ರಾಯ್ಪುರ: ಛತ್ತೀಸ್ಗಢದ ( Chhattisgarh)ರಾಯ್ಗಢ ಜಿಲ್ಲೆಯ ಕಬ್ಬಿಣ ತಯಾರಿಸುವ ನಿರ್ಮಾಣ ಹಂತದ ಸ್ಥಾವರದಲ್ಲಿ ಗುರುವಾರ ಭಾರಿ ಗಾತ್ರದ ಚಿಮಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 42 ಗಂಟೆಗಳ ಕಾರ್ಯಾಚರಣೆಯ ನಂತರ ಶನಿವಾರ ಮೂವರು ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ 4ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (Chhattisgarh Horror)
ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ, ಚಿಮಿಣಿ ಕುಸಿದು ಸ್ಥಳದಲ್ಲಿದ್ದ ಕೆಲವು ಕಾರ್ಮಿಕರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎಂದು ಮುಂಗೇಲಿ ಪೊಲೀಸ್ ವರಿಷ್ಠಾಧಿಕಾರಿ ಭೋಜ್ರಾಮ್ ಪಟೇಲ್ ತಿಳಿಸಿದ್ದಾರೆ.
#WACTH | The Silo structure of the #SmeltingPlant which collapsed yesterday in #Chhattisgarh is being lifted to rescue trapped workers in Sargaon, Mungeli
— Hindustan Times (@htTweets) January 10, 2025
(via : ANI) pic.twitter.com/GNt21sgcng
ಮೃತ ಮೂವರು ಕಾರ್ಮಿಕರನ್ನು ಬಿಲಾಸ್ಪುರ ಜಿಲ್ಲೆಯ ನಿವಾಸಿ ಜಯಂತ್ ಸಾಹು (35), ಬಲೋದಬಜಾರ್ ಜಿಲ್ಲೆಯ ಪ್ರಕಾಶ್ ಯಾದವ್ (20) ಮತ್ತು ಜಾಂಜ್ಗೀರ್-ಚಂಪಾ ಜಿಲ್ಲೆಯ ಅವಧೇಶ್ ಕಶ್ಯಪ್ (32) ಎಂದು ಗುರುತಿಸಲಾಗಿದೆ. ಗುರುವಾರ ಮೃತಪಟ್ಟ ಕಾರ್ಮಿಕನನ್ನು ಮನೋಜ್ ಕುಮಾರ್ ಧೃತ್ಲಾಹ್ರೆ (35) ಎಂದು ಗುರುತಿಸಲಾಗಿದೆ.
ಘಟನೆಗೆ ಸ್ಥಾವರದ ಉಸ್ತುವಾರಿ ಅಮಿತ್ ಕೇಡಿಯಾ, ವ್ಯವಸ್ಥಾಪಕ ಅನಿಲ್ ಪ್ರಸಾದ್ ಮತ್ತು ಸ್ಥಾವರ ನಿರ್ವಾಹಣೆಯ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 106 (ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ), 289 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ ಮತ್ತು 3 (5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಎಲ್ಲರನ್ನೂ ವಿಚಾರಣೆಗೆ ಒಳಪಡಿಸತ್ತೇವೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಛತ್ತೀಸಗಢ ಮಾಜಿ ಸಚಿವರ ಶವ ಪತ್ತೆ