Friday, 10th January 2025

Viral Video: ರೈಲಿನಲ್ಲಿ ಪ್ರಯಾಣಿಕನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಟಿಟಿಇ! ಶಾಕಿಂಗ್‌ ವಿಡಿಯೊ ವೈರಲ್‌

Viral Video

ಚಲಿಸುತ್ತಿದ್ದ ರೈಲಿನೊಳಗೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕನೊಬ್ಬನನ್ನು ತೀವ್ರವಾಗಿ ಥಳಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಈ ಘಟನೆ ಅಮೃತಸರ ಮತ್ತು ಕತಿಹಾರ್ ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುವ 15708 ಅಮ್ರಪಾಲಿ ಎಕ್ಸ್‌ಪ್ರೆಸ್‌ ರೈಲು ಮಾರ್ಗದಲ್ಲಿ ನಡೆದಿದೆ. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ಚಲಿಸುತ್ತಿದ್ದ ರೈಲಿನೊಳಗೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕನೊಬ್ಬನನ್ನು ತೀವ್ರವಾಗಿ  ಥಳಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಚಲಿಸುವ ರೈಲಿನಲ್ಲಿ ಟಿಟಿಇ ಮತ್ತು ರೈಲು ಪರಿಚಾರಕ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದನ್ನು ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ. ಅಮೃತಸರ ಮತ್ತು ಕತಿಹಾರ್ ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುವ 15708 ಅಮ್ರಪಾಲಿ ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ಈ ಘಟನೆ ನಡೆದಿದೆ.

ವೈರಲ್ ವಿಡಿಯೊದಲ್ಲಿ ಸಮವಸ್ತ್ರ ಧರಿಸಿದ ರೈಲ್ವೆ ಅಧಿಕಾರಿಗಳು ಪ್ರಯಾಣಿಕನೊರ್ವನನ್ನು ರೈಲು ಬೋಗಿಯ ಹಾದಿಯಲ್ಲಿ ಮಲಗಿಸಿಕೊಂಡು ಪದೇ ಪದೇ ಬೆಲ್ಟ್‌ನಿಂದ ಹೊಡೆದಿದ್ದಾರೆ. ಇಬ್ಬರು ಅಧಿಕಾರಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊದಲ್ಲಿ, ಟಿಟಿಇ ಪ್ರಯಾಣಿಕನಿಗೆ ಹೊಡೆದಿದ್ದು ಮಾತ್ರವಲ್ಲ , ತನ್ನ ಕಾಲನ್ನು ಪ್ರಯಾಣಿಕನ ಮೇಲೆ ಇಟ್ಟಿದ್ದಾನೆ.  ಮತ್ತು ಪ್ರಯಾಣಿಕನ ಬೆನ್ನಿನ ಮೇಲೆ ಕುಳಿತು ಆ ವ್ಯಕ್ತಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ.  ನಂತರ ಬೂಟುಗಳಿಂದ ಕೂಡ ಒದ್ದಿದ್ದಾನೇ. ಅಲ್ಲದೆ, ಕೋಚ್ ಅಟೆಂಡೆಂಟ್ ಪ್ರಯಾಣಿಕನ ಪ್ಯಾಂಟ್ ಅನ್ನು ಕಳಚಲು ಪ್ರಯತ್ನಿಸಿದ್ದಾನೆ. ನಂತರ ಸೊಂಟಕ್ಕೆ  ಬೆಲ್ಟ್‌ನಿಂದ ಪದೇ ಪದೇ ಹೊಡೆದಿದ್ದಾನೆ.

ಅಷ್ಟೇ ಅಲ್ಲದೇ ಕೋಪಗೊಂಡ ಟಿಟಿಇ ಪ್ರಯಾಣಿಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ವಿಡಿಯೊ ರೆಕಾರ್ಡ್ಆಗಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಾಗ, ಪ್ರಯಾಣಿಕನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕಾಗಿ ನೆಟ್ಟಿಗರು ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಟಿಟಿಇ ಮತ್ತು ಕೋಚ್ ಅಟೆಂಡೆಂಟ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸುವುದು ಸ್ವೀಕಾರಾರ್ಹವಲ್ಲ ಎಂದು ಅನೇಕರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಬೋರ್ಡಿಂಗ್ ಸಿಬ್ಬಂದಿ ಕ್ರೌರ್ಯಕ್ಕೆ ದೃಷ್ಟಿ ಕಳೆದುಕೊಂಡ ಶ್ವಾನ; FIR ದಾಖಲು- ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಅಮೃತಸರ-ಕಟಿಹಾರ್ ಎಕ್ಸ್‌ಪ್ರೆಸ್‌ನ ವೈರಲ್ ದೃಶ್ಯಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು, “ಇವರು ರೈಲ್ವೆ ಉದ್ಯೋಗಿಗಳೇ ಅಥವಾ ರೈಲ್ವೆ ಗೂಂಡಾಗಳೇ?” ಎಂದು ಒಬ್ಬರು ಬರೆದಿದ್ದಾರೆ. “ಏನಾದರೂ ತಪ್ಪಾಗಿದ್ದರೆ, ಆರ್‌ಪಿಎಫ್‌ಗೆ ಕರೆ ಮಾಡಿ ಅವರನ್ನು ರೈಲಿನಿಂದ ಇಳಿಸಿ – ಆದರೆ ಇದೆಲ್ಲ ಏನು? ರೈಲು ಪ್ರಯಾಣದಲ್ಲಿ ಈ ಸೌಲಭ್ಯವನ್ನು ಅವರು ಯಾವಾಗಿನಿಂದ ಒದಗಿಸಲು ಪ್ರಾರಂಭಿಸಿದರು?” ಎಂದು ಮತ್ತೊಬ್ಬರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ಪ್ರಕರಣವನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *