Friday, 10th January 2025

Mandya News: ಸನಾತನ ಪರಂಪರೆಗೆ ಆಚಾರ್ಯತ್ರಯರ ಕೊಡುಗೆ ಅನನ್ಯ; ಡಾ. ಎಂ.ವಿ. ವೆಂಕಟೇಶ್

Mandya News

ಮೇಲುಕೋಟೆ: ಭಾರತೀಯ ಸನಾತನ ಪರಂಪರೆಗೆ ಆಚಾರ್ಯತ್ರಯರಾದ ಶ್ರೀ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ. ವೆಂಕಟೇಶ್ ಬಣ್ಣಿಸಿದರು. ಮೇಲುಕೋಟೆಯ (Mandya News) ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಂಥ ಲೋಕಾರ್ಪಣೆ, ವಿದ್ವತ್ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಚಾರ್ಯ ಶ್ರೀ ರಾಮಾನುಜರ ಜಾಚಾರ್ಯರ ಕರ್ಮಭೂಮಿ ಮೇಲುಕೋಟೆ. ಈ ದಿವ್ಯಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಜರಾಯಿ ಸಂಕಲ್ಪ ಮಾಡಿದೆ. ಅದನ್ನು ಶೀಘ್ರವೇ ಅನುಷ್ಠಾನಗೊಳಿಸಲಿದೆ ಎಂದವರು ಭರವಸೆ ನೀಡಿದರು. ವಿಧಾನಸೌಧದ ಪಕ್ಕದಲ್ಲೇ ಕರ್ನಾಟಕದ ಎಲ್ಲ ದೇವಾಲಯಗಳ ಮಾಹಿತಿ ನೀಡುವ ಹೊಯ್ಸಳ ಭವನ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಆಶಾದಾಯಕವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru International Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ

ಮೇಲುಕೋಟೆಯ ಶ್ರೀ ರಾಮಾನುಜ ಸಂಸ್ಕೃತ ಸಂಶೋಧನಾ ಸಂಸ್ಥೆ ಸಂಸ್ಕೃತ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮಹೋನ್ನತ ಕೊಡುಗೆ ನೀಡುತ್ತಿದೆ. ಪುರಾತನ ತಾಳೆಗರಿ ಸಂಗ್ರಹಿಸಿ ಡಿಜಿಟಲೀಕರಣ ಮಾಡುವ ಜತೆಗೆ ಹಲವು ಗ್ರಂಥಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸಂಶೋಧನಾ ಆಸಕ್ತ ಯುವಜನರಿಗೆ ನೆಲೆಯಾಗಿದೆ. ಸಂಸ್ಕೃತವನ್ನು ಸರಳವಾಗಿ ಕಲಿಯಲು ವಿಶೇಷ ಯೋಜನೆ ರೂಪಿಸಿರುವುದು ಮಾದರಿಯಾಗಿದೆ ಎಂದು ಡಾ.ಎಂ.ವಿ. ವೆಂಕಟೇಶ್ ಹೇಳಿದರು.

ಪ್ರಶಸ್ತಿ ಪ್ರದಾನ

ಧಾರ್ಮಿಕ ಮತ್ತು ಸಾಂಪ್ರದಾಯಿಕ ರಂಗಕ್ಕೆ ವಿಶೇಷ ಸೇವೆ ಮಾಡಿದ ಸ್ಥಾನೀಕಂ ನರಸಿಂಹಾಚಾರ್, ವಿದ್ವಾನ್ ಎಂ.ಕೆ. ಶ್ರೀನಿವಾಸ ಅಯ್ಯಂಗಾರ್, ವಿದ್ವಾನ್ ಆರ್. ಕೃಷ್ಣಯ್ಯಂಗಾರ್ ಅವರಿಗೆ ಕೊಡಲಾದ ಮರಣೋತ್ತರ ಕೈಂಕರ್ಯನಿಧಿ ಪ್ರಶಸ್ತಿಯನ್ನು ಶ್ರೀರಾಮನ್. ಎಂ.ಕೆ.ರಾಮಸ್ವಾಮಿ ಅಯ್ಯಂಗಾರ್ ಸ್ವೀಕರಿಸಿದರು.

ಈ ಸುದ್ದಿಯನ್ನೂ ಓದಿ | Fund Release: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅಧಿಕಾರಿ, ಶಿಕ್ಷಕರ ವೇತನಕ್ಕಾಗಿ 628.65 ಕೋಟಿ ಅನುದಾನ ಬಿಡುಗಡೆ

ಗ್ರಂಥ ಲೋಕಾರ್ಪಣೆ

ರಾಮಾನುಜರ ಶ್ರೀಭಾಷ್ಯ ಕಿರುಪರಿಚಯ, ಹಸ್ತಪ್ರತಿ ಸೂಚಿಪಟ್ಟಿ ಸ್ತೋತ್ರ-15, ತತ್ವದೀಪ 2023 ಗ್ರಂಥಗಳನ್ನು ಇದೇ ಸಂದರ್ಭದಲ್ಲಿ ಅತಿಥಿಗಳು ಲೋಕಾರ್ಪಣೆ ಮಾಡಿದರು. ರಾಜ್ಯಮಟ್ಟದ ದತ್ತಿನಿಧಿ ಸಂಸ್ಕೃತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಕುಲಸಚಿವ ಕುಮಾರ್, ಸಂಸ್ಕೃತ ವಿವಿ ಕುಲಸಚಿವ ವಿಶ್ವನಾಥ ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ವಿದುಷಿ ರಮಾ ಶ್ರೀನಿವಾಸನ್, ಡಾ.ಎ. ಪುಷ್ಪಾ ಅಯ್ಯಂಗಾರ್, ಡಾ.ಎ. ವೈದೇಹಿ ಅಯ್ಯಂಗಾರ್, ಜಯತೀರ್ಥ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *