Saturday, 11th January 2025

Physical Abuse: ಆಘಾತಕಾರಿ ಘಟನೆ! ಬಾಲಕಿ ಮೇಲೆ 4 ವರ್ಷಗಳಲ್ಲಿ 64 ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯ

Physical Abuse

ತಿರುವನಂತಪುರಂ: ಕೇರಳದ(Kerala) ಪತ್ತನಂತಿಟ್ಟದ ಎಳವುಂತಿಟ್ಟದಲ್ಲಿ ಬಾಲಕಿ ಮೇಲೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 64ಕ್ಕೂ ಹೆಚ್ಚು ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಶಾಕಿಂಗ್‌ ಘಟನೆಯೊಂದು ವರದಿಯಾಗಿದೆ. ಬಾಲಕಿ ತನ್ನ ಮೇಲಾಗಿರುವ ದೌರ್ಜನ್ಯವನ್ನು ಮಕ್ಕಳ ಕಲ್ಯಾಣ ಮಂಡಳಿಗೆ ಬಹಿರಂಗಪಡಿಸಿದ್ದಾಳೆ. ದೂರಿನ ಆಧಾರದ ಮೇಲೆ ಎಲವುಂತಿಟ್ಟ ಪೊಲೀಸರು 40 ಜನರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ(Physical Abuse)

ದೂರಿನ ಪ್ರಕಾರ, ಬಾಲಕಿಗೆ 13 ವರ್ಷ ವಯಸ್ಸು ಆದಾಗಿನಿಂದ ಅಂದರೆ ಕಳೆದ ನಾಲ್ಕೈದು ವರ್ಷಗಳಲ್ಲಿ 64ಕ್ಕೂ ಹೆಚ್ಚು ಜನರು ಲೈಂಗಿಕವಾಗಿ ದೌರ್ಜನ್ಯ ಎಸಗಿ ಶೋಷಣೆ ಮಾಡಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ 62 ಆರೋಪಿಗಳಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳ ವಿರುದ್ಧ ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಮೇಲಿನ ಲೈಂಗಿಕ ಶೋಷಣೆ ಪ್ರಕರಣದಲ್ಲಿ ತನಿಖೆ ಪ್ರಾರಂಭಿಸಿದ್ದೇವೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೀಡಾಪಟುವಾಗಿರುವ ಬಾಲಕಿಯನ್ನು ಕ್ರೀಡಾ ಶಿಬಿರಗಳು ಸೇರಿದಂತೆ ಪತ್ತನಂತಿಟ್ಟದ ವಿವಿಧ ಸ್ಥಳಗಳಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ವರದಿಯಾಗಿದೆ. ಆರೋಪಿಗಳಲ್ಲಿ ಹೆಚ್ಚಿನವರು ತರಬೇತುದಾರರು, ಸಹಪಾಠಿಗಳು ಮತ್ತು ಸ್ಥಳೀಯ ನಿವಾಸಿಗಳು ಎನ್ನಲಾಗಿದೆ.

ಇದೀಗ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ನೆಟ್ಟಿಗರು ದೌರ್ಜನ್ಯ ಎಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “64 ಮಂದಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದಿಂದ ಆ ಮಗು ಎಷ್ಟು ನೊಂದಿರಬೇಕು,? ಆ ಮಗುವಿಗೆ ತಂದೆ ತಾಯಿ ಇಲ್ಲವೆ, ಅಲ್ಲಿ ಯಾರೂ ಜನಗಳೇ ಇಲ್ಲವೇ? ಈ 64 ಮಂದಿ ದೌರ್ಜನ್ಯ ಮಾಡಿರುವುದು ನಿಜವೇ ಆಗಿದ್ದರೆ, ಆ ದುರುಳರ ಗುಪ್ತಾಂಗವನ್ನು ನುರಿತ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಬೇಕು. ಅವರ ಪ್ರತಿದಿನ ಒಂದೊಂದು ಬೆರಳುಗಳನ್ನು ಕತ್ತರಿಸಬೇಕು, ಕೊನೆಗೆ ಸಾರ್ವಜನಿಕವಾಗಿ ಗಲ್ಲಿಗೆ ಏರಿಸಲು ನ್ಯಾಯಾಲಯಲ್ಲಿ ಆದೇಶ ಹೊರಡಿಸಬೇಕು” ಎಂದು ನೆಟ್ಟಿಗರೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಾಗಿರುವ ದೌರ್ಜನ್ಯಕ್ಕೆ ಹಲವರು ಮರುಗಿದ್ದಾರೆ.

ಈ ಸುದ್ದಿಯನ್ನೂ ಓದಿ:Physical Abuse: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ; ಕಲಬುರಗಿಯಲ್ಲಿ ಹೀನ ಕೃತ್ಯ!

Leave a Reply

Your email address will not be published. Required fields are marked *