Friday, 10th January 2025

IND vs ENG: ಇಂಗ್ಲೆಂಡ್‌ ಟಿ20ಐ ಸರಣಿಗೆ ಸಂಜು ಸ್ಯಾಮ್ಸನ್‌-ಇಶಾನ್‌ ಕಿಶನ್‌ ನಡುವೆ ಫೈಟ್‌!

IND vs ENG: Sanju Samson & Ishan Kishan to fight for keeper’s spot in 5 Matches T20I Series against ENG

ನವದೆಹಲಿ: ಆಸ್ಟ್ರೇಲಿಯಾ ಎದುರು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-3 ಅಂತರದಲ್ಲಿ ಸೋಲು ಅನುಭವಿಸಿದ ಭಾರತ ತಂಡ, ಇದೀಗ ಇಂಗ್ಲೆಂಡ್‌ ವಿರುದ್ದ ವೈಟ್‌ ಬಾಲ್‌ ಸರಣಿಗಳಿಗೆ (IND vs ENG) ಸಜ್ಜಾಗುತ್ತಿದೆ. ಇದಾದ ಬಳಿಕ ಟೀಮ್‌ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಆಡಲಿದೆ. ಇದರ ನಡುವೆ ಇಂಗ್ಲೆಂಡ್‌ ವಿರುದ್ಧದ ವೈಟ್‌ ಬಾಲ್‌ ಸರಣಿಯಲ್ಲಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಇದೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಹಾಗೂ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದ ಇಶಾನ್‌ ಕಿಶನ್‌ ಅವರು ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದು, ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳಬಹುದು. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಆಯ್ಕೆಯಾಗಲು ಬಯಸುತ್ತಿರುವ ಸಂಜು ಸ್ಯಾಮ್ಸನ್‌ಗೆ ಇಶಾನ್‌ ಕಿಶನ್‌ ಪ್ರಬಲ ಪೈಪೋಟಿ ನೀಡಲಿದ್ದಾರೆ.

ಸಂಜು ಸ್ಯಾಮ್ಸನ್‌ or ಇಶಾನ್‌ ಕಿಶನ್‌?

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಮುಗಿಸಿಕೊಂಡು ಬಂದಿರುವ ರಿಷಭ್‌ ಪಂತ್‌ಗೆ ಇಂಗ್ಲೆಂಡ್‌ ಟಿ20 ಸರಣಿಯಲ್ಲಿ ವಿಶ್ರಾಂತಿ ನೀಡಬಹುದು. ಮತ್ತೊಂದು ಕಡೆ ಇಂಗ್ಲೆಂಡ್‌ ವೈಟ್‌ ಬಾಲ್‌ ಸರಣಿಗಳಲ್ಲಿ ಕೆಎಲ್‌ ರಾಹುಲ್‌ ಸಂಪೂರ್ಣ ವಿಶ್ರಾಂತಿ ನೀಡಬಹುದು ಆದರೆ. ಒಡಿಐ ಸರಣಿಗೆ ರಿಷಭ್‌ ಪಂತ್‌ ಮರಳಬಹುದು. ಅಂದ ಹಾಗೆ ಟಿ20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್‌ ಮತ್ತು ಇಶಾನ್‌ ಕಿಶನ್‌ ನಡುವೆ ಪೈಪೋಟಿ ನಡೆಯಲಿದೆ.

ಇಶಾನ್‌ ಕಿಶನ್‌ ಅವರನ್ನು ಈ ಹಿಂದೆ ಕೇಂದ್ರ ಗುತ್ತಿಗೆಯಿಂದ ಕೈ ಬಿಡಲಾಗಿತ್ತು. ಇದೀಗ ಅವರು ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್‌ ಅವರು ಕೊನೆಯ ಟಿ20ಐ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. ತಾನು ಆಡಿದ ಕೊನೆಯ ಐದು ಟಿ20ಐ ಪಂದ್ಯಗಳಲ್ಲಿ ಸಂಜು, ಮೂರು ಶತಕಗಳನ್ನು ಬಾರಿಸಿದ್ದಾರೆ.

ಇಶಾನ್‌-ಸಂಜು ಟಿ20ಐ ಅಂಕಿಅಂಶಗಳು

ಇಶಾನ್‌ ಕಿಶನ್‌ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಆಡಿದ 32 ಪಂದ್ಯಗಳಿಂದ 25.67ರ ಸರಾಸರಿಯಲ್ಲಿ 796 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು 124.37ರ ಸ್ಟ್ರೈಕ್‌ ರೇಟ್‌ನಲ್ಲಿ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಸಂಜು ಸ್ಯಾಮ್ಸನ್‌ ಆಡಿದ 37 ಪಂದ್ಯಗಳಿಂದ 27.93ರ ಸರಾಸರಿ ಮತ್ತು 155.17ರ ಸ್ಟ್ರೈಕ್‌ ರೇಟ್‌ನಲ್ಲಿ 810 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು 3 ಶತಕಗಳು ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಈ ಇಬ್ಬರ ನಡುವೆ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಪೈಪೋಟಿ ನಡೆಯಲಿದೆ. ಆದರೆ, ಸಂಜು ಸ್ಯಾಮ್ಸನ್‌ ಕಳೆದ ಐದು ಪಂದ್ಯಗಳಲ್ಲಿ ತೋರಿರುವ ಪ್ರದರ್ಶನದಿಂದ ಅವರು ಇಶಾನ್‌ ಕಿಶನ್‌ ಅವರನ್ನು ಹಿಂದಿಕ್ಕಬಹುದು. ಅಲ್ಲದೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ಒಳ್ಳೆಯ ಅವಕಾಶ ಸಿಗಲಿದೆ.

ಈ ಸುದ್ದಿಯನ್ನು ಓದಿ: IND vs SA: ತಮ್ಮ ಬ್ಯಾಟಿಂಗ್‌ ಯಶಸ್ಸಿನ ಶ್ರೇಯವನ್ನು ಸೂರ್ಯಗೆ ಸಮರ್ಪಿಸಿದ ಸಂಜು ಸ್ಯಾಮ್ಸನ್‌!

Leave a Reply

Your email address will not be published. Required fields are marked *