ಲಖನೌ: ಮಹಾಕುಂಭ (Mahakumbh) ಮೇಳದ ಪೋಸ್ಟರ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಕೋಪಗೊಂಡ ಜನಸಮೂಹ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್ ಬರೇಲಿಯಲ್ಲಿ ನಡೆದಿದೆ. ಶುಕ್ರವಾರ (ಜನವರಿ 10) ಸಂಜೆ ಬಚ್ರವಾನ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ಇದು ನಡೆದಿದ್ದು, ಇಡೀ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ( Viral Video)
ವರದಿಗಳ ಪ್ರಕಾರ, ಜನನಿಬಿಡ ರಸ್ತೆಯಲ್ಲಿ ಯುವಕನೊಬ್ಬ ಮಹಾಕುಂಭ ಮೇಳಕ್ಕೆ ಅಳವಡಿಸಿದ್ದ ಬ್ಯಾನರ್ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ . ಈ ಕೃತ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಯುವಕನನ್ನು ಹಿಡಿದು ಥಳಿಸಲು ಪ್ರಾರಂಭಿಸಿದರು. ಈ ಸಂಪೂರ್ಣ ದೃಶ್ಯವನ್ನು ಸ್ಥಳದಲ್ಲಿದ್ದವರೊಬ್ಬರು ರೆಕಾರ್ಡ್ ಮಾಡಿದ್ದಾರೆ.
रायबरेली में महाकुंभ के बैनर पर युवक ने किया टॉयलेट, स्थानीय लोगों ने युवक को दौड़ा-दौड़ाकर पिटाई की, पुलिस ने सूचना पर युवक को हिरासत में लिया !!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) January 11, 2025
मारपीट का वीडियो सोशल मीडिया पर हुआ वायरल !!#ViralVideo #MahaKumbh2025 pic.twitter.com/S6kbQ6qLzd
ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿ ತನ್ನ ಮುಖಕ್ಕೆ ಮಸಿಯನ್ನು ಬಳಿದುಕೊಂಡಿದ್ದಾನೆ. ಸದ್ಯ ವೈರಲ್ ಆದ ವಿಡಿಯೋದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಬ್ಯಾನರ್ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಯುವಕನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಡಿಸೆಂಬರ್ 30 ರಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಸಂಭವಿಸಿದ ಇದೇ ರೀತಿಯ ಘಟನೆ ನಡೆದಿತ್ತು. ಗೋಹತ್ಯೆ ಆರೋಪದ ಮೇಲೆ ಯುವಕರ ಗುಂಪೊಂದು ಮುಸ್ಲಿಂ ಯುವಕನನ್ನು ಅಮಾನುಷವಾಗಿ ಥಳಿಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದ. ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಹಿಂದೆ ಮೃತ ಯುವಕನ ಸ್ನೇಹಿತ ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಹಿನ್ನಲೆಯಲ್ಲಿ ಮೃತ ಯುವಕನೂ ಕೂಡ ಗೋ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಆತನನ್ನು ಥಳಿಸಿದ್ದರು.
ಈ ಸುದ್ದಿಯನ್ನೂ ಓದಿ : Police Harassment: ಠಾಣೆಗೆ ಬಂದ ಮಹಿಳೆ ಮೇಲೆ ಡಿವೈಎಸ್ಪಿ ಲೈಂಗಿಕ ವಿಕೃತಿ, ವಿಡಿಯೋ ವೈರಲ್