ರಾಯಪುರ: ಒಂದು ವಾರದ ಹಿಂದೆಯಷ್ಟೇ ಪತ್ರಕರ್ತ ಮುಖೇಶ್ ಚಂದ್ರಕರ್ ಬರ್ಬರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೊರ್ವ ಪತ್ರಕರ್ತನ ಪೋಷಕರು ಮತ್ತು ಸಹೋದರನ ಭೀಕರ ಕೊಲೆಯಾಗಿದೆ. ಛತ್ತೀಸ್‌ಗಢದ ಸೂರಜ್‌ಪುರದಲ್ಲಿ ಈ ಘಟನೆ ನಡೆದಿದ್ದು(Chhattisgarh Horror), ಸಂತೋಷ್ ಕುಮಾರ್ ಟೊಪ್ಪೊ(Santosh Kumar Toppo) ಎಂಬ ಪತ್ರಕರ್ತನ ಕುಟುಂಬದವನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
Aaj Tak journalist's family hacked to death over property disputehttps://t.co/QUiYfZbYWQ
— IndiaTodayFLASH (@IndiaTodayFLASH) January 11, 2025
ಏನಿದು ಘಟನೆ?
ಛತ್ತೀಸ್ ಗಢದ ಸೂರಜ್‌ಪುರದಲ್ಲಿ(Surajpura) ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಜ್ ತಕ್ ಜಿಲ್ಲಾ ವರದಿಗಾರ ಸಂತೋಷ್ ಕುಮಾರ್ ಟೊಪ್ಪೊ(Santosh Kumar Toppo) ಅವರ ಪೋಷಕರು ಮತ್ತು ಸಹೋದರ ಶುಕ್ರವಾರ (ಜ.10) ಮಧ್ಯಾಹ್ನ ಹತ್ಯೆಗೀಡಾಗಿದ್ದಾರೆ.
ಶುಕ್ರವಾರ, ಸಂತೋಷ್ ಟಿಪ್ಪೊ ಅವರ ಪೋಷಕರಾದ ಮಾಘೆ ಟೊಪ್ಪೊ (57) ಮತ್ತು ಬಸಂತಿ ಟೊಪ್ಪೊ (55) ಮತ್ತು ಅವರ ಸಹೋದರ ನರೇಶ್ ಟೊಪ್ಪೊ (30) ಕೃಷಿ ಕೆಲಸ ಮಾಡಲು ತಮ್ಮ ಜಮೀನಿನತ್ತ ಹೋಗಿದ್ದರು. ಜಗನ್ನಾಥಪುರ ಪ್ರದೇಶದಲ್ಲಿರುವ ಈ ಭೂಮಿ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಅವರು ಜಮೀನಿನ ಬಳಿ ಕೆಲಸ ಮಾಡುವಾಗ ಆರರಿಂದ ಏಳು ಮಂದಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದಿದ್ದಾರೆ.
ಆರಂಭದಲ್ಲಿ ಜೋರು ಗಲಾಟೆಯಾಗಿದ್ದು, ನಂತರ ಹಿಂಸಾಚಾರಕ್ಕೆ ತಿರುಗಿದೆ. ಆರೋಪಿಗಳು ಕೊಡಲಿ ಮತ್ತು ಕೋಲುಗಳನ್ನು ಬಳಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಲೆಗೆ ತೀವ್ರ ಪೆಟ್ಟಾಗಿ ಬಸಂತಿ ಮತ್ತು ನರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಾಘೆ ಅವರನ್ನು ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಸಂಬಂಧ ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿದ್ದು,ತನಿಖೆ ಪ್ರಾರಂಭಿಸಿದ್ದಾರೆ. ಶೀಘರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ಗುತ್ತಿಗೆದಾರನೊಬ್ಬನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರಣಕ್ಕೆ ಪತ್ರಕರ್ತ ಮುಖೇಶ್ ಚಂದ್ರಕರ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕರ್ ಅವರ ಶವ ಜನವರಿ 3 ರಂದು ಗುತ್ತಿಗೆದಾರನ ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ನನ್ನು ಜನವರಿ 5ರಂದು ಪೊಲೀಸರು ಬಂಧಿಸಿದ್ದರು.
ಮುಖೇಶ್ ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್‌ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದರು. ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳ ಬೇಟೆಗಿಳಿದ ಪೊಲೀಸರು ಹೈದರಾಬಾದ್‌ನಲ್ಲಿ ಸುರೇಶ್ ಚಂದ್ರಕಾರ್‌ನನ್ನು ಹಾಗೂ ದಿಲ್ಲಿಯಲ್ಲಿ ರಿತೇಶ್‌ನನ್ನು ಬಂಧಿಸಿದ್ದರು. ಶವವನ್ನು ಎಸೆಯಲು ಸಹಾಯ ಮಾಡಿದ ಕಾರ್ಮಿಕನೊಬ್ಬನನ್ನು ಕೂಡ ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?