Saturday, 11th January 2025

Viral Video: ‘ಇದೇ ಕಾರಣಕ್ಕೆ ಎಲ್ಲರೂ ಭಾರತೀಯರನ್ನು ದ್ವೇಷಿಸುತ್ತಾರೆ’ – ಮದುವೆ ಸಂಭ್ರಮದ ಬಗ್ಗೆ ಕೆನಡಾ ಯುವತಿ ಗರಂ ಆಗಿದ್ಯಾಕೆ?

ಭಾರತೀಯ ಮದುವೆಗಳೆಂದರೆ (Indian marriage) ಅಲ್ಲಿ ಸಂಭ್ರಮ, ಗದ್ದಲ, ಗಲಾಟೆ ಎಲ್ಲವೂ ಮನೆ ಮಾಡಿರುತ್ತದೆ. ‘ಇದೇನು ಮದುವೆ ಮನೆಯಾ..?’ ಎಂದು ಗದ್ದಲದ ಮನೆಗಳಿಗೆ ಆಡುಮಾತಿನಲ್ಲಿ ಕೇಳುವುದಿದೆ. ಅದರಲ್ಲೂ ಉತ್ತರ ಭಾರತೀಯರ ಮದುವೆಯೆಂದರೆ ಆ ಸಂಭ್ರಮ, ಮನೆ, ಮಂಟಪ ದಾಟಿ ಬೀದಿಗೂ ಬರುತ್ತದೆ. ಅಂದರೆ ಮೆರವಣಿಗೆ, ಬ್ಯಾಂಡು ಓಲಗ, ನೃತ್ಯ.. ಹೀಗೆ ಎಲ್ಲವೂ ಇರುತ್ತದೆ. ಆದರೆ ವಿದೇಶಿಯರಿಗೆ ಇದೆಲ್ಲಾ ಹೊಸತು. ಇದೀಗ ಕೆನಾಡದಲ್ಲಿ (Canada) ನಡೆದ ಭಾರತೀಯ ಮೂಲದ ವಿವಾಹ ಸಮಾರಂಭವೊಂದು ಇದೀಗ ಸಖತ್ ಸೌಂಡ್ ಮಡುತ್ತಿದೆ. ಅಂದಹಾಗೆ ಈ ಮದುವೆಯಿಂದ ಉಂಟಾದ ಗದ್ದಲ ಗಲಾಟೆ, ಕೆನಡದ ಯವತಿಯೊಬ್ಬಳ ಕಣ್ಣು ಕೆಂಪಾಗಿಸಿದ್ದು, ಆಕೆ ಕಿಡಿ ಕಾರಿರುವ ವಿಡಿಯೋ ಒಂದು ಇದೀಗ ಎಲ್ಲಾ ಕಡೆ ವೈರಲ್ (Viral Video) ಆಗುತ್ತಿದೆ.

ಕೆನಡಾದಲ್ಲಿ ಬಹಳಷ್ಟು ಭಾರತಿಯ ಮೂಲದವರು ವಾಸವಾಗಿದ್ದಾರೆ. ಇಂತಹ ಒಂದು ಭಾರತೀಯ ಕುಟುಂಬದ ವಿವಾಹ ಸಮಾರಂಭದ ಮೆರವಣಿಗೆಯೊಂದು ಕೆನಡಾದ ಬೀದಿಗಳಲ್ಲಿ ಧಾಂ..ಧೂಂ… ಎಂದು ಹೊರಟಿದೆ. ಇದರ ಬಗ್ಗೆ ಅಲ್ಲಿನ ನಿವಾಸಿಯೊಬ್ಬರು ಗರಂ ಆಗಿದ್ದು, ಈ ಮೆರವಣಿಗೆ ಉಂಟುಮಾಡಿದ ‘ಶಬ್ದದʼ ಬಗ್ಗೆ ಕೆನಡಾ ಮೂಲದ ಆ ಯುವತಿ ಅಪಸ್ವರವೆತ್ತಿದ್ದಾರೆ.

ಆಕೆಯ ಪ್ರಕಾರ ಈ ಮದುವೆ ಮೆರವಣಿಗೆಯ ಸದ್ದು ಸಿಕ್ಕಾಪಟ್ಟೆ ಇತ್ತು ಮತ್ತು ಇದರಿಂದ ಆಕೆಗೆ ಸರಿಯಾಗಿ ನಿದ್ರಿಸಲೂ ಸಾಧ್ಯವಾಗಿಲ್ಲವಂತೆ. ಮತ್ತು ಇಂತಹ ಮದುವೆಗಳು ಮತ್ತು ಈ ಮದುವೆ ಮೆರವಣಿಗೆ ಸಾಗಿ ಬರುವ ಪ್ರದೇಶಗಳಲ್ಲಿ ಯಾವ ರಿತಿಯಾಗಿ ಶಬ್ದಮಾಲಿನ್ಯ ಉಂಟಾಗುತ್ತದೆ ಎಂಬುದನ್ನು ಆಕೆ ಸ್ವತಃ ವಿಡಿಯೋ ಮಾಡಿ ತೋರಿಸಿದ್ದಾಳೆ. ಆದ್ರೆ ನಮ್ಗೆ ಇದೆಲ್ಲಾ ಒಂದು ವಿಷ್ಯವೇ ಅಲ್ಲ ಬಿಡಿ..!

ಸ್ಯಡಿ ಕ್ರಾವೆಲ್ (Sadie Crowell) ಎಂಬ ಟಿಕ್ ಟಾಕರ್ (Tik Toker) ಒಬ್ಬಾಕೆಯೇ ಈ ರೀತಿಯಾಗಿ ಭಾರತಿಯ ಮದುವೆ ಗಮ್ಮತ್ತಿನ ಬಗ್ಗೆ ಅಪಸ್ವರ ಎತ್ತಿದ ಯುವತಿ. ಈಕೆ ವಾಸವಿರುವ ಅಪಾರ್ಟ್ಮೆಂಟ್ ನ ಬೀದಿಯಲ್ಲಿ ನಡೆದ ಮದುವೆ ಮೆರವಣಿಗೆ ಬಗ್ಗೆ ಈ ಯುವತಿ ಕಿಡಿಕಾಡಿದ್ದಾಳೆ. ರಾತ್ರಿ ಪೂರ್ತಿ ನಡೆದ ಈ ಮದುವೆ ಮೆರವಣಿಗೆಯ ಶಬ್ದ ಆಕೆಯನ್ನು ಕೆರಳಿಸಿದೆ. ಮತ್ತು ಬೆಳಿಗ್ಗೆ 9 ಗಂಟೆಯಾದ್ರೂ ಈ ಸಂಭ್ರಮ ಮುಗಿಯದೇ ಇದ್ದ ಬಗ್ಗೆ ಆಕೆ ಇನ್ನಷ್ಟು ಗರಂ ಆಗಿದ್ದಾಳೆ.

‘ನಾನಿಲ್ಲಿ ನನ್ನ ಬೆಡ್ ನಲ್ಲಿ ಮಲಗಿದ್ದೇನೆ ಮತ್ತು ರಾತ್ರಿ ಪೂರ್ತಿ ಈ ಮದುವೆ ಸಂಭ್ರಮ ನಡೆದಿದೆ.’ ಎಂದು ಆಕೆ ಮದುವೆ ಮೆರವಣಿಗೆಯ ವಿಡಿಯೋ ತೋರಿಸಿದ್ದಾಳೆ. ‘ಈಗ ಬೆಳಿಗ್ಗೆ 9 ಗಂಟೆ.. ವಾಟ್ ಎ ಫ**!’ ಎಂದು ಆಕೆ ಇದ್ರ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿ ಕಮೆಂಟ್ ಮಾಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Viral Video: ಹುಡುಗಾಟವಲ್ಲ… ಇದು ಬಾಯಲ್ಲಿ ಬೆಂಕಿ ಇಟ್ಟುಕೊಳ್ಳುವ ಆಟ! ಕಂಪೆನಿಯ ಉದ್ಯೋಗಿಗಳಿಗೊಂದು ಸ್ಪೆಷಲ್ ಟಾಸ್ಕ್!

ಈ ಕೆನಡಾದ ಯುವತಿ ತನ್ನ ಮನೆಯ ಕಿಟಕಿಯಿಂದ ಈ ಮದುವೆ ಸಂಭ್ರಮದ ವಿಡಿಯೋ ರೆಕಾರ್ಡ್ ಮಾಡ್ಕೊಂಡು, ಇಲ್ಲಿದ್ದ ಪಂಜಾಬಿ ಡೋಲು ಧಮಾಕವನ್ನು ನೋಡಿ ಆ ಸೌಂಡಿಗೆ ಆಕೆ ಬೆಚ್ಚಿ ಬಿದ್ದಿದ್ದಾಳೆ. ಇದನ್ನು ಆಕೆ ‘ಕೆನಡಿಯನ್ ಗರ್ಲ್’ (Canadian Girl) ಎಂಬ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದೇ ಕಾರಣಕ್ಕೆ ಎಲ್ಲರೂ ಭಾರತೀಯರನ್ನು ದ್ವೇಷಿಸುತ್ತಾರೆ’ ಎಂದು ಆಕೆ ಬರೆದುಕೊಂಡಿದ್ದಾಳೆ.

ಈಕೆಯ ಈ ಸಿಟ್ಟಿನ ವಿಡಿಯೋಗೆ ಮತ್ತು ಭಾರತಿಯರನ್ನು ನಿಂದಿಸಿ ಹಾಕಿದ ಕ್ಯಾಪ್ಷನ್ ಗೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಈಕೆಯ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದರೆ, ಇನ್ನು ಕೆಲವರು ‘ಮದುವೆ ಸಮಾರಂಭವನ್ನು ಸಂಭ್ರಮಿಸುವುದು ಅಪರಾಧವಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *