Friday, 10th January 2025

Liquor smuggler: ಅಕ್ರಮ ಮದ್ಯ ದಂಧೆ ಬಯಲು- 3000 ಬಾಟಲ್‌ ಲಿಕ್ಕರ್‌ ಸೀಜ್‌- ಮಾಜಿ ರ್‍ಯಾಪಿಡೋ ಚಾಲಕ ಅರೆಸ್ಟ್!

ನವದೆಹಲಿ: ರ್‍ಯಾಪಿಡೋ ಡ್ರೈವರ್‌ ಆಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇದೀಗ ಅಕ್ರಮ ಮದ್ಯ ಸರಬರಾಜು ಆರೋಪದ ಮೇಲೆ ಶುಕ್ರವಾರ(ಜ.10) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ(liquor smuggler)

ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದ ಮಾಜಿ ರ್‍ಯಾಪಿಡೋ ಚಾಲಕನನ್ನು ಸಂಗಮ್ ವಿಹಾರ್‌ನಿಂದ ಬೆಳಗ್ಗೆ 9:20ರ ಸುಮಾರಿಗೆ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಗಣರಾಜ್ಯೋತ್ಸವ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಜಿಲ್ಲಾ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಅಪರಾಧಗಳನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಾಕಷ್ಟು ಕಟ್ಟೆಚ್ಚರ ವಹಿಸಿದ್ದರೂ ರವಿ ಸಿಂಗ್ ಎಂಬ ವ್ಯಕ್ತಿ ತನ್ನ ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುವ ಪ್ರಯತ್ನ ಮಾಡಿದ್ದಾನೆ. ಆದರೆ ಇಂದು ಬೆಳಗ್ಗೆ ಸಂಗಮ್ ವಿಹಾರದಲ್ಲಿ ಪೊಲೀಸರು ಬಲೆಗೆ ಸಿಕ್ಕಿಬಿದ್ದಿದ್ದಾನೆ. ನಂಬರ್‌ ಪ್ಲೇಟ್‌ ಇಲ್ಲದ ಸ್ಕೂಟರ್‌ನಿಂದ ಮೂವರು ರಟ್ಟಿನ ಬಾಕ್ಸ್‌ಗಳನ್ನು ಇಳಿಸುವುದನ್ನು ಪೊಲೀಸರು ಗಮನಿಸಿದ್ದಾರೆ. ಅನುಮಾನದಿಂದ ಬಾಕ್ಸ್‌ ಅನ್ನು ತೆರೆಸಿದ್ದು,ಅದರಲ್ಲಿ ಅಕ್ರಮ ಮದ್ಯಗಳಿದ್ದ ಕಾರಣ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಸ್ಕೂಟರ್‌ನಲ್ಲಿ ಅಕ್ರಮ ಮದ್ಯವಿದ್ದ 3 ಬಾಕ್ಸ್ ಮತ್ತು ಹತ್ತಿರದ ಅರಣ್ಯದಿಂದ 57 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ವೇಳೆ ಆರೋಪಿ ರವಿ ಸಿಂಗ್ ಈ ಹಿಂದೆ ರ್‍ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹಣದ ದುರಾಸೆಯಿಂದಾಗಿ, ಅವರು ಹರಿಯಾಣದಿಂದ ದೆಹಲಿಗೆ ಮದ್ಯವನ್ನು ಸರಬರಾಜು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್

Leave a Reply

Your email address will not be published. Required fields are marked *