ಇಸ್ಲಮಾಬಾದ್: ವಾಹನಗಳು ಕ್ರೇಜ್ ಯಾರಿಗೆ ತಾನೆ ಇಲ್ಲ ಹೇಳಿ. ಕೆಲವರು ಭಯದಿಂದಾಗಿ ವಾಹನಗಳಿಂದ ದೂರ ಉಳಿದರೆ, ಭಯ ಅಂದ್ರೆ ಏನು ಅನ್ನೋ ರೀತಿಯಲ್ಲಿ ವಾಹನ ಚಲಾಯಿಸುವವರು ಹಲವರಿದ್ದಾರೆ. ಇದೀಗ ಅಂತಹ ಕಾರು ಕೇಜ್ ಇರುವ ಅಜ್ಜಿಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ವೃದ್ಧೆಯ ಕಾರ್ ಡ್ರೈವಿಂಗ್ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ. ಇದು ಅತೀ ವೇಗದ ರ್ಯಾಶ್ ಡ್ರೈವಿಂಗ್ ವಿಡಿಯೊ ಅಲ್ಲ, ಬದಲಾಗಿ ಬಹಳ ಆತ್ಮವಿಶ್ವಾಸದಿಂದ, ಜೋಷ್ನಿಂದ ಸಲೀಸಾಗಿ ಕಾರ್ ಡ್ರೈವ್ ಮಾಡುವ ವಿಡಿಯೊ. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.(Viral Video)
ಪಾಕಿಸ್ತಾನದ ವೃದ್ಧ ಮಹಿಳೆಯೊಬ್ಬರು ಜನನಿಬಿಡ ರಸ್ತೆಯಲ್ಲಿ ಬಹಳ ಜಾಗರೂಕರಾಗಿ ಆತ್ಮವಿಶ್ವಾಸದಿಂದ ಕಾರು ಡ್ರೈವ್ ಮಾಡುವ ವಿಧಾನ ಕಂಡು ನೆಟ್ಟಿಗರು ವಾವ್ಹ್ ! ಇದು ಸೊಗಸಾದ ವಿಡಿಯೊ ಅಂತ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನಿ ಡಿಜಿಟಲ್ ಕ್ರಿಯೇಟರ್ ಮಜಿದ್ ಅಲಿ ಅನ್ನುವವರು ಈ ಹೃದಯಸ್ಪರ್ಶಿ ವಿಡಿಯೊ ಹಂಚಿಕೊಂಡಿದ್ದಾರೆ.
ಈ ವಿಡಿಯೊ ನೆಟ್ಟಿಗರ ಮನಸ್ಸು ಗೆದ್ದಿದ್ದು ಸುಮಾರು 21 ಮಿಲಿಯನ್ ವೀಕ್ಷಣೆ ಗಳಿಸಿದೆ.ಈ ವೈರಲ್ ಕ್ಲಿಪ್ನಲ್ಲಿ ಈ ತಾಯಿ ಬಹಳ ಆಕರ್ಷಕವಾಗಿ ಆತ್ಮವಿಶ್ವಾಸ ದಿಂದ ಕಾರು ಡ್ರೈವ್ ಮಾಡಿದ್ದಾರೆ. ಸಾಂಪ್ರದಾಯಿಕ ವಾದ ಕುರ್ತಾ ಸೆಟ್ ಮತ್ತು ತಲೆಯ ಮೇಲೆ ದುಪಟ್ಟಾವನ್ನು ಧರಿಸಿ ಬಹಳ ಮುದ್ದಾಗಿ ಕಂಡು ಬಂದಿದ್ದಾರೆ. ಈ ತಾಳ್ಮೆಯುತ ವಿಡಿಯೊ ಕಂಡು ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ
ಮಜಿದ್ ತನ್ನ ತಾಯಿಯ ಈ ಕ್ಲಿಪ್ಗೆ ತಾಯಿಯು ನಿಮ್ಮ ಮೊದಲ ಸ್ನೇಹಿತೆ, ಅತ್ಯುತ್ತಮ ಮತ್ತು ಶಾಶ್ವತ ಸ್ನೇಹಿತೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ಕಂಡು ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ವೀಕ್ಷಕ, “ಇದು ಸ್ಫೂರ್ತಿದಯಾಕ ವಿಡಿಯೊ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ವಯಸ್ಸು ಕೇವಲ ಒಂದು ಸಂಖ್ಯೆ ಎಂದಿದ್ದಾರೆ. ಮೊತ್ತೊಬ್ಬ ಇವರ ಸೊಬಗು ಮತ್ತು ಆತ್ಮವಿಶ್ವಾಸಕ್ಕೆ ಯಾರು ಸಾಟಿಯಿಲ್ಲ. ನಿಜವಾಗಿಯೂ ಹೃದಯಸ್ಪರ್ಶಿ ಎಂದು ಬರೆದು ಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಈ ವೃದ್ಧನ ಸಾಹಸಕ್ಕೊಂದು ಸಲಾಂ! ಹಗ್ಗದಲ್ಲೇ 1 ಕಿ.ಮೀ. ದೂರ ಜಾರಿದ ವಿಡಿಯೊ ವೈರಲ್