Saturday, 11th January 2025

Lottery Winner: ಕನಸಿನಲ್ಲಿ ಕಂಡ ಸಂಖ್ಯೆ ಅದೃಷ್ಟವನ್ನೇ ಬದಲಿಸಿತು- 50,000 ಡಾಲರ್ ಲಾಟರಿ ಗೆದ್ದ ಮಹಿಳೆ

Lottery Winner

ಕನಸಿನಲ್ಲಿ ಕಾಣುವುದೆಲ್ಲಾ ನಿಜವಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆಗೆ ಕನಸಿನಲ್ಲಿ ಕಂಡ ಸಂಖ್ಯೆ ಆಕೆಯ ಅದೃಷ್ಟವನ್ನೇ ಬದಲಿಸಿದೆ. ಹೌದು,  ಪ್ರಿನ್ಸ್ ಜಾರ್ಜ್ ಕೌಂಟಿಯ ಮೇರಿಲ್ಯಾಂಡ್ ನಿವಾಸಿಯೊಬ್ಬರು ಇತ್ತೀಚೆಗೆ ಪಿಕ್ 5 ಡ್ರಾದಲ್ಲಿ 50,000 ಡಾಲರ್ (ಸುಮಾರು 42.96 ಲಕ್ಷ ರೂ.) ಲಾಟರಿ(Lottery Winner) ಬಹುಮಾನವನ್ನು ಗೆದ್ದಿದ್ದಾರೆ. ಆದರೆ ಇವರ ಗೆಲುವಿಗೆ ಕಾರಣವಾದ ಆ ಲಾಟರಿ ಸಂಖ್ಯೆ ಅವರ ಕನಸಿನಲ್ಲಿ ಬಂದವು ಎಂದು ಅವರು ಬಹಿರಂಗಪಡಿಸಿದ್ದಾರೆ.

ಅದೃಷ್ಟಶಾಲಿ ವಿಜೇತರಾದ ಮೇರಿಲ್ಯಾಂಡ್ ಡಿಸೆಂಬರ್‌ನಲ್ಲಿ, ನಿರ್ದಿಷ್ಟ ಸಂಖ್ಯೆಗಳ ಕನಸನ್ನು ಕಂಡಿದ್ದಾರಂತೆ ಅದರ ಮೇರೆಗೆ, ಅವರು 9-9-0-0-0-0 ಸಂಖ್ಯೆಗಳನ್ನು ಬಳಸಿಕೊಂಡು ಮಾರ್ಟ್‍ನ ಆಕ್ಸನ್ ಹಿಲ್ ಜಿಪ್‍ನಿಂದ ಪಿಕ್ 5 ಟಿಕೆಟ್ ಖರೀದಿಸಿದ್ದಾರಂತೆ. ಡಿಸೆಂಬರ್ 20 ರಂದು ಸಂಜೆ ಡ್ರಾ ಸಮಯದಲ್ಲಿ ಆ ಸಂಖ್ಯೆಗಳಿಂದ ನನಗೆ $ 50,000 ಬಹುಮಾನ ಸಿಕ್ಕಿತು ಎಂದು ಸಂತೋಷದಿಂದ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಮಾಲ್‌ಗೆ ನುಗ್ಗಿದ ಕೋತಿ; ಮಹಿಳೆ ಮೇಲೆ ಅಟ್ಯಾಕ್‌- ಇಲ್ಲಿದೆ ವಿಡಿಯೊ

ಈ ರೀತಿ ಅದೃಷ್ಟದಿಂದ  ಲಾಟರಿ ಬಹುಮಾನ ಗೆದ್ದ ಪ್ರಕರಣ ಇದೇ ಮೊದಲಲ್ಲ. ಕಳೆದ ನವೆಂಬರ್‌ನಲ್ಲಿ ಸಿಂಗಾಪುರದಲ್ಲಿ ಭಾರತೀಯ ಮೂಲದ ಬಾಲಸುಬ್ರಮಣಿಯನ್ ಚಿತಾಂಬರಮ್ ಅವರು ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಡಾಲರ್ (8.45 ಕೋಟಿ ರೂ.) ಬಹುಮಾನವನ್ನು ಗೆದ್ದ ನಂತರ ರಾತ್ರೋರಾತ್ರಿ ಮಿಲಿಯನೇರ್ ಆದರು. ಮುಸ್ತಫಾ ಜ್ಯುವೆಲ್ಲರಿ ಅಂಗಡಿಯಲ್ಲಿ ಮೂರು ತಿಂಗಳ ಹಿಂದೆ ತನ್ನ ಹೆಂಡತಿಗಾಗಿ ಚಿನ್ನದ ಸರವನ್ನು ಖರೀದಿಸಿದ ನಂತರ ಅವರಿಗೆ ಈ  ಅದೃಷ್ಟದ ಜಾಕ್ ಫಾಟ್ ಹೊಡೆದಿತ್ತಂತೆ.

Leave a Reply

Your email address will not be published. Required fields are marked *