ಲಖನೌ : ಕೆಲವೊಮ್ಮೆ ಜನರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಾಟಕ್ಕೆ ಏನೇನೋ ಮಾಡಲು ಹೋಗಿ ಕೊನೆಗೆ ಪ್ರಾಣ ಕಳೆದು ಕೊಳ್ಳುತ್ತಾರೆ.ಇದೀಗ ಸ್ಟಂಟ್ ಮಾಡಲು ಹೋಗಿ ವ್ಯಕ್ತಿಯ ಹುಚ್ಚಾಟಕ್ಕೆ ಪ್ರಾಣವೇ ಹೋಗಿದೆ. ವ್ಯಕ್ತಿಯೊಬ್ಬ ಟ್ರ್ಯಾಕ್ಟರ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ನಡೆದಿದ್ದು ಸದ್ಯ ಈ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ(Viral Video).
ಇಬ್ಬರು ವ್ಯಕ್ತಿಗಳು ಒಟ್ಟಾಗಿ ತಮ್ಮ ಟ್ರ್ಯಾಕ್ಟರ್ ಶಕ್ತಿಯನ್ನು ಪ್ರದರ್ಶಿಸಲು ಸ್ಪರ್ಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದರೆ ಸ್ಪರ್ಧೆಯ ಸಮಯದಲ್ಲಿ, ಚಾಲಕನೊಬ್ಬ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ಪಲ್ಟಿಯಾಗಿ ಬೀಳುತ್ತದೆ. ಬಳಿಕ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ವ್ಯಕ್ತಿ ನೆಲದ ಮೇಲೆ ಬೀಳುತ್ತಾನೆ. ನಿಯಂತ್ರಣ ತಪ್ಪಿ ಈ ಟ್ರ್ಯಾಕ್ಟರ್ ಪಲ್ಟಿಯಾಗಿದೆ.ಟ್ರ್ಯಾಕ್ಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿದ್ದ ಜನರು ಆತನನ್ನು ರಕ್ಷಿಸಲು ಧಾವಿಸುತ್ತಾರೆ. ಆದಾಗ್ಯೂ,ಆತ ಬದುಕಲು ಸಾಧ್ಯವಾಗಲಿಲ್ಲ. ಮೃತನನ್ನು ತೇಜ್ಬೀರ್ ಎಂದು ಗುರುತಿಸಲಾಗಿದೆ.
स्टंटबाजी ने युवक की जान ली। रस्से से बांधकर ट्रैक्टर खींच रहे थे। ट्रैक्टर पलट गया और ड्राइवर मर गया।
— Sachin Gupta (@SachinGuptaUP) January 9, 2025
📍डिबाई, बुलंदशहर (यूपी) pic.twitter.com/FptstfZOcM
ಎರಡೂ ಟ್ರ್ಯಾಕ್ಟರ್‌ಗಳನ್ನು ಹಗ್ಗಕ್ಕೆ ಕಟ್ಟಿ ಚಾಲಕರು ಪರಸ್ಪರ ಟ್ರ್ಯಾಕ್ಟರ್‌ಗಳನ್ನು ತಮ್ಮತ್ತ ಎಳೆದುಕೊಂಡು ಹೋಗುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಸ್ಟಂಟ್ ಮಾಡುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವಿಡಿಯೊ ವೈರಲ್ ಆದ ಬಳಿಕ ಬುಲಂದ್‌ಶಹರ್ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಬ್ಬ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Golden Milk Benefits: ಗೋಲ್ಡನ್ ಮಿಲ್ಕ್ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?