ಬೆಂಗಳೂರು: 66/11 kV ಬಿಟಿಎಂ ವಿವಿ ಕೇಂದ್ರದಲ್ಲಿ ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಎಚ್.ಎಸ್.ಆರ್. ವಿಭಾಗದಲ್ಲಿನ ಹಲವೆಡೆ ಜ.13 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಕಾವೇರಿನಗರ, ಹುಳಿಮಾವು, ಅಕ್ಷಯ ನಗರ, ಹೊಂಗಸಂದ್ರ, ಬಿ.ಟಿ.ಎಸ್ ಲೇಔಟ್, ಕೋಡಿಚಿಕ್ಕನಹಳ್ಳಿ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯಾ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕ್ಕಬಳ್ಳಾಪುರ ನಗರದ ಹಲವೆಡೆ ಜ.12 ರಂದು ವಿದ್ಯುತ್ ವ್ಯತ್ಯಯ
ಬೆಂಗಳೂರು: 220/66 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಮಾರ್ಗದಲ್ಲಿನ ಹಲವೆಡೆ ಜ.12 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | Bengaluru International Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕನ್ನಡ, ಭಾರತೀಯ, ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳ ಆಹ್ವಾನ
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಚಿಕ್ಕಬಳ್ಳಾಪುರ ನಗರ, ಕೈಗಾರಿಕಾ ಪ್ರದೇಶ ಸೇರಿದಂತೆ ತಾಲೂಕಿನ ನಂದಿ, ನಂದಿಕದರಾಸ್, ಬೀಡಗಾನಹಳ್ಳಿ, ನಂದಿಬೆಟ್ಟ, ಸುಲ್ತಾನ್ ಪೇಟೆ, ಸಿಂಗಾಟಕದಿರೇನಹಳ್ಳಿ, ಹೊಸೂರು, ಮುದ್ದೇನಹಳ್ಳಿ, ಕುಪ್ಪಹಳ್ಳಿ, ಪಟ್ರೇನಹಳ್ಳಿ, ಜಾತವಾರ, ಹೊಸಹುಡ್ಯ, ಅಜ್ಜವಾರ, ದಿಬ್ಬೂರು, ಮಂಚನಬಲೆ, ಕೇತೇನಹಳ್ಳಿ, ರೆಡ್ಡಿಗೊಲ್ಲರಹಳ್ಳಿ, ರಾಮದೇವರಗುಡಿ, ಹಾರೋಬಂಡೆ, ಗುಂಡ್ಲಗುರ್ಕಿ, ಜಿಲ್ಲಾಡಳಿತ ಭವನ, ತಿಪ್ಪೇನಹಳ್ಳಿ, ಕಣಜೇನಹಳ್ಳಿ, ಮೈಲಪ್ಪನಹಳ್ಳಿ, ಕಂದವಾರ, ಚದಲಪುರ, ಗವಿಗಾನಹಳ್ಳಿ, ಕಣಿತಹಳ್ಳಿ, ಬೊಮ್ಮನಹಳ್ಳಿ, ಅಗಲಗುರ್ಕಿ, ಹೊನ್ನೇನಹಳ್ಳಿ, ಕೆಳಗಿನ ತೋಟ, ಜಕ್ಕಲಮಡಗು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.