Saturday, 11th January 2025

Aamir Khan: ಮಗನಿಗಾಗಿ ಸ್ಮೋಕಿಂಗ್‌ ತ್ಯಜಿಸಿದ ಮಾಡಿದ ಆಮಿರ್‌ ಖಾನ್

Aamir Khan

ಮುಂಬೈ: ನಟ ಆಮಿರ್ ಖಾನ್ (Aamir Khan) ಬಾಲಿವುಡ್​ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್‌ ಎಂದೇ ಪ್ರಸಿದ್ಧಿ ಪಡೆದವರು. ಇದೀಗ  ಆಮಿರ್ ಖಾನ್ ಮಗ ಜುನೈದ್ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದು ಲವ್‌ಯಾಪ ಚಿತ್ರ  ಫೆಬ್ರವರಿ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಆಮಿರ್ ಖಾನ್ ತಾನು ಧೂಮಪಾನವನ್ನು ತ್ಯಜಿಸಿರುವುದಾಗಿ ಘೋಷಣೆ ಮಾಡಿದ್ದಾರೆ.

ಮುಂಬೈನಲ್ಲಿ ನಡೆದ  ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ,ಆಮಿರ್‌ ತಮ್ಮ ಧೂಮಪಾನದ ಚಟವನ್ನು ತೊರೆದಿರುವ ಬಗ್ಗೆ ಹೇಳಿದ್ದಾರೆ. ಈ ಕೆಟ್ಟ ಚಟಗಳಿಂದ ಅವರ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಿತು ಎಂದು ಜನರಿಗೆ ಮನವರಿಕೆ ಮಾಡಿದ್ದಾರೆ. ನಾನು ನನ್ನ  ಕೆಟ್ಟ ಅಭ್ಯಾಸವನ್ನು ಬಿಟ್ಟಿದ್ದೇನೆ ಎಂದು ನಿಮ್ಮ ಜೊತೆ ಹಂಚಿಕೊಳ್ಳಲು ಖುಷಿ ಪಡುತ್ತೇನೆ‌ ದಯವಿಟ್ಟು  ಇಂತಹ ಕೆಟ್ಟ ಅಭ್ಯಾಸ ಇದ್ದರೆ ನೀವೂ ಬಿಟ್ಟುಬಿಡಿ. ಇದು ಒಳ್ಳೆಯ ಅಭ್ಯಾಸವಲ್ಲ. ಧೂಮಪಾನದ ಚಟ ಆರೋಗ್ಯಕ್ಕೆ ಬಹಳಷ್ಟು ಹಾನಿ ಎಂದಿದ್ದಾರೆ. ನನ್ನ ಮಗನ  ವೃತ್ತಿ ಜೀವನವೂ ಈಗ  ಪ್ರಾರಂಭವಾಗಿದೆ, ನಾನು ತಂದೆಯಾಗಿ ಈ ವಿಚಾರ ತ್ಯಾಗ ಮಾಡಲು ಬಯಸಿದ್ದೇನೆ  ಎಂದು ಹೇಳಿಕೊಂಡಿದ್ದಾರೆ.

ಮಗನ ಚಿತ್ರ ಗೆದ್ದರೆ ಸಿಗರೇಟ್ ಬಿಡ್ತೀನಿ ಅಂತ ಆಮಿರ್ ಸ್ನೇಹಿತರ ಜೊತೆ  ಹೇಳಿದ್ದಾರಂತೆ. ಈ ವಿಷ್ಯವನ್ನು ಆಮಿರ್‌ ಆಪ್ತರು ಕೂಡ  ಹೇಳಿದ್ದಾರೆ. ಕೆಲವು ದಿನಗಳ ಹಿಂದೆ  ಆಮೀರ್ ತಮ್ಮ ಚಟಗಳ ಬಗ್ಗೆ ಹೇಳಿಕೊಂಡಿದ್ರು. ಈಗ ಮದ್ಯಪಾನ ಬಿಟ್ಟಿದ್ದೀನಿ, ಆದರೆ ಒಂದು ಕಾಲದಲ್ಲಿ ನಾನು ರಾತ್ರಿಯೆಲ್ಲಾ ಕುಡಿಯುತ್ತಿದ್ದೆ. ಈಗ ಮಗ ಜುನೈದ್ ಖಾನ್‌ಗಾಗಿ ಸಿಗರೇಟ್  ಚಟ ಬಿಡಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಲವ್‌ಯಾಪ ಚಿತ್ರ 2025ರ ಫೆಬ್ರವರಿ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು  ಚಿತ್ರದ ಕಥೆ ಆಧುನಿಕ ಪ್ರೇಮಕಥೆ‌ ಯಾಧಾರಿತವಾಗಿದೆ. ಚಿತ್ರದಲ್ಲಿ ಗೃಷಾ ಕಪೂರ್, ಆಶುತೋಷ್ ರಾಣಾ, ತನ್ವಿಕಾ ಪಾರ್ಲಿಕರ್, ಹಾಸ್ಯನಟ ಕಿಕ್ ಷಾರದಾ ಇರಲಿದ್ದಾರೆ. ಆಮೀರ್ ಖಾನ್  ಲಾಲ್ ಸಿಂಗ್ ಚಡ್ಡಾ’ ಚಿತ್ರ ನಿರ್ದೇಶಿಸಿದ್ದ ಅದ್ವೈತ್ ಚಂದನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಪತಿ, 6 ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋದ ಮಹಿಳೆ!

Leave a Reply

Your email address will not be published. Required fields are marked *