ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ವೀಕ್ಷಕರಿಗೆ ಇಷ್ಟವಾಗುವಂತೆ ಎಪಿಸೋಡ್ಗಳು ಬರುತ್ತಿದ್ದು, ಶ್ರೇಷ್ಠಾಳಿಗೆ ಬುದ್ದಿ ಕಲಿಸುವ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳ ಎಪಿಸೋಡ್ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟಿಆರ್ಪಿ ವಿಚಾರದಲ್ಲಿ ಈ ಧಾರಾವಾಗಿ ಮೇಲೆದ್ದಿದೆ. ಸದ್ಯ ಶ್ರೇಷ್ಠಾ ಮನೆಸೊಸೆಯ ಪಟ್ಟ ಭದ್ರ ಪಡಿಸಿಕೊಳ್ಳಲು ನಾನಾಕಸರತ್ತು ನಡೆಸುತ್ತಿದ್ದಾಳೆ. ಆದರೆ, ಈ ಪ್ಲ್ಯಾನ್ಗಳೆಲ್ಲ ಫೇಲ್ ಆಗುತ್ತಿದೆ.
ಸದ್ಯ ಮನೆಯಲ್ಲಿ ಪೂಜೆಯ ತಯಾರಿ ನಡೆಯುತ್ತಿದೆ. ಭಾಗ್ಯ ಬೆಳಗ್ಗೆ ಬೇಗನೆ ಎದ್ದು ಪೂಜೆಗೆ ತಯಾರು ಮಾಡಲು ಹೊರಡುತ್ತಾಳೆ. ಆದರೆ, ಆಗ ಕುಸುಮಾ ಬಂದು, ನೀನು ಪೂಜೆಗೆಲ್ಲ ತಯಾರು ಮಾಡೋದು ಬೇಡ, ಇದು ಸದ್ಯಕ್ಕೆ ನಮ್ಮ ಮನೆ ಅಲ್ಲ, ಅದು ಆ ಶ್ರೇಷ್ಠಾಳ ಮನೆ, ಅವಳು ಈ ಮನೆಯಲ್ಲಿ ಇರೋ ತನಕ ಇದು ನಮ್ಮ ಮನೆ ಆಗಲ್ಲ ಈ ಪೂಜೆ ನಮ್ಮ ಮನೆ ಪೂಜೆ ಅನ್ಸಲ್ಲ. ಹಾಗಾಗಿ ಮೊದಲು ಅವಳನ್ನು ಇಲ್ಲಿಂದ ಓಡ್ಸೊ ಬಗ್ಗೆ ಯೋಚನೆ ಮಾಡಬೇಕು, ನನ್ನ ಮಗನ ಕಣ್ಣು ಮೊದಲ ತೆರೆಸ್ಬೇಕು.. ಯಾವುದೇ ಕಾರಣಕ್ಕು ನಿನ್ನ ಗುರಿ ಮರಿಬೇಡ ಭಾಗ್ಯ ಎಂದು ಹೇಳಿದ್ದಾಳೆ.
ಇನ್ನು ತಾಂಡವ್ ಬಂದು, ನಮ್ಮ ಮನೇಲಿ ನಡೆಯುತ್ತಿರುವ ಪೂಜೆಗೆ ನೈವೇದ್ಯವನ್ನು ಭಾಗ್ಯ ಮಾಡೋದು ಬೇಡ ಎಂದು ಜಗಳ ಆಡಿದ್ದಾನೆ. ಪೂಜೆಗೆ ಸಂಬಂಧ ಪಟ್ಟಿರುವ ಎಲ್ಲ ಕೆಲಸನೂ ಈ ಮನೆಯ ಸೊಸೆಯಾಗಿರುವ ಶ್ರೇಷ್ಠಾ ಮಾಡ್ತಾಳೆ ಎಂದು ಹೇಳಿದ್ದಾನೆ. ಆಗ ಅತ್ತೆ ಕುಸುಮಾ ಬಂದು ಹಾಗಾದ್ರೆ ಪೂಜೇಲಿ ಅಥವಾ ವ್ಯವಸ್ಥೆಯಲ್ಲಿ ಯಾವುದೇ ಏರುಪೇರಾಗಬಾರದು ಎಂದು ಖಡಕ್ ಆಗಿ ಹೇಳುತ್ತಾರೆ. ಇದಕ್ಕೆ ಒಕೆ ಎಂದ ಶ್ರೇಷ್ಠಾ ನೈವೇದ್ಯ ಮಾಡಲು ಹೋಗುತ್ತಾಳೆ.
ಪುರೋಹಿತರೆಲ್ಲ ಬಂದು ಪೂಜೆ ಶುರುಮಾಡುವ ಹೊತ್ತಿಗೆ ಶ್ರೇಷ್ಠಾ ಬಂದು ನೈವೇದ್ಯವನ್ನು ದೇವರ ಎದುರು ಇಡುತ್ತಾಳೆ. ಆದರೆ, ಇಲ್ಲೊಂದು ಮಹಾ ಎಡವಟ್ಟು ಶ್ರೇಷ್ಠಾ ಮಾಡಿಬಿಟ್ಟಿದ್ದಳು. ದೇವರಿಗೆ ನೈವೇದ್ಯವನ್ನು ಅರ್ಪಿಸಲು ಪುರೋಹಿತರು ಪಾತ್ರೆಯ ಮುಚ್ಚಳ ತೆಗೆದಾಗ ಅದರಲ್ಲಿ ಶ್ರೇಷ್ಠಾ ಉಪ್ಪಿಟ್ಟು ಮಾಡಿಟ್ಟಿದ್ದಾಳೆ. ಇದನ್ನು ಕಂಡು ಪುರೋಹಿತರು, ಮನೆಯವರು ಹಾಗೂ ಬಂದ ಅತಿಥಿಗಳೆಲ್ಲ ಶಾಕ್ ಆಗಿದ್ದಾರೆ.
ಇಷ್ಟು ವರ್ಷದಲ್ಲಿ ನಾನು ಎಷ್ಟೋ ಕಡೆ ಪೂಜೆ ಮಾಡಿದ್ದೇನೆ.. ಆದ್ರೆ ಈ ರೀತಿಯ ಎಡವಟ್ಟು ಎಲ್ಲೂ ಆಗಿಲ್ಲ. ನೈವೇದ್ಯಕ್ಕೆ ಉಪ್ಪಿಟ್ಟು ಇಡೋಕೆ ಇದೇನು ಮದುವೆ ಮನೇನಾ?, ಇದು ಪೂಜೆಗೆ, ನನ್ನ ಸತ್ಯನಾರಾಯಣ ದೇವರಿಗೆ ಮಾಡುತ್ತಿರುವ ಅಪಚಾರ. ಇದು ಮರಿಯಾದಸ್ತರ ಮನೇನಾ? ಎಂದು ಕೋಪದಲ್ಲಿ ಪುರೋಹಿತರು ಕೇಳಿದ್ದಾರೆ. ಪುರೋಹಿತರ ಮಾತಿಗೆ ಕೋಪಗೊಂಡ ಶ್ರೇಷ್ಠಾ, ಪುರೋಹಿತರೆ ಏನು ಮಾತಾಡ್ತಾ ಇದ್ದೀರಾ, ನಾನು ಮಾಡಿರೋ ನೈವೇದ್ಯ ಚೆನ್ನಾಗಿಲ್ವಾ ಎಂದು ಹೇಳಿ ಟೇಸ್ಟ್ ನೋಡುತ್ತೇನೆ ಎಂದು ಅದೇ ಪಾತ್ರೆಗೆ ಕೈ ಹಾಕಿ ತಿಂದಿದ್ದಾಳೆ.
ಶ್ರೇಷ್ಠಾಳ ವರ್ತನೆಗೆ ಪುರೋಹಿತರು ಮತ್ತಷ್ಟು ಕೋಪಗೊಂಡಿದ್ದಾರೆ. ಇಂತ ಹುಡುಗಿನ ಸೊಸೆ ಮಾಡ್ಕೊಂಡಿದ್ದೀರಾ ಎಂದು ಹೇಳಿದ್ದಾರೆ. ಭಾಗ್ಯಾ-ಕುಸುಮಾ ಕೂಡ ತಲೆ ಎತ್ತಿ ನೋಡದಂತಾಯಿತು. ಇಂತ ಪೂಜೆ ನಾನು ಮಾಡಲ್ಲ.. ಇನ್ಮುಂದೆ ನಿಮ್ಮ ಮನೆಯ ಯಾವುದೇ ಪೂಜೆ ನಾನು ಮಾಡಲ್ಲ ಎಂದು ಪುರೋಹಿತರು ಹೇಳಿದ್ದಾರೆ. ಆಗ ಭಾಗ್ಯಾ ಮಾತನಾಡಿ, ತಪ್ಪಾಗಿದೆ ಕ್ಷಮಿಸಿ ಪುರೋಹಿತರೆ, ಚಿಕ್ಕ ಹುಡುಹಿ ಗೊತ್ತಿಲ್ಲದೆ ಅಚಾತೂರ್ಯ ನಡೆದು ಹೋಗಿದೆ. ಇನ್ಯಾವತ್ತು ಹೀಗೆ ಆಗೋದಿಲ್ಲ, ಪೂಜೆ ನಿಲ್ಲಿಸೋದು ಬೇಡ. ನೈವೇದ್ಯ ನಾನು ಮಾಡಿಕೊಡುತ್ತೇನೆ. ನನಗೆ ಐದು ನಿಮಿಷ ಸಮಯ ಕೊಡಿ ಎಂದು ಭಾಗ್ಯಾ ಹೇಳಿದ್ದಾಳೆ. ಸದ್ಯ ಭಾಗ್ಯಾ ನೈವೇದ್ಯಾವನ್ನು ಮಾಡುತ್ತಾಳ ಹಾಗೂ ಶ್ರೇಷ್ಠಾಗೆ ಕುಸುಮಾ ಏನು ಮಾಡ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.