Friday, 10th January 2025

Pat Cummins: ರೋಹಿತ್‌ ಅಲ್ಲ, ವಿಶ್ವದ ನಂ1 ನಾಯಕನನ್ನು ಹೆಸರಿಸಿದ ದಿನೇಶ್ ಕಾರ್ತಿಕ್!

Not Rohit Sharma Or Temba Bavuma! Dinesh Karthik Picks Pat Cummins as ‘No 1 Captain In World’ Right Now

ನವದೆಹಲಿ: ವಿಶ್ವ ಕ್ರಿಕೆಟ್‌ನ ಪ್ರಸಕ್ತ ನಂ 1 ನಾಯಕನ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮಾತಣಾಡಿದ್ದಾರೆ. ಆದರೆ, ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾದ ತೆಂಬಾ ಬವುಮಾ ಅವರನ್ನು ಕಡೆಗಣಿಸಿದ ದಿನೇಶ್‌ ಕಾರ್ತಿಕ್‌, ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ (Pat Cummins) ಅವರನ್ನು ವಿಶ್ವದ ಅಗ್ರ ನಾಯಕ ಎಂದು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿಯಿಂದ ಸಂಪೂರ್ಣವಾಗಿ ಎಲ್ಲ ಮಾದರಿಯ ಕ್ರಿಕೆಟ್‌ನ ನಾಯಕತ್ವದ ಹೊಣೆ ಹೊತ್ತ ರೋಹಿತ್ ಶರ್ಮಾ, ಭಾರತ ತಂಡವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ದಿದ್ದರು. ಅಲ್ಲದೆ 11 ವರ್ಷಗಳ ನಂತರ ಐಸಿಸಿ ಟ್ರೋಫಿ ಬರ ನೀಗಿಸಿದ್ದರು. ಆದರೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಹಾಗೂ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋತಿದ್ದಾರೆ. ಇದರ ಪರಿಣಾಮ ರೋಹಿತ್ ಶರ್ಮಾರ ನಾಯಕತ್ವ ಬದಲಾವಣೆ ಕುರಿತು ಹಲವು ಮಾಜಿ ಕ್ರಿಕೆಟಿಗರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ದಿನೇಶ್ ಕಾರ್ತಿಕ್ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2021ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವ ಹೊಣೆ ಹೊತ್ತ ನಂತರ ಪ್ಯಾಟ್ ಕಮಿನ್ಸ್‌, 2023ರ ಏಕದಿನ ಹಾಗೂ ಟೆಸ್ಟ್ ಚಾಂಪಿಯನ್‌ಷಿಪ್‌ ಗೆದ್ದಿದ್ದಲ್ಲದೆ, ತವರಿನಲ್ಲಿ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದಿದ್ದರು. ಅಲ್ಲದೆ ಸತತ ಎರಡನೇ ಬಾರಿಗೆ ಕಾಂಗರೂ ಪಡೆಯನ್ನು ಐಸಿಸಿ ಡಬ್ಲ್ಯುಟಿಸಿ ಫೈನಲ್‌ಗೆ ತಲುಪಿಸಿದ್ದಾರೆ.

ಪ್ಯಾಟ್ ಕಮಿನ್ಸ್ ನಂ1 ನಾಯಕ

“ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರು ಆಕ್ರಮಣಕಾರಿ ಆಟಗಾರರಾಗಿದ್ದಾರೆ. ಅದನ್ನು ಅವರು ಮಾತನಾಡುವ ಅಥವಾ ಬೇರೆ ಆಟಗಾರರನ್ನು ನಿಂದಿಸುವ ಮೂಲಕ ತೋರಿಸುವುದಿಲ್ಲ. ಬದಲಿಗೆ ತನ್ನ ದೇಹ ಚಲನೆಯಲ್ಲೇ ಎಲ್ಲವನ್ನು ವ್ಯಕ್ತಪಡಿಸುತ್ತಾರೆ,” ಎಂದು ಆರ್ ಸಿಬಿ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

“ಪ್ಯಾಟ್ ಕಮಿನ್ಸ್ ಮೈದಾನದಲ್ಲಿ ಮಾತ್ರವಲ್ಲದೆ ಮಾಧ್ಯಮಗೋಷ್ಠಿಗಳಲ್ಲಿ ಪತ್ರಕರ್ತರನ್ನು ಅಷ್ಟೇ ಉತ್ತಮವಾಗಿ ನಿರ್ವಹಿಸುತ್ತಾರೆ. ಅಲ್ಲದೆ ಪೋಸ್ಟ್ ಮ್ಯಾಚ್ ಮತ್ತು ಪ್ರೀ ಮ್ಯಾಚುಗಳಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಅಲ್ಲದೆ ಅವರಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿದ್ದು ವಿಶ್ವದ ನಂ.1 ನಾಯಕನಾಗಿದ್ದಾರೆ,” ಎಂದು ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದಾರೆ.

ಭಾರತ ವಿರುದ್ಧ ನಡೆದಿದ್ದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ವಿಕೆಟ್ ಟೇಕರ್ (25 ವಿಕೆಟ್) ಆದ ಪ್ಯಾಟ್ ಕಮಿನ್ಸ್‌, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಯಣದಲ್ಲಿ 200 ವಿಕೆಟ್ ಪೂರೈಸಿದ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದಿದಾರೆ.

ಈ ಸುದ್ದಿಯನ್ನು ಓದಿ: IND vs AUS: ʻಜಸ್‌ಪ್ರೀತ್‌ ಬುಮ್ರಾ ಇಲ್ಲದೆ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆʼ-ಸುನೀಲ್‌ ಗವಾಸ್ಕರ್‌!

Leave a Reply

Your email address will not be published. Required fields are marked *