ನವದೆಹಲಿ: ದೆಹಲಿ (Delhi) ಮೂಲದ ಮಹಿಳೆಯೊಬ್ಬರು ಲಿಂಕ್ಡ್ ಇನ್ (LinkedIn) ಮೂಲಕ ತನ್ನ ತಂದೆಗೆ ಉದ್ಯೋಗವಕಾಶಕ್ಕಾಗಿ ವಿನಂತಿ ಮಾಡಿಕೊಂಡಿರುವ ಸುದೀರ್ಘ ಪತ್ರವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Post) ಅಗುತ್ತಿದೆ. ಅಟೊಮೊಬೈಲ್ ಇಂಡಸ್ಟ್ರಿಯಲ್ಲಿ (Automobile Industry) ಹಲವಾರು ಹುದ್ದೆಗಳನ್ನು ನಿರ್ವಹಿಸಿ, ಪ್ರತಿಷ್ಠ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿರುವ ತನ್ನ ತಂದೆಗೊಂದು ಅವರ ಅನುಭವ ಮತ್ತು ಕಾರ್ಯದಕ್ಷತೆಗೆ ಅನುಗುಣವಾದ ಉತ್ತಮ ಕೆಲಸ ಬೇಕಾಗಿದೆ ಎಂದು ಆ ಮಹಿಳೆ ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈಕೆ ತನ್ನ ತಂದೆಯನ್ನು, ‘ನಿಖರತೆಯಿಂದ ಕೂಡಿದ, ಕಠಿಣ ಪರಿಶ್ರಮಿ, ನಿಷ್ಠಾವಂತ, ಅರ್ಥೈಸುವಿಕೆಯಿಂದ ಕೂಡಿದ ಮತ್ತು ಅತ್ಯುತ್ತಮ ಪ್ರತಿಭಾವಂತ ವ್ಯಕ್ತಿ’ ಎಂದು ಆಕೆ ತನ್ನ ತಂದೆಯನ್ನು ಪರಿಚಯಿಸಿಕೊಂಡಿದ್ದಾರೆ. ಮಾತ್ರವಲ್ಲದೇ, ಅಟೊಮೊಬೈಲ್ ಇಂಡಸ್ಟ್ರಿಯಲ್ಲಿ ತನ್ನ ತಂದೆಗೆ 30-40 ವರ್ಷಗಳ ಸಮೃದ್ಧ ವೃತ್ತಿ ಅನುಭವವನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿರುವ ಈ ಮಹಿಳೆ, ತನ್ನ ತಂದೆ ಸ್ವರಾಜ್ ಮಜ್ದಾ, ಮಾರುತಿ ಜಾಯಿಂಟ್ ವೆಂಚರ್, ಅಲ್ಫಾ ಕೊಟೆಕ್ ಇಂಡಸ್ಟ್ರಿ, ಕೆಡಿ ಇಂಡಸ್ಟ್ರೀಸ್ ಇತ್ಯಾದಿ ಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ, ನಿರ್ದೇಶಕರಾಗಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ ಎಂದು ತನ್ನ ತಂದೆಯ ವೃತ್ತಿ ಬದುಕಿನ ಚಿತ್ರಣವನ್ನು ನೀಡಿದ್ದಾರೆ.
ಇಷ್ಟೆಲ್ಲಾ ಅನುಭವ ಮತ್ತು ಅರ್ಹತೆ ಇದ್ದರೂ ತನ್ನ ತಂದೆ ಯಾಕೆ ಈಗ ಕೆಲಸ ಬದಲಾವಣೆಗೆ ಹೊರಟಿದ್ದಾರೆ ಎಂಬ ಮಾಹಿತಿಯನ್ನೂ ಸಹ ಈ ಮಹಿಳೆ ನೀಡಿದ್ದಾರೆ. ತನ್ನ ತಂದೆ ಪ್ರಸ್ತುತ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಹಣಕಾಸಿನ ಅಭದ್ರತೆಯನ್ನು ಎದುರಿಸುತ್ತಿರುವ ಕಾರಣದಿಂದ ಮತ್ತು ಅವರು ಕಳೆದ ವರ್ಷ ತನ್ನ ವೇತನವನ್ನೇ ಪಡೆದುಕೊಳ್ಳಲು ಸಾಧ್ಯವಾಗದಿರುವ ಕಾರಣ ಇದೀಗ ತನ್ನ ಕೆಲಸವನ್ನೇ ಬದಲಾಯಿಸುವ ಯೋಚನೆ ಮಾಡುತ್ತಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
‘ಇಷ್ಟೆಲ್ಲಾ ಸಂಕಷ್ಟಗಳಿದ್ದರೂ ತನ್ನ ತಂದೆ ಆ ಸಂಸ್ಥೆಗಾಗಿ 200% ಸೇವೆಯನ್ನು ನೀಡಿದ್ದಾರೆ, ಆದಿತ್ಯವಾರ ಮತ್ತು ಹೆಚ್ಚುವರಿ ಸಮಯಗಳನ್ನು ತಮ್ಮ ಕಂಪೆನಿಗೆ ನೀಡಿದ್ದಾರೆ’ ಎಂದು ಆಕೆ ತನ್ನ ತಂದೆಯ ಕಾರ್ಯವೈಖರಿಯ ಪರಿಚಯ ಮಾಡಿಕೊಟ್ಟಿದ್ದಾರೆ.
ಹೀಗೆ ವೃತ್ತಿಯಲ್ಲಿ ಇದುವರೆಗೆ ಅತ್ಯುತ್ತಮ ಪರ್ಮಾರ್ಮರ್ ಆಗಿದ್ದರೂ ತಾನು ಈಗ ದುಡಿಯುತ್ತಿರುವ ಸಂಸ್ಥೆಯಲ್ಲಿ ಅಸ್ಥಿರತೆಯ ಕಾರಣದಿಂದ ಇದೀಗ ಜಾಬ್ ಚೇಂಜ್ ಮಾಡಲು ಯೋಚಿಸಿದ್ದು, ಇದಕ್ಕೆ ಪೂರಕವಾಗಿ ಮಗಳು ತನ್ನ ತಂದೆಯ ವೃತ್ತಿ ನೈಪುಣ್ಯತೆಯನ್ನು ವಿವರಿಸಿ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Money Tips: ಸಾಲ ಮಾಡಿಯೂ ನಿಶ್ಚಿಂತೆಯಿಂದ ಇರಬೇಕೆ? ಈ ಟಿಪ್ಸ್ ಫಾಲೋ ಮಾಡಿ
‘ಯಾವುದೇ ಸಂಸ್ಥೆ ನೇಮಿಸಿಕೊಳ್ಳಬಹುದಾದ ಉತ್ತಮ ಉದ್ಯೋಗಿ ನನ್ನ ತಂದೆಯಾಗಿದ್ದಾರೆ. ಹಾಗಾಗಿ ಈ ಅವಕಾಶವನ್ನು ಮಿಸ್ ಮಾಡ್ಕೋಬೇಡಿ’ ಎಂದು ಆಕೆ ಬರೆದುಕೊಂಡಿದ್ದಾರೆ. ಯಾರಿಗಾದರೂ ಆಸಕ್ತಿಯಿದ್ದರೆ ನನ್ನನ್ನು ಸಂಪರ್ಕಿಸಿ ಮತ್ತು ನಾನು ನನ್ನ ತಂದೆಯನ್ನು ಸಂಪರ್ಕಿಸುತ್ತೇನೆ. ಇಷ್ಟುದ್ದದ ಬರಹವನ್ನು ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಲು’ ಎಂದು ಆಕೆ ಬರೆದುಕೊಂಡಿದ್ದಾರೆ. ಈ ಮಹಿಳೆ ಈ ಪೋಸ್ಟ್ ಲಿಂಕ್ಡ್ ಇನ್ ನಲ್ಲಿ ಶೇರ್ ಮಾಡುತ್ತಿದ್ದಂತೆ ಈಗಾಗಲೇ ಇದಕ್ಕೆ ಬಹಳಷ್ಟು ಕಮೆಂಟ್ ಗಳು ಬಂದಿವೆ ಮತ್ತು 500ಕ್ಕೂ ಅಧಿಕ ಕಮೆಂಟ್ ಬಂದಿದೆ.