ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeepa) ಕಲಾ ಸೇವೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅವರು ಸದ್ದಿಲ್ಲದೇ ಸಮಾಜಸೇವೆ ಕೆಲಸಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಎಂಬ ಹೊಸ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಲಾಗಿದೆ. ಜೂನಿಯರ್ ಕಿಚ್ಚ ಖ್ಯಾತಿಯ ಸಂಚಿತ್ ಸಂಜೀವ್ ಈ ಫೌಂಡೇಶನ್ ಲೋಗೋ ಹಾಗೂ ಟೀ ಶರ್ಟ್ ಬಿಡುಗಡೆಗೊಳಿಸಿದ್ದಾರೆ.
ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಅನೇಕ ಸಮಾಜಮುಖಿ ಕೆಲಸಗಳಿಗೆ ಮುಂದಾಗಿದೆ. ಆ ಪೈಕಿ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಒದಗಿಸುವ ಮಹತ್ಕಾರ್ಯ ಮುಂದಾಗಿದೆ. ಈಗಾಗಲೇ ಕಿಚ್ಚ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಅದರ ಮುಂದುವರೆದ ಭಾಗವೆಂಬಂತೆ ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಸಂಸ್ಥಾಪಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.
ʼಮ್ಯಾಕ್ಸ್ʼ ಸಿನಿಮಾ ಬೆಳ್ಳಿತೆರೆಯಲ್ಲಿ ಮ್ಯಾಜಿಕ್ ಮಾಡುತ್ತಿರುವ ವೇಳೆ ಕಿಚ್ಚ ಈ ಸಮಾಜಮುಖಿ ಕೆಲಸಕ್ಕೆ ಮುಂದಾಗಿರುವ ನಡೆ ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ‘ಮ್ಯಾಕ್ಸ್’ ಮ್ಯಾಜಿಕ್
ಡಿ. 25ರಂದು ವಿವಿಧ ಭಾಷೆಗಳಲ್ಲಿ ತೆರೆಕಂಡ ಸುದೀಪ್ ಅಭಿನಯದ ʼಮ್ಯಾಕ್ಸ್ʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದೆ. ಇದುವರೆಗೆ ಸುಮಾರು 50 ಕೋಟಿ ರೂ. ಕಲೆ ಹಾಕಿದೆ. ಈ ಮೂಲಕ 2024ರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡ ಸುದೀಪ್‌ಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ (Vijay Karthikeyaa) ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ ʼಮ್ಯಾಕ್ಸ್ʼ ಪಕ್ಕಾ ಮಾಸ್ ಆಗಿ ಮೂಡಿ ಬಂದಿದೆ. ಸುದೀಪ್ ಮತ್ತೊಮ್ಮೆ ಖಾಕಿ ಧರಿಸಿದ್ದು, ಅವರ ಖಡಕ್ ಡೈಲಾಗ್, ಅಭಿಮಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದರೂ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅದನ್ನು ರೋಚಕವಾಗಿ ಕಟ್ಟಿಕೊಡಿರುವ ರೀತಿಯೇ ಗಮನ ಸೆಳೆದಿದೆ.
ಮಿಳಿನ ವರಲಕ್ಷ್ಮೀ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಸುಧಾ ಬೆಳವಾಡಿ ಮತ್ತಿತರರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತದ ಮೋಡಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Max Movie Collection: ‘ಮ್ಯಾಕ್ಸ್’ ಮನೋರಂಜನೆ ನೀಡಿದ ಕಿಚ್ಚ; ಸುದೀಪ್ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?