Friday, 10th January 2025

R Ashwin: ‘ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ’- ಆರ್‌ ಅಶ್ವಿನ್‌ ವಿವಾದಾತ್ಮಕ ಹೇಳಿಕೆ!

R Ashwin: 'Hindi is not our national language; it is an official language', says R Ashwin reads the room

ಚೆನ್ನೈ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ್ದ ಬಾರತದ ಮಾಜಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (R Ashwin) ರಾಷ್ಟ್ರೀಯ ಭಾಷೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಅಧಿಕೃತ ಭಾಷೆಯಷ್ಟೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೆ ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನ್‌ ಹೇಳಿಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಖಾಸಗಿ ಕಾಲೇಜೊಂದರ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ ಅಶ್ವಿನ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನ ಮತ್ತು ರಾಷ್ಟ್ರೀಯ ಭಾಷೆಗೆ ಸಂಬಂಧಿಸಿ ವಿಷಯಗಳ ಬಗ್ಗೆ ಮಾತನಾಡಿದ್ದರು. ಇಂಗ್ಲಿಷ್‌ ಅಥವಾ ತಮಿಳಿನಲ್ಲಿ ಯಾರಾದರೂ ಪ್ರಶ್ನೆಯನ್ನು ಕೇಳುತ್ತೀರಾ? ಎಂದಾಗ ವಿದ್ಯಾರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಆದರೆ, ಹಿಂದಿಯಲ್ಲಿ ಪ್ರಶ್ನೆಯನ್ನು ಕೇಳಲು ಯಾರಿಗಾದರೂ ಆಸಕ್ತಿ ಇದೆಯಾ? ಎಂದಾಗ ವಿದ್ಯಾರ್ಥಿಗಳು ಮೌನರಾದರು.

ಭಾರತದಲ್ಲಿನ ಭಾಷೆಯ ಸಮಸ್ಯೆಯ ಬಗ್ಗೆ ಮಾತನಾಡಿದ ಆರ್‌ ಅಶ್ವಿನ್‌, “ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ ಹಾಗೂ ಇದು ಕೇವಲ ಅಧಿಕೃತ ಭಾಷೆಯಷ್ಟೆ; ಇದನ್ನು ನಾನು ಹೇಳಲೇಬೇಕು,” ಎಂದು ಸ್ಷಷ್ಟಪಡಿಸಿದ್ದಾರೆ.

ನಾಯಕತ್ವದ ನೀಡದ ಬಗ್ಗೆ ಅಶ್ವಿನ್‌ ಪ್ರತಿಕ್ರಿಯೆ

ಆರ್‌ ಅಶ್ವಿನ್‌ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಒಮ್ಮೆಯೂ ಭಾರತ ತಂಡವನ್ನು ಮುನ್ನಡೆಸಿಲ್ಲ. ಆದರೆ, ಅಪಾರ ಕ್ರಿಕೆಟ್‌ ಜ್ಞಾನವನ್ನು ಹೊಂದಿರುವ ಅವರನ್ನು ನಾಯಕತ್ವಕ್ಕೆ ಪರಿಗಣಿಸಬಹುದೆಂದು ಹೇಳಲಾಗುತ್ತಿತ್ತು. ಆದರೆ, ಕೊನೆಗೂ ಅವರು ಭಾರತ ತಂಡವನ್ನು ಒಂದೇ ಒಂದು ಪಂದ್ಯದಲ್ಲಿಯೂ ಮುನ್ನಡೆಸಲು ಸಾಧ್ಯವಾಗಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಅಶ್ವಿನ್‌, “ನನ್ನಿಂದ ಸಾಧ್ಯವಿಲ್ಲ ಎಂದು ಯಾರಾದರೂ ಹೇಳಿದಾಗ, ಅದನ್ನು ಸಾಧಿಸಲು ನಾನು ಎಚ್ಚರಗೊಳ್ಳುತ್ತೇನೆ, ಆದರೆ ಅವರು ನನಗೆ ಸಾಧ್ಯವೆಂದು ಹೇಳಿದರೆ, ನಾನು ಆಸಕ್ತಿ ಕಳೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್‌ ಬಳಿಕ ನಿವೃತ್ತಿ ಘೋಷಿಸಿದ್ದ ಅಶ್ವಿನ್‌

ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡ ಬಳಿಕ ಭಾರತದ ಆರ್‌ ಅಶ್ವಿನ್‌ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ತಾವು ದೇಶಿ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು. ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಬೌಲರ್‌ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು ಆಡಿದ 106 ಟೆಸ್ಟ್‌ ಪಂದ್ಯಗಳಿಂದ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಅವರು ಇಷ್ಟೇ ಪಂದ್ಯಗಳಿಂದ 3503 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 6 ಶತಕಗಳು ಹಾಗೂ 14 ಅರ್ಧಶತಕಗಳನ್ನು ಹೊಂದಿದ್ದಾರೆ. ಇನ್ನು ಒಡಿಐ ಮತ್ತು ಟಿ20ಐ ಸ್ವರೂಪಗಳಲ್ಲಿ ಅವರು ಕ್ರಮವಾಗಿ 156 ಮತ್ತು 56 ವಿಕೆಟ್‌ಗಳನ್ನು ಕಿತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Jasprit Bumrah ಬೇಡ, ಭಾರತ ಟೆಸ್ಟ್‌ ತಂಡಕ್ಕೆ ನಾಯಕನನ್ನು ಆರಿಸಿದ ಮೊಹಮ್ಮದ್‌ ಕೈಫ್‌!

Leave a Reply

Your email address will not be published. Required fields are marked *