ನವದೆಹಲಿ : ಬಾರ್ಡರ್ -ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ನಂತರ ಟೀಂ ಇಂಡಿಯಾ ಭಾರತಕ್ಕೆ ಮರಳಿದೆ. ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರಿಸಿದ್ದು, ಅವರ ನಿವೃತ್ತಿಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ. ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ (Virat & Anushka) ದಂಪತಿ ತಮ್ಮ ಇಬ್ಬರು ಮಕ್ಕಳಾದ ವಮಿಕಾ ಹಾಗೂ ಅಕಾಯ್ ಜೊತೆ ನೈನಿತಾಲ್‌ನ ಆಶ್ರಮಕ್ಕೆ (Nainital) ತೆರಳಿದ್ದರು. ಅಲ್ಲಿ ಪ್ರೇಮಾನಂದ್ ಮಹಾರಾಜ್ (Premanand Govind Sharan Ji Maharaj) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಮಕ್ಕಳ ಜೊತೆ ಆಶ್ರಮದಲ್ಲಿ ಕುಳಿತುಕೊಂಡು ಆಶೀರ್ವಚನ ಕೇಳುತ್ತಿದ್ದಾರೆ.
Virat Kohli और Anushka Sharma की पूज्य महाराज जी से क्या वार्ता हुई ? Bhajan Marg pic.twitter.com/WyKxChE8mC
— Bhajan Marg (@RadhaKeliKunj) January 10, 2025
ದಂಪತಿ ಆಶ್ರಮಕ್ಕೆ ಬರುತ್ತಲೇ ಅವರನ್ನು ಸ್ವಾಗತಿಸಲಾಗುತ್ತದೆ. ಅನುಷ್ಕಾ ಶರ್ಮಾ, ತಾವು ಕಳೆದ ಬಾರಿಯೂ ಇಲ್ಲಿಗೆ ಭೇಟಿ ನೀಡಿದ್ದೆವು , ಮನಸ್ಸಿನಲ್ಲಿದ್ದ ಎಷ್ಟೋ ಗೊಂದಲಗಳಿಗೆ ಉತ್ತರ ಸಿಕ್ಕಿದೆ ಎಂದು ಹೇಳುತ್ತಾರೆ.
ವಿರಾಟ್ ಹಾಗೂ ಅನುಷ್ಕಾ ಇಬ್ಬರೂ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದು, ಆಗಾಗ ದೇವಾಲಯ ಕೀರ್ತನೆಗಳಿಗೆ ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗೆ ಕೃಷ್ಣ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು 3-1 ಅಂತರದಲ್ಲಿ ಸೋಲು ಕಂಡಿದೆ. ಭಾರತದ ಇಬ್ಬರು ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ವಿಫಲ ಅನುಭವಿಸಿದ್ದರು.
ವಿರಾಟ್ ವಿವಾದ
ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಅನುಚಿತ ವರ್ತನೆಯಿಂದ ದಂಡವನ್ನು ಕೂಡಾ ಎದುರಿಸಿದ್ದಾರೆ. ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕೊನ್‌ಸ್ಟಾಸ್ ಹಾಗೂ ಕೊಹ್ಲಿ ನಡುವೆ ವಿವಾದ ಆಗಿತ್ತು. ವಿರಾಟ್ ಕೊಹ್ಲಿ ಉದ್ದೇಶಪೂರ್ವಕವಾಗಿ ಸ್ಯಾಮ್ ಕೊನ್‌ಸ್ಟಾಸ್ ಅವರ ಭುಜಕ್ಕೆ ಡಿಕ್ಕಿ ಹೊಡೆದು ವಾಗ್ವಾದ ನಡೆಸಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಮುಂದಿನ ಪಂದ್ಯಗಳಲ್ಲಿ ಕೊಹ್ಲಿಯನ್ನು ಕೈ ಬಿಡಬೇಕು ಎಂಬ ಕೂಗು ಎಲ್ಲೆಡೆ ಕೇಳಿಬಂದಿತ್ತು.
ಈ ಸುದ್ದಿಯನ್ನೂ ಓದಿ : Virat Kohli: ಆಸ್ಟ್ರೇಲಿಯಾದಲ್ಲಿ ವಿಶೇಷ ದಾಖಲೆಯ ಮೇಲೆ ವಿರಾಟ್ ಕೊಹ್ಲಿ ಕಣ್ಣು!