ಮುಂಬೈ: ಮಹಾರಾಷ್ಟ್ರದ (Maharashtra) ಮಾಲ್ವಾನ್‌ನಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ (Shivaji Maharaj Statue) 28 ಅಡಿ ಎತ್ತರದ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದ 39 ವರ್ಷದ ಶಿಲ್ಪಿ ಮತ್ತು ಜೆಜೆ ಸ್ಕೂಲ್ ಆಫ್ ಆರ್ಟ್‌ನ ಮಾಜಿ ವಿದ್ಯಾರ್ಥಿ ಜಯದೀಪ್ ಆಪ್ಟೆಗೆ (Jaydeep Apte) ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈ ಪತ್ರಿಮೆ ಕಳೆದ ಆಗಸ್ಟ್‌ನಲ್ಲಿ ಕುಸಿದು ಬಿದ್ದಿತ್ತು.
ವಾದ ಪ್ರತಿ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎನ್‌ಆರ್ ಬೋರ್ಕರ್ ಜಯದೀಪ್ ಅವರಿಗೆ 25 ಸಾವಿರ ರೂ. ವೈಯಕ್ತಿಕ ಬಾಂಡ್ ಒದಗಿಸಿದ ನಂತರ ಜಾಮೀನು ಮಂಜೂರು ಮಾಡಿದರು.
35 ಅಡಿ ಎತ್ತರದ ಪ್ರತಿಮೆಯು ಆಗಸ್ಟ್ 26, 2024 ರಂದು ಕುಸಿದುಬಿದ್ದಿತ್ತು. ಇದನ್ನು ಮಾಲ್ವಾನ್ ಕೋಟೆಯಲ್ಲಿ ನೌಕಾ ದಿನಾಚರಣೆಯ ಅಂಗವಾಗಿ 2023 ರ ಡಿಸೆಂಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಅಕ್ಟೋಬರ್ 1 ರಂದು ಓರೋಸ್‌ನ ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಆಪ್ಟೆ ವಕೀಲ ಗಣೇಶ್ ಸೋವಾನಿ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಪ್ಟೆ ಪರ ವಾದ ಮಂಡಿಸಿ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದ್ದರಿಂದ ಹೆಚ್ಚಿನ ಕಸ್ಟಡಿ ಅಗತ್ಯವಿಲ್ಲ ಎಂದು ಅವರು ವಾದ ಮಂಡಿಸಿದ್ದರು.
ಆಪ್ಟೆ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದ್ದು, ಈ ಬಗ್ಗೆ ವಕೀಲರು ಪ್ರಶ್ನಿಸಿದ್ದಾರೆ. ಕೋಟ್ಯಂತರ ಮೌಲ್ಯದ ಈ ಕೆಲಸದ ಆದೇಶವನ್ನು ಪಡೆಯಲು, ನನ್ನ ಕಕ್ಷಿದಾರನು ತನ್ನ ಪೋಷಕರ ಮನೆಯನ್ನು ಅಡವಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಪ್ರತಿಮೆ ಅನಾವರಣಗೊಳಿಸಿ ಕೆಲವೇ ದಿನಗಳಲ್ಲಿ ಪ್ರತಿಮೆ ಕುಸಿತ ಕಂಡಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳು ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿಯಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿತ್ತು. ಆ ದೂರಿನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ನಂತರ ಅವರ ಮನೆಯಲ್ಲಿಯೇ ಬಂಧಿಸಲಾಗಿತ್ತು. ಬಂಧನ ನಂತರ ಪ್ರತಿಕ್ರಿಯೆ ನೀಡಿದ್ದ ಆಪ್ಟೆ ಕುಟುಂಬ ಜಯದೀಪ್ ಆಪ್ಟೆ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿತ್ತು. ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸಿದವರ ಗೌರವಾರ್ಥವಾಗಿ ಸಿಖ್ ಸೈನಿಕನ ಕಂಚಿನ ಪ್ರತಿಮೆಯನ್ನು ರಚಿಸಲು ಯುಕೆ ಮೂಲದ ಸಿಖ್ ಸೈನಿಕ ಸಂಘಟನೆಯು 2019 ರಲ್ಲಿ ಆಪ್ಟೆ ಅವರನ್ನು ನಿಯೋಜನೆ ಮಾಡಿತ್ತು. ನಂತರ ಗುಜರಾತ್‌ನ ದಂಡಿ ಸ್ಮಾರಕಕ್ಕಾಗಿ ಮಹಾತ್ಮ ಗಾಂಧಿಯವರ ಮಗ ಮಣಿಲಾಲ್‌ನ ಪ್ರತಿಮೆಯನ್ನು ಸಹ ರಚಿಸಿ ಗಮನ ಸೆಳೆದಿದ್ದರು.
ಈ ಸುದ್ದಿಯನ್ನೂ ಓದಿ : Rashmi Shukla: ಮಹಾರಾಷ್ಟ್ರ ಡಿಜಿಪಿಯಾಗಿ ರಶ್ಮಿ ಶುಕ್ಲಾ ಮರು ನೇಮಕ