Friday, 10th January 2025

Los Angeles Wildfire: ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು; ಹಾಲಿವುಡ್‌ ಸೆಲೆಬ್ರಿಟಿಗಳ ಮನೆಗಳು ಬೆಂಕಿಗಾಹುತಿ

Los Angeles Wildfire

ವಾಷಿಂಗ್ಟನ್‌ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ ನಗರದ ಪೆಸಿಫಿಕ್‌ ಪ್ಯಾಲಿಸೈಡ್ಸ್‌ ಹಾಗೂ ಪ್ಯಾಸಡೀನಾದ ಈಟನ್‌ ಕೆಯಾನ್‌ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದೆ. ದುರಂತದಲ್ಲಿ 1,500ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಅರಣ್ಯ ಸಮೀಪದ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ 10ಕ್ಕಿಂತಲೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. (Los Angeles Wildfire)

ಪ್ಯಾಲಿಸೈಡ್ಸ್ ನ ಹಾಲಿವುಡ್‌ ಹಿಲ್ಸ್ ಗೆ ಬೆಂಕಿ ಹೊತ್ತಿಕೊಂಡ ಕಾರಣ ಅನೇಕ ಹಾಲಿವುಡ್​ ನಟ (Hollywood Celebs) ನಟಿಯರ ಮನೆಗಳು ಸುಟ್ಟು ಭಸ್ಮವಾಗಿದೆ. ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರೆ ಮತ್ತು ಪಾರಿಸ್ ಹಿಲ್ಟರ್ ಸೇರಿದಂತೆ ಹಲವು ತಾರೆಗಳ ಮನೆ ಬೆಂಕಿಗಾಹುತಿಗಾಗಿದೆ ಎಂದು ತಿಳಿದು ಬಂದಿದೆ.

ನಟ ಬಿಲ್ಲಿ ಕ್ರಿಸ್ಟಲ್ ಅವರು 1979 ರಿಂದ ವಾಸಿಸುತ್ತಿದ್ದ ಪೆಸಿಫಿಕ್ ಪಾಲಿಸೇಡ್ಸ್ ಮನೆಯನ್ನು ಕಳೆದುಕೊಂಡಿದ್ದಾರೆ. ಚಲನಚಿತ್ರ, ದೂರದರ್ಶನ ಮತ್ತು ಸಂಗೀತ ತಾರೆಯರ ನೆಲೆಯಾದ ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿ ಸುಮಾರು 12,000 ಎಕರೆಗಳಷ್ಟು (5,000 ಹೆಕ್ಟೇರ್‌ಗಳು) ಜಾಗ ಬೆಂಕಿಗಾಹುತಿಯಾಗಿದೆ. ಆಸ್ಕರ್‌ನ ನಿರೂಪಕ ಕ್ರಿಸ್ಟಲ್ ಮತ್ತು ಅವರ ಪತ್ನಿ ಜಾನಿಸ್ ಅವರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಬೆಳೆಸಿದ ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿರುವ ಮನೆ ಸುಟ್ಟು ಹೋಗಿದೆ. ನನ್ನ ಮನೆಯ ಒಂದೊಂದು ಇಂಚು ಕೂಡ ಪ್ರೀತಿಯ ಗುರುತುಗಳನ್ನು ಹೊಂದಿತ್ತು ಎಂದು ಜಾನಿಸ್ ಕಣ್ಣೀರಿಟ್ಟಿದ್ದಾರೆ.

ಘಟನೆಯ ಬಳಿಕ ಹಾಲಿವುಡ್ ಹಿಲ್ಸ್​ನಲ್ಲಿ ಆಯೋಜನೆ ಮಾಡಲಾಗಿದ್ದ ಒಟ್ಟು ಮೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನ ಮುಂದೂಡಲಾಗಿದೆ. ಮುಂದಿನ ವಾರ ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಕೂಡ ಮುಂದಕ್ಕೆ ಹಾಕಲಾಗಿದೆ.  ಸದ್ಯ ಕಾಡ್ಗಿಚ್ಚನ್ನು ನಂದಿಸಲಾಗುತ್ತಿದ್ದು, ಲಾಸ್‌ ಎಂಜಲೀಸ್‌ನ ಈಗಿನ ದೃಶ್ಯ ಡ್ರೋನ್‌ ಕಣ್ಣಲ್ಲಿ ಸೆರೆಯಾಗಿದೆ.

ಈ ಸುದ್ದಿಯನ್ನೂ ಓದಿ : ಮಧ್ಯ ಚಿಲಿಯಲ್ಲಿ ಕಾಡ್ಗಿಚ್ಚಿಗೆ 46 ಜನರು ಬಲಿ

Leave a Reply

Your email address will not be published. Required fields are marked *