Friday, 20th September 2024

ಬ್ರಿಟನ್’ನಿಂದ ಭಾರತಕ್ಕೆ ಬಂದ 7 ಮಂದಿಯಲ್ಲಿ ಹೊಸ ವಿಧದ ಕೊರೊನಾ ಸೋಂಕು ಪತ್ತೆ

ನವದೆಹಲಿ: ಬ್ರಿಟನ್’ನಿಂದ ಭಾರತಕ್ಕೆ ಬಂದ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಬ್ರಿಟನ್ ನಿಂದ ಭಾರತಕ್ಕೆ ಬಂದ 266 ಮಂದಿ ಪ್ರಯಾಣಿಕರಲ್ಲಿ, ದೆಹಲಿ, ಕೋಲ್ಕತಾದಲ್ಲಿ 7 ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ದೆಹಲಿ ಮತ್ತು ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಸೋಮವಾರ ರಾತ್ರಿ ವಿಮಾನಗಳು ಬಂದಿದ್ದು, ಆ ಪ್ರಯಾಣಿಕ ರಲ್ಲಿ 7 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಬ್ರಿಟನ್ ನಲ್ಲಿ ಹೊಸ ವಿಧದ ಕೊರೊನಾ ಸೋಂಕು ಪತ್ತೆಯಾಗಿದ್ದು, ಅತಿ ವೇಗವಾಗಿ ಹರಡಬಲ್ಲ ಲಕ್ಷಣದಿಂದಾಗಿ ಆತಂಕ ಎದುರಾಗಿದೆ. ಹಲವು ದೇಶಗಳು ಬ್ರಿಟನ್ ನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿವೆ.

ಭಾರತದಲ್ಲೂ ಡಿ.31ರವರೆಗೆ ಬ್ರಿಟನ್ ನಿಂದ ಬರುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಸದ್ಯಕ್ಕೆ ಮಂಗಳವಾರ ಬ್ರಿಟನ್ ನಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಒಟ್ಟು ಐದು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.