು ಎರಡೂವರೆ ವಾರ ಬಾಕಿ ಉಳಿದಿದ್ದು ಆಟ ಇನ್ನಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿರಲಿಲ್ಲ. ಇದೀಗ ಈ ವಾರ ಎಲಿಮಿನೇಷನ್ ಇರುವುದು ಪಕ್ಕಾ ಆಗಿದೆ. ಆದರೆ, ಇದರಲ್ಲಿ ಏನಾದರು ಟ್ವಿಸ್ಟ್ ಇರುತ್ತಾ ಎಂಬುದು ಕುತೂಹಲ.
ಕಳೆದ ವಾರ ಫ್ಯಾಮಿಲಿ ವೀಕ್ ಆಗಿತ್ತು. ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿತ್ತು. ಹೀಗಾಗಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ಇರಲಿಲ್ಲ. ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಈ ವಾರ ಮನೆಯಲ್ಲಿ ಒಟ್ಟು 5 ಮಂದಿ ನಾಮಿನೇಟ್ ಆಗಿದ್ದಾರೆ.
ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ಆಚಾರ್ ನಾಮಿನೇಟ್ ಆಗಿದ್ದಾರೆ. ಇವರಿಗೆ ಫಿನಾಲೆ ಟಿಕೆಟ್ ಕೂಡ ಕೈ ತಪ್ಪಿದೆ. ಈ ವಾರ ಟಾಸ್ಕ್ಗಳನ್ನು ನೀಡಲಾಗಿದ್ದು, ಇದರಲ್ಲಿ ಉತ್ತಮವಾಗಿ ಆಟ ಆಡಿ ಸ್ಪರ್ಧಿಗಳು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಈ ವಾರ ನಾಮಿನೇಟ್ ಆದ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಭವ್ಯಾ ಗೌಡ ಹಂಗೊ-ಹಿಂಗೊ ಆಡುತ್ತಿದ್ದಾರೆ. ಧನರಾಜ್ ಅವರು ಕೂಡ ಅಗ್ರೆಸಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ. ಅವರ ಕಡೆಯಿಂದ ಮನೋರಂಜನೆ ನೀಡುವ ಕೆಲಸ ಕೂಡ ಆಗುತ್ತಿದೆ. ಸದ್ಯ ಚೈತ್ರಾ ಕುಂದಾಪುರ ಹಾಗೈ ಮೋಕ್ಷಿತಾ ಪೈಗೆ ಈ ವಾರದಲ್ಲಿ ಉಳಿದಿರುವ ದಿನ ಮಹತ್ವದ್ದಾಗಿದೆ.
ಈ ವಾರ ಮಿಡ್ ವೀಕ್ ಅಥವಾ ಮಿಡ್ ನೈಟ್ ಎಲಿಮಿನೇಷನ್ ಇರಲಿದೆ ಎನ್ನಲಾಗಿತ್ತು. ಸೀಸನ್ನಲ್ಲಿ ಒಮ್ಮೆಯಾದರು ಮಿಡ್ ವೀಕ್ ಅಥವಾ ಮಿಡ್ ನೈಟ್ ಎಲಿಮಿನೇಷನ್ ಇರುತ್ತದೆ. ಇದು ಈ ವಾರವೇ ನಡೆಯಲಿದೆ ಎಂಬ ಮಾತು ಇತ್ತು. ಆದರೆ, ಮಿಡಲ್ ವೀಕ್ ಎಲಿಮಿನೇಷನ್ ಇಲ್ಲ ಬದಲಾಗಿ ವೀಕೆಂಡ್ ಡಬಲ್ ಎಲಿಮಿನೇಷನ್ ಇರಲಿದೆ ಎಂದು ಹೇಳಲಾಗಿದೆ.
Kora Movie: ಕುತೂಹಲ ಮೂಡಿಸಿದೆ ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಚಿತ್ರದ ಟ್ರೇಲರ್!