Friday, 10th January 2025

Narendra Modi Podcast: ಜಾರ್ಜಿಯಾ ಮೆಲೋನಿ ಜತೆಗಿನ ಮೀಮ್ಸ್‌; ಪ್ರಧಾನಿ ಮೋದಿ ಹೇಳಿದ್ದಿಷ್ಟು

Narendra Modi Podcast

ನವದೆಹಲಿ: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Italy prime Minister Giorgia Meloni) ಜತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ನಡುವಿನ ಮೀಮ್ಸ್, ಟ್ರೋಲ್ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿರುತ್ತದೆ. ಇಬ್ಬರ ಹೆಸರು ಸೇರಿಸಿ ʼಮೆಲೋಡಿʼ ಎಂದೇ ನೆಟ್ಟಿಗರು ಕರೆಯುತ್ತಾರೆ. ಈ ಬಗ್ಗೆ ಜೆರೋಧಾ (Zerodha) ಸಂಸ್ಥೆಯ ಸಹ-ಸಂಪ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರು ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋದಿ, ಮೀಮ್ಸ್, ಆನ್‌ಲೈಟ್ ಚಾಟ್, ಟ್ರೋಲ್‌ಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಸಮಯವನ್ನೂ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದ್ದಾರೆ (Narendra Modi Podcast).

ʼʼಪಿಜ್ಜಾ ನನ್ನ ನೆಚ್ಚಿನ ತಿಂಡಿ. ಇದರ ಮೂಲ ಇಟಲಿ. ಇಟಲಿಯ ಬಗ್ಗೆ ನಿಮಗೆ ಸಾಕಷ್ಟು ತಿಳಿದಿದೆ ಎಂದು ಜನರು ಹೇಳುತ್ತಾರೆ. ನೀವು ಅದರ ಬಗ್ಗೆ ಏನಾದರೂ ಹೇಳಲು ಬಯಸುವಿರಾ?” ಎಂದು ನಿತಿನ್‌ ಕಾಮತ್‌ ಪ್ರಶ್ನಿಸಿದ್ದಾರೆ. ಜತೆಗೆ ʼʼಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನಿಮ್ಮ ಮೀಮ್ಸ್‌ಗಳನ್ನು ನೋಡಿದ್ದೀರಾ?ʼʼ ಎಂದೂ ಕಾಮತ್ ಕೇಳಿದ್ದಾರೆ. “ಇವು ಇಂದಿನ ಜಗತ್ತಿನಲ್ಲಿ ಸಾಮಾನ್ಯ ವಿಷಯ” ಎಂದು ಮೋದಿ ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅದಾಗ್ಯೂ ಅಂತಹ ವಿಷಯಗಳಿಗೆ ಸಮಯವನ್ನು ವ್ಯರ್ಥ ಮಾಡುವುದಿಲ್ಲ ಎಂದೂ ತಿಳಿಸಿದ್ದಾರೆ.

ಮೆಲೋಡಿ ಮೀಮ್ಸ್‌

2024ರ ಜೂನ್‌ನಲ್ಲಿ ಸ್ಪೇನ್‌ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ನಾಯಕರು ಜತೆಯಾಗಿ ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದರು. ಅದಾದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼ (ಮೆಲೋನಿ + ಮೋದಿ) ಮೀಮ್ಸ್‌ ವೈರಲ್‌ ಆಗಿದ್ದವು. ಅಲ್ಲದೆ ಮೆಲೋನಿ ಅವರು ಮೋದಿಯೊಂದಿಗಿನ ಸೆಲ್ಫಿ ವಿಡಿಯೊ ಹಂಚಿಕೊಂಡು, “ಮೆಲೋಡಿ ತಂಡದಿಂದ ಹಲೋ” ಎಂದು ಬರೆದುಕೊಂಡಿದ್ದರು.

ನಾನೇನೂ ಫುಡಿ ಅಲ್ಲ

ಇದೇ ವೇಳೆ ಮೋದಿ ಅವರು ತಾವು ಫುಡಿ ಅಲ್ಲ ಎಂದೂ ತಿಳಿಸಿದ್ದಾರೆ. ʼʼನಾನು ಫುಡಿ ಅಲ್ಲ. ಯಾವುದೇ ದೇಶದಲ್ಲಿ ಯಾವ ಆಹಾರ ನೀಡಿದರೂ ಸಂತೋಷದಿಂದ ಸೇವಿಸುತ್ತೇನೆ. ಸಸ್ಯಾಹಾರ ಆಗಿರಬೇಕಷ್ಟೆ. ನನ್ನನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ಮೆನು ಕಾರ್ಡ್‌ ಕೊಟ್ಟು ಆಹಾರ ಆರ್ಡರ್‌ ಮಾಡಿ ಎಂದರೆ ಆಯ್ಕೆ ಮಾಡಲು ಕಷ್ಟವಾಗುತ್ತದೆʼʼ ಎಂದು ವಿವರಿಸಿದ್ದಾರೆ.

ಆರ್‌ಎಸ್‌ಎಸ್‌ನ ಆರಂಭಿಕ ದಿನಗಳಲ್ಲಿ ವಿವಿಧ ಕಡೆಗಳಿಗೆ ತೆರಳಿದಾಗ ಆಹಾರ ವಿಚಾರದಲ್ಲಿ ತಾವು ಅನುಭವಿಸಿದ ಫಜೀತಿಯನ್ನೂ ವಿವರಿಸಿದ್ದಾರೆ. ʼʼಆಗೆಲ್ಲ ಹೋಟೆಲ್‌ಗೆ ತೆರಳಿದಾಗ ಯಾವ ಆಹಾರ ಆರ್ಡರ್ ಮಾಡಬೇಕು ಎನ್ನುವುದು ತಿಳಿಯುತ್ತಿರಲಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಆಹಾರ ಆರ್ಡರ್ ಮಾಡಲು ಹಿರಿಯ ನಾಯಕ ಅರುಣ್ ಜೇಟ್ಲಿ ಸಹಾಯ ಪಡೆಯುತ್ತಿದ್ದೆʼʼ ಎಂದು ಮೋದಿ ಹೇಳಿದ್ದಾರೆ. ʼʼನಾನು ಆರ್ಡರ್ ಮಾಡಿದ ಆಹಾರ ಹಾಗೂ ನನಗೆ ಕೊಟ್ಟಿರುವ ಆಹಾರ ಎರಡೂ ಒಂದೇ ಎನ್ನುವುದನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸʼʼ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ಚಂದ್ರಯಾನ-2 ಸೋಲಿನಿಂದ ಹೊರ ಬಂದಿದ್ದು ಹೇಗೆ? ಪ್ರಧಾನಿ ಮೋದಿ ವಿವರಿಸಿದ್ದು ಹೀಗೆ

Leave a Reply

Your email address will not be published. Required fields are marked *