Sunday, 12th January 2025

Viral Video: ಲಾಸ್‌ ಏಂಜಲೀಸ್‌ನ ಕಾಡ್ಗಿಚ್ಚಿನ ರಣ ಭೀಕರ ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌

Viral Video

ವಾಷಿಂಗ್ಟನ್‌ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ (Los Angeles Wildfire) ನಗರದ ಪೆಸಿಫಿಕ್‌ ಪ್ಯಾಲಿಸೈಡ್ಸ್‌ ನಗರದಲ್ಲಿ ಭಾರೀ ಪ್ರಾಮಾಣದ ಕಾಡ್ಗಿಚ್ಚು ಸಂಭವಿಸಿದ್ದು, ಈ ವರೆಗೆ 16 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಇದೀಗ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. (Viral Video) ವ್ಯಕ್ತಿಯೊಬ್ಬ ದೇವರೇ ನಮ್ಮನ್ನು ಕಾಪಾಡು ಎನ್ನುತ್ತಾ ತನ್ನ ಸಂಗಾತಿಯೊಂದಿಗೆ ಮನೆ ಬಿಟ್ಟು ತೆರಳುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ವಿಡಿಯೋದಲ್ಲಿ ಜೋಡಿ ಮಾತನಾಡುವುದು ಕೇಳುತ್ತದೆ. ಅವರು ನಮಗೇನೋ  ಬಹಳ ದೊಡ್ಡ ಸಮಸ್ಯೆ ಇದೆ. ನಾವು ಇಲ್ಲಿಂದ ಹೊರಡಬೇಕಾಗಿದೆ ಎಂದು ಹೇಳುತ್ತಾರೆ. ಇದಾದ ಬಳಿಕ ಅವರು ಕಾಡ್ಗಿಚ್ಚನ್ನು ನೋಡಿದ್ದಾರೆ. ಬೆಂಕಿ ವಸತಿ ಪ್ರದೇಶಕ್ಕೂ ಹಬ್ಬುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳೆಯ ಪತಿ ಇಡೀ ಮನೆಗೆ ನೀರು ಹಾಯಿಸುತ್ತಾನೆ. ಆದರೂ ಬೆಂಕಿ ಹಬ್ಬುತ್ತಲೇ ಇರುತ್ತದೆ.

ಅವರು ತಮ್ಮ ಭಾರವಾದ ಹೃದಯದೊಂದಿಗೆ ತಮ್ಮ ಮನೆಯನ್ನು ಬಿಟ್ಟುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಎಲ್ಲೆಡೆ ದಟ್ಟ ಹೊಗೆ ತುಂಬಿತ್ತು. ನಮಗೆ ಉಸಿರಾಡಲೂ ಕಷ್ಟವಾಗುತ್ತಿತ್ತು. ಜೋರಾಗಿ ಗಾಳಿ ಉಷ್ಣ ಗಾಳಿ ಬೀಸುತ್ತಿತ್ತು. ವಿದ್ಯುತ್‌ ಕೂಡ ಇರಲಿಲ್ಲ. ಕೇವಲ 34 ನಿಮಿಷಗಳಲ್ಲಿ ನಾವು ಅಲ್ಲಿಂದ ಹೊರಟು ಹೋಗಿದ್ದೇವೆ ಎಂದು ಆ ಜೋಡಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ.

ಅವರು ತಮ್ಮ ಪ್ರಾಣ ಉಳಿಸಿದಕ್ಕೆ ದೇವರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ನಮ್ಮ ಅನೇಕ ಸ್ನೇಹಿತರು ಕುಟುಂಬ , ಮನೆಯನ್ನು ಕಳೆದುಕೊಂಡಿದ್ದಾರೆ. ಕಾಡ್ಗಿಚ್ಚಿನ ವಿರುದ್ಧ  ಹೋರಾಡಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿರುವ ಎಲ್ಲರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ.

ಕಾಡ್ಗಿಚ್ಚಿನಲ್ಲಿ ಈ ವರೆಗೆ ಕಾಡ್ಗಿಚ್ಚಿನಲ್ಲಿ 1,500ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಅರಣ್ಯ ಸಮೀಪದ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.  ಕಳೆದ 24 ಗಂಟೆಗಳಲ್ಲಿ, ಪಾಲಿಸೇಡ್ಸ್ ಬೆಂಕಿಯು ಹೆಚ್ಚುವರಿ 1,000 ಎಕರೆಗಳಲ್ಲಿ ವ್ಯಾಪಿಸಿದೆ ಹಾಗೂ ಇನ್ನಷ್ಟು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಹವಾಮಾನ ಸೇವೆಯು ಸಾಂಟಾ ಅನಾ ಮಾರುತಗಳು ಹದಗೆಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದು, ಲಾಸ್ ಏಂಜಲೀಸ್ ಮತ್ತು ವೆಂಚುರಾ ಕೌಂಟಿಗಳಲ್ಲಿ ಶನಿವಾರ ರಾತ್ರಿಯಿಂದ ಮಂಗಳಾವಾರ ಬೆಳಿಗ್ಗೆವರೆಗೆ 30-  70 mph ವರೆಗೆ ಗಾಳಿ ಬೀಸಬಹುದು ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ : Los Angeles Wildfire: ಅಮೆರಿಕಾದಲ್ಲಿ ಭೀಕರ ಕಾಡ್ಗಿಚ್ಚು; ಜೀವ ಪಣಕ್ಕಿಟ್ಟು ಮೊಲವನ್ನು ರಕ್ಷಿಸಿದ ಯುವಕ – ವಿಡಿಯೋ ವೈರಲ್

Leave a Reply

Your email address will not be published. Required fields are marked *