Saturday, 11th January 2025

Viral News: ಉದ್ಯೋಗಿಗಳಿಗೆ ಇದೆಂಥಾ ಗೋಳು? ಸಿಕ್‌ ಲೀವ್‌ ಹಾಕಿದ್ರೆ ನಡೆಯುತ್ತೆ ತನಿಖೆ- ಡಿಟೆಕ್ಟಿವ್ಸ್‌ ನೇಮಿಸಿದ ಜರ್ಮನ್‌ ಕಂಪನಿಗಳು!

ಬರ್ಲಿನ್:‌ ಜರ್ಮನ್‌(German) ದೇಶದಲ್ಲಿನ ಕಂಪನಿಗಳು ಉದ್ಯೋಗಿಗಳಿಗಾಗಿ ಚಿತ್ರ ವಿಚಿತ್ರ ಕಾನೂನುಗಳನ್ನು ಆಗಾಗ್ಗೆ ಜಾರಿಗೊಳಿಸುತ್ತಿರುತ್ತವೆ. ದೇಶದಲ್ಲಿ ಎದುರಾಗುತ್ತಿರುವ ಆರ್ಥಿಕ ಸವಾಲುಗಳ ನಿವಾರಣೆಗಾಗಿ ಉದ್ಯೋಗಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಜರ್ಮನ್‌ ಕಂಪನಿಯೊಂದು ಇತ್ತೀಚೆಗೆ ಹೇಳಿದೆ. ಇದೀಗ ಉದ್ಯೋಗಿಗಳಿಗೆ ಅಂಥ ಇರುವ ಸಿಕ್‌ ಲೀವ್‌ಗೂ ಕತ್ತರಿ ಹಾಕುವ ನಿರ್ಧಾರವನ್ನು ಕೈಗೊಂಡಿದೆ. ಅನಾರೋಗ್ಯ ರಜೆಗಳನ್ನು ಉದ್ಯೋಗಿಗಳು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಹಲವು ಕಂಪನಿಗಳು ತನಿಖೆಗಾಗಿ ಪ್ರೈವೆಟ್‌ ಡಿಟೆಕ್ಟಿವ್ಸ್‌(Private Detectives) ಅನ್ನು ನೇಮಿಸಿಕೊಂಡಿವೆ(Viral News)

ಜರ್ಮನಿಯ ಫೆಡರಲ್ ಸ್ಟ್ಯಾಟಿಸ್ಟಿಕ್ಸ್ ಏಜೆನ್ಸಿ ಡೆಸ್ಟಾಟಿಸ್‌ನ ಅಂಕಿ ಅಂಶಗಳ ಪ್ರಕಾರ ಪ್ರತಿ ಉದ್ಯೋಗಿಗೂ 2021 ರಲ್ಲಿ 11.1 ರಷ್ಟು ರಜೆಗಳಿದ್ದವು. 2023 ರಲ್ಲಿ 15.1 ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಜರ್ಮನ್ ದೇಶದ GDP ದರವು 2023 ರಲ್ಲಿ 0.8% ರಷ್ಟು ಕಡಿಮೆಯಾಗಿದೆ. ಉದ್ಯೋಗಿಗಳು ರಜೆ ಹಾಕದೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇಶದ ಆರ್ಥಿಕ ಸವಾಲುಗಳನ್ನು ನಿವಾರಿಸಬಹುದು ಎಂದು ಹಲವು ಕಂಪನಿಗಳು ಹೇಳಿವೆ. ಹಾಗಾಗಿ ಕಂಪನಿಗಳು ಉದ್ಯೋಗಿಗಳಿಗೆ ಒದಗಿಸಿರುವ ಅನಾರೋಗ್ಯದ ರಜೆಗೆ ಕತ್ತರಿ ಹಾಕಲು ಮುಂದಾಗಿದೆ.

ಅನಾರೋಗ್ಯ ಸಂದರ್ಭದಲ್ಲಿ ಸಾಮಾನ್ಯವಾಗಿ ವೈದ್ಯರು ವಿಶ್ರಾಂತಿ ಪಡೆಯುವುದಾಗಿ ಹೇಳುತ್ತಾರೆ. ಉದ್ಯೋಗಿಗಳು ಅದನ್ನೇ ಕಾರಣವಾಗಿಟ್ಟುಕೊಂಡು ಸಣ್ಣ ನೆಗಡಿ,ಕೆಮ್ಮು ಬಂದರೂ ರಜೆ ಹಾಕುತ್ತಾರೆ ಎಂದು ಜರ್ಮನ್‌ ಕಂಪನಿಗಳು ಹೇಳಿವೆ. ಸಣ್ಣಪುಟ್ಟ ರೋಗಲಕ್ಷಣಗಳು ಕಂಡು ಬಂದರೆ ಸಾಕು ಉದ್ಯೋಗಿಗಳು ಫೋನ್‌ ಕರೆಗಳು ಮತ್ತು ಇಮೇಲ್ ಮೂಲಕ ಅನಾರೋಗ್ಯ ರಜೆಗಳನ್ನು ಪಡೆಯುತ್ತಾರೆ. ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸುವ ಸಾಧ್ಯತೆ ಇರುತ್ತದೆ. ಇದರಿಂದ ರಜೆಗಳು ದುರುಪಯೋಗವಾಗುತ್ತಿವೆ ಎಂಬುದನ್ನು ಕಂಪನಿಗಳು ಮನಗಂಡು ಪ್ರೈವೆಟ್‌ ಡಿಟೆಕ್ಟಿವ್ಸ್‌ ಅನ್ನು ನೇಮಿಸಿಕೊಂಡಿವೆ. ಉದ್ಯೋಗಿಯೊಬ್ಬ ವರ್ಷದಲ್ಲಿ 30, 40 ಅಥವಾ ಕೆಲವೊಮ್ಮೆ 100 ಅನಾರೋಗ್ಯ ರಜೆಗಳನ್ನು ಪಡೆದರೆ ಅವರು ಉದ್ಯೋಗದಾತರಿಗೆ ಆರ್ಥಿಕವಾಗಿ ಹೊರೆಯಾಗುತ್ತಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?

Leave a Reply

Your email address will not be published. Required fields are marked *