ನವ ದೆಹಲಿ: ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ವಿಲಕ್ಷಣ ಆಹಾರದ ವಿಡಿಯೊ ವೈರಲ್ ಆಗುತ್ತಿದೆ. ಪಾನ್ ಆಮ್ಲೇಟ್ನಿಂದ ಹಿಡಿದು ಕಲ್ಲಂಗಡಿ ಪಾಪ್ಕಾರ್ನ್ವರೆಗೆ ವಿಚಿತ್ರ ಆಹಾರಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದವು. ಇದೀಗ ಮತ್ತೊಂದು ಅಚ್ಚರಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಅತ್ಯಂತ ದೊಡ್ಡ ಗಾತ್ರದ ರೊಟ್ಟಿ ತಯಾರಿಸುವ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗುತ್ತಿದೆ (Viral Video).
ಈ ರೊಟ್ಟಿಯ ಗಾತ್ರ ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ. ಸುಮಾರು 12 ಅಡಿ ಉದ್ದದ ರೊಟ್ಟಿ ತಯಾರಿಸುವ ವಿಡಿಯೊ ಇದಾಗಿದೆ. ಇದು ವಿಶ್ವದ ಅತೀ ದೊಡ್ಡದಾದ ರೊಟ್ಟಿ ಎಂದು ಹೇಳಲಾಗುತ್ತಿದೆ. ರೊಟ್ಟಿಯ ಗಾತ್ರವೇ ವಿಡಿಯೊ ವೈರಲ್ ಆಗಲು ಮುಖ್ಯ ಕಾರಣ. ಈ ಬೃಹತ್ ಗಾತ್ರದ ರೊಟ್ಟಿಯನ್ನು ಅತ್ಯಂತ ಸರಳವಾಗಿ ತಯಾರಿಸಿದ್ದಾರೆ. ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗಿದೆ. ವಿಡಿಯೊವನ್ನು @ChapraZila ಹೆಸರಿನ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ವ್ಯಕ್ತಿಯು ದೊಡ್ಡ ಆಕಾರದ ಪ್ಯಾನ್ನಲ್ಲಿ ದೊಡ್ಡ ಗಾತ್ರದ ರೊಟ್ಟಿಯನ್ನು ತಯಾರಿಸುತ್ತಿದ್ದಾರೆ. ರೊಟ್ಟಿಯು ತೆಳುವಾದ, ದುಂಡಗಿನ ಆಕಾರವನ್ನು ಪಡೆದುಕೊಳ್ಳಲು ಅಂಗೈ ಬಳಸಿ ಅದನ್ನು ತಟ್ಟಿ ನಂತರ ಪ್ಯಾನ್ಗೆ ಎಸೆಯುತ್ತಾರೆ. ಈ ಮೂಲಕ ವ್ಯಕ್ತಿಯು ಬಹಳ ಅಗಲ ಮತ್ತು ದೊಡ್ಡದಾದ ರೊಟ್ಟಿಗಳನ್ನು ತಯಾರಿಸುತ್ತಾರೆ. ಈ ವಿಡಿಯೊ ನೋಡಿ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇದು ಮಲಗುವ ಹಾಸಿಗೆಯಂತೆ ತೋರುತ್ತದೆ, ಚಳಿಗಾಲದಲ್ಲೂ ಇದನ್ನು ಬಳಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ರೊಟ್ಟಿ ನೋಡಿಯೆ ಹೊಟ್ಟೆ ತುಂಬಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಇದನ್ನು ತಿನ್ನಬೇಕೆ ಅಥವಾ ಧರಿಸಬೇಕೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ:Kriti Kharbanda: ಥಂಡಿ ಥಂಡಿ ಹವಾ… ಜತೆಗೆ ಸ್ಕ್ವೀಝ್ಡ್ ಆರೆಂಜ್ ಜ್ಯೂಸ್- ನಟಿ ಕೃತಿ ಕರಬಂಧ ವಿಡಿಯೊ ಫುಲ್ ವೈರಲ್