Saturday, 11th January 2025

Cyber Scam: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಿ… 10 ಲಕ್ಷ ರೂ. ಗಳಿಸಿ; ಈ ಹೊಸ ಸ್ಕ್ಯಾಮ್‌ ಬಗ್ಗೆ ಇರಲಿ ಎಚ್ಚರ!

ಪಟನಾ: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡಿದರೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡುವ ವಿಚಿತ್ರ ಜಾಹೀರಾತಿನ ಹಗರಣವನ್ನು ಬಿಹಾರ(Bihar) ಪೊಲೀಸರು ಶುಕ್ರವಾರ (ಜ.10) ಭೇದಿಸಿದ್ದಾರೆ. ಪೊಲೀಸರು ವಂಚನೆಯ ಬೆನ್ನತ್ತಿ ನವಾಡಾ ಜಿಲ್ಲೆಯ ಪ್ರಿನ್ಸ್ ರಾಜ್, ಭೋಲಾ ಕುಮಾರ್ ಮತ್ತು ರಾಹುಲ್ ಕುಮಾರ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ(Cyber Scam)

ಈ ಆರೋಪಿಗಳು ‘ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ (ಬೇಬಿ ಬರ್ತ್ ಸರ್ವಿಸ್)’ ಮತ್ತು ‘ಪ್ಲೇಬಾಯ್ ಸರ್ವಿಸ್’ ನಂತಹ ಅಭಿಯಾನದ ಸೋಗಿನಲ್ಲಿ ವಂಚನೆ ನಡೆಸುತ್ತಿದ್ದರು, ಫೋನ್ ಕರೆಗಳ ಮೂಲಕ ಅಮಾಯಕ ಮಹಿಳೆಯರಿಗೆ ಆಮಿಷವೊಡ್ಡಿ ಹಣವನ್ನು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸೈಬರ್‌ ವಂಚಕರ ತಂಡ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ಅನೇಕ ಜನರಿಗೆ ವಂಚನೆ ಮಾಡಿದೆ. ಇಲ್ಲಿಯವರೆಗೆ ಎಷ್ಟು ಮಂದಿ ವಂಚನೆಗೊಳಗಾಗಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ(Fake ‘Pregnancy Job’) 

ಪೊಲೀಸರ ಪ್ರಕಾರ, ಸೈಬರ್ ವಂಚಕರು ವಿವಿಧ ರಾಜ್ಯಗಳ ಜನರನ್ನು ಫೋನ್ ಅಥವಾ ವಾಟ್ಸಾಪ್ ಮೂಲಕ ಮೋಸ ಮಾಡಿದ್ದಾರೆ. ಗರ್ಭ ಧರಿಸದ ಮಹಿಳೆಯರನ್ನು ಗರ್ಭಿಣಿ ಮಾಡುವುದಾಗಿ ತಿಳಿಸುವ ನಕಲಿ ಜಾಹೀರಾತು ಇದಾಗಿತ್ತು. ಈ ಪ್ರಕ್ರಿಯೆಯು ವಿಫಲವಾದರೆ ಹೆಚ್ಚುವರಿಯಾಗಿ 50,000 ರೂಪಾಯಿ ನೀಡುವುದಾಗಿಯೂ ಮತ್ತು ಪ್ರತಿಯಾಗಿ 5 ಲಕ್ಷ ರೂ.ಗಳನ್ನು ನೀಡುವುದಾಗಿ ಸುಳ್ಳು ಭರವಸೆಯನ್ನು ನೀಡಿದ್ದರು.

ವಂಚನೆಯ ಬಲೆಗೆ ಬಿದ್ದ ಮಹಿಳೆಯರಿಂದ ಸೈಬರ್‌ ವಂಚಕರು ಆನ್‌ಲೈನ್‌ನಲ್ಲಿ 500 ರಿಂದ 20,000 ರೂಪಾಯಿಗಳವರೆಗೆ ನೋಂದಣಿ ಶುಲ್ಕವನ್ನು ಪಡೆದಿದ್ದಾರೆ. ಬಂಧಿತ ಆರೋಪಿಗಳು ಜನರನ್ನು ಯಾಮಾರಿಸಿ ವಂಚನೆ ನಡೆಸಿದ್ದಾರೆ. ಇದೀಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ವ್ಯಕ್ತಿಗಳಿಂದ ಪೊಲೀಸರು ಆರು ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಹುರಾ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿ ಭೋಲಾ ಕುಮಾರ್, ರಾಹುಲ್ ಕುಮಾರ್ ಮತ್ತು ಪ್ರಿನ್ಸ್ ರಾಜ್ ಎಂಬ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದು ನಡರಿಗಂಗ್ ಉಪವಿಭಾಗದ ಪೊಲೀಸ್ ಅಧಿಕಾರಿ ಇಮ್ರಾನ್ ಖಾನ್ ಹೇಳಿದ್ದಾರೆ. ಅವರು ಒಂದು ವರ್ಷದಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್

Leave a Reply

Your email address will not be published. Required fields are marked *