Friday, 10th January 2025

Viral News: ವೇತನ ಹೆಚ್ಚಿಸಲು ನೋ ಎಂದ ಬಾಸ್‌- ಸಿಟ್ಟಿಗೆದ್ದ ಉದ್ಯೋಗಿ ಹೀಗಾ ಮಾಡೋದು?

Viral News

ನವದೆಹಲಿ: ನವದೆಹಲಿಯ ನರೈನಾದ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಬಾಸ್ ಬಳಿ ವೇತನ ಹೆಚ್ಚಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ಬಾಸ್ ಇದಕ್ಕೆ ನಿರಾಕರಿಸಿದ ನಂತರ ಆತ ತನ್ನ ಕಂಪನಿಯಿಂದ ಲಕ್ಷಾಂತರ ರೂಪಾಯಿಗಳನ್ನು ಕದ್ದಿದ್ದಾನೆ ಎಂದು ವರದಿಯಾಗಿದೆ. ಈ ಸುದ್ದಿ ಎಲ್ಲೆಡೆ ವೈರಲ್‌(Viral News) ಆಗಿದೆ.

ಲುಧಿಯಾನ ಮೂಲದ 20 ವರ್ಷದ ಹಸನ್ ಖಾನ್ ಒಂದು ವರ್ಷಕ್ಕೂ ಹೆಚ್ಚು ಕಾಲ ನವದೆಹಲಿಯ ನರೈನಾದ ಬೈಕ್ ಶೋರೂಂನಲ್ಲಿ ತಾಂತ್ರಿಕ ತಜ್ಞರಾಗಿ ಸೇವೆ ಸಲ್ಲಿಸಿದ್ದನು. ಆದರೆ ಅವನ ಬಾಸ್ ಅವನ ಸಂಬಳವನ್ನು ಹೆಚ್ಚಿಸಲಿಲ್ಲ ಎಂದು ಅಸಮಾಧಾನಗೊಂಡಿದ್ದನು. ಹಾಗಾಗಿ ಇತರ ಉದ್ಯೋಗಿಗಳು ಹೊಸ ವರ್ಷದ ಮುನ್ನಾದಿನವನ್ನು ಆಚರಿಸುವಲ್ಲಿ ನಿರತರಾಗಿದ್ದಾಗ ಖಾನ್ ಮಾತ್ರ ತನ್ನ ಬೈಕ್ ಶೋರೂಂನಲ್ಲಿ ಕಳ್ಳತನ ಮಾಡಿ ಹಣದೊಂದಿಗೆ ಪರಾರಿಯಾಗಿದ್ದಾನೆ.

ನಗರದಲ್ಲಿ ಸಂಭ್ರಮಾಚರಣೆ ಮತ್ತು ಗದ್ದಲದ ನಡುವೆ, ಖಾನ್ ಕಚೇರಿಯಿಂದ ರೂ. 6 ಲಕ್ಷ ನಗದು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು (ಎರಡು ದುಬಾರಿ ಕ್ಯಾಮೆರಾಗಳು ಸೇರಿದಂತೆ) ಲೂಟಿ ಮಾಡಿದ್ದಾನೆ. ತನ್ನ ಗುರುತನ್ನು ಮರೆಮಾಚಲು ಹೆಲ್ಮೆಟ್ ಧರಿಸಿ ಡಿಸೆಂಬರ್ 31 ರಂದು ಕಳ್ಳತನ ಮಾಡಿದ್ದಾನೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗುವುದನ್ನು ತಪ್ಪಿಸಲು ಅವನು ಲೈಟ್‍ಗಳನ್ನು ಆಫ್ ಮಾಡಿದ್ದಾನೆ. ಆದರೆ ಪೊಲೀಸರು ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ಸಮಯದಲ್ಲಿ ದೆಹಲಿ ಪೊಲೀಸರು ಶೋರೂಂ ಸುತ್ತಲೂ ಅಳವಡಿಸಲಾದ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:ಜಪಾನ್‍ನಲ್ಲಿ ದಾಖಲೆ ಬೆಲೆಗೆ ಹರಾಜಾದ ಟ್ಯೂನಾ ಮೀನು; ದರ ಕೇಳಿದ್ರೆ ಶಾಕ್‌ ಆಗ್ತೀರಿ

ತಾನು ಕೆಲಸ ಮಾಡುತ್ತಿದ್ದ ಶೋರೂಂನಿಂದ ನಗದು ಮತ್ತು ಎಲೆಕ್ಟ್ರಾನಿಕ್ಸ್ ಕದ್ದ ಆರೋಪ ಹೊತ್ತಿರುವ ಖಾನ್, ಆಡಳಿತ ಮಂಡಳಿ ವೇತನ ಹೆಚ್ಚಳ ನೀಡಲು ನಿರಾಕರಿಸಿದ ನಂತರ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಖಾನ್ ಅವನನ್ನು ಪ್ರಕರಣದಲ್ಲಿ ಶಂಕಿತ ಎಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವನು ಅಪರಾಧದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *