ಭೋಪಾಲ್ : ಮಧ್ಯಪ್ರದೇಶದ (Madhya Pradesh) ಬಿಜೆಪಿಯ ಮಾಜಿ ಶಾಸಕ (BJP Ex MLA) ಮನೆಯೊಬ್ಬರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಡು ಪ್ರಾಣಿಗಳನ್ನು ಸಾಕುವುದು ಅಕ್ರಮ ಎಂದು ತಿಳಿದಿದ್ದರೂ ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ (Harvansh Singh Rathore) ತಮ್ಮ ಮನೆಯಲ್ಲಿ ಮೊಸಳೆಯನ್ನು ಸಾಕಿದ್ದರು. ಶುಕ್ರವಾರ ಸಾಗರದಲ್ಲಿರುವ ಅವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. (Viral News)
ರಾಥೋಡ್ ಮನೆಯ ಆವರಣದಲ್ಲಿ ನಿರ್ಮಿಸಲಾದ ಕೃತಕ ಕೊಳದ ಬಳಿ ಮೊಸಳೆಗಳನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಕೊಳದ ಪರಿಶೀಲನೆ ನಡೆಸಲಾಗುತ್ತಿದ್ದು, ಆಳವಾದ ಕೊಳವಾದ್ದರಿಂದ ಎಷ್ಟು ಮೊಸಳೆಗಳಿವೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
IT Raid at Former BJP MLA's house: 14 KG Gold, 4 Crore cash, and Three Crocodiles Seized.
— Dr Ranjan (@AAPforNewIndia) January 9, 2025
Here the only surprise are the crocodiles. If they did deeper, they may find more gold and cash under the crocodile enclave. pic.twitter.com/BbCW2ApMlU
ಅಕ್ರಮವಾಗಿ ಸಾಕಲಾಗುತ್ತಿರುವ ಮೊಸಳೆಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಉತ್ತರ ಸಾಗರದ ಜಿಲ್ಲಾ ಅರಣ್ಯಾಧಿಕಾರಿ ಚಂದ್ರಶೇಖರ್ ಮಾಧ್ಯಮಗಳಿವೆ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯ ನಂತರ ಮೊಸಳೆಗಳನ್ನು ನೌರದೇಹಿ ಅಭಯಾರಣ್ಯಕ್ಕೆ ಬಿಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಆರೋಪ ಸಾಭೀತಾದರೆ ಮಾಲೀಕರ ವಿರುದ್ಧ ವನ್ಯಜೀವಿ ಕಾನೂನುಗಳ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ತೆರಿಗೆ ವಂಚನೆ ಕುರಿತು ತನಿಖೆ ನಡೆಸಲು ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ರಾಥೋಡ್ ಅವರ ಮನೆ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ ಲೆಕ್ಕಕ್ಕೆ ಸಿಗದ 150 ಕೋಟಿ ರೂ. ಹಾಗೂ 4 ಕೆಜಿ ಚಿನ್ನಾಭರಣ ಪತ್ತೆಯಾಗಿತ್ತು. ಅಧಿಕಾರಿಗಳ ತಂಡ ಕೊಳದಲ್ಲಿದ್ದ ಕೆಲವು ಮೊಸಳೆಗಳನ್ನು ಕೂಡ ಪತ್ತೆ ಮಾಡಿತ್ತು. ಆದರೆ ಆದಾಯ ಇಲಾಖೆ ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಮಾಧ್ಯಮಗಳ ವರದಿಯ ಬಳಿಕ ಎಚ್ಚೆತ್ತ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ : Haryana Govt : ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ವೀಕ್ಷಕರಾಗಿ ನೇಮಕ