ಬೆಂಗಳೂರು: 66/11 KV IISC ಸಬ್‌ಸ್ಟೇಷನ್ ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ6 ಉಪ ವಿಭಾಗದ ಹಲವೆಡೆ ಜ.11 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್.ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ.ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕ್ಕಬಳ್ಳಾಪುರ ನಗರದ ಹಲವೆಡೆ ಜ.12 ರಂದು ವಿದ್ಯುತ್ ವ್ಯತ್ಯಯ
ಬೆಂಗಳೂರು: 220/66 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಮಾರ್ಗದಲ್ಲಿನ ಹಲವೆಡೆ ಜ.12 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | Unlock Raghava Movie: ಮಿಲಿಂದ್ ಅಭಿನಯದ ʼಅನ್‌ಲಾಕ್ ರಾಘವʼ ಚಿತ್ರದ ʼಲಾಕ್ ಲಾಕ್ʼ ಹಾಡು ಕೇಳಿ!
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಚಿಕ್ಕಬಳ್ಳಾಪುರ ನಗರ, ಕೈಗಾರಿಕಾ ಪ್ರದೇಶ ಸೇರಿದಂತೆ ತಾಲೂಕಿನ ನಂದಿ, ನಂದಿಕದರಾಸ್, ಬೀಡಗಾನಹಳ್ಳಿ, ನಂದಿಬೆಟ್ಟ, ಸುಲ್ತಾನ್ ಪೇಟೆ, ಸಿಂಗಾಟಕದಿರೇನಹಳ್ಳಿ, ಹೊಸೂರು, ಮುದ್ದೇನಹಳ್ಳಿ, ಕುಪ್ಪಹಳ್ಳಿ, ಪಟ್ರೇನಹಳ್ಳಿ, ಜಾತವಾರ, ಹೊಸಹುಡ್ಯ, ಅಜ್ಜವಾರ, ದಿಬ್ಬೂರು, ಮಂಚನಬಲೆ, ಕೇತೇನಹಳ್ಳಿ, ರೆಡ್ಡಿಗೊಲ್ಲರಹಳ್ಳಿ, ರಾಮದೇವರಗುಡಿ, ಹಾರೋಬಂಡೆ, ಗುಂಡ್ಲಗುರ್ಕಿ, ಜಿಲ್ಲಾಡಳಿತ ಭವನ, ತಿಪ್ಪೇನಹಳ್ಳಿ, ಕಣಜೇನಹಳ್ಳಿ, ಮೈಲಪ್ಪನಹಳ್ಳಿ, ಕಂದವಾರ, ಚದಲಪುರ, ಗವಿಗಾನಹಳ್ಳಿ, ಕಣಿತಹಳ್ಳಿ, ಬೊಮ್ಮನಹಳ್ಳಿ, ಅಗಲಗುರ್ಕಿ, ಹೊನ್ನೇನಹಳ್ಳಿ, ಕೆಳಗಿನ ತೋಟ, ಜಕ್ಕಲಮಡಗು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.