Sunday, 12th January 2025

Viral Video: ಪುಷ್ಪ ಚಿತ್ರದ ಪೀಲಿಂಗ್ಸ್ ಹಾಡಿಗೆ ಅಜ್ಜಿಯ ಮಸ್ತ್  ಡಾನ್ಸ್‌- ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಶಾಕ್

viral video

ನವದೆಹಲಿ: ಸದ್ಯ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ಸಿನಿಮಾದ ಹಾಡು ಬಹಳಷ್ಟು ಟ್ರೆಂಡಿಂಗ್‌ನಲ್ಲಿದೆ. ಅದರಲ್ಲೂ ಈ ಚಿತ್ರದ ಕಿಸಿಕ್​ ಕಿಸಿಕ್ ಹಾಡು ಸಿಕ್ಕಾಪಟ್ಟೆ  ಹಿಟ್‌ನಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನದ್ದೇ ಹವಾ, ಅನೇಕರು ಈ ಹಾಡಿಗೆ ಸೊಂಟ ಬಳುಕಿಸಿ ರೀಲ್ಸ್​ ಮಾಡಿದ್ದಾರೆ. ಇದೀಗ  ವೃದ್ಧೆಯೊಬ್ಬರು  ಈ ಹಾಡಿಗೆ  ಬಿಂದಾಸ್  ಆಗಿ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗುತ್ತಿದ್ದು ಅಜ್ಜಿಯ ಡ್ಯಾನ್ಸ್ ಕಂಡು ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೊ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.(Viral Video)

ಅಜ್ಜಿಯೊಬ್ಬರು ಪುಷ್ಪಾ-2 ಚಿತ್ರದ ಪೀಲಿಂಗ್ಸ್ ಹಾಡಿಗೆ ಯುವಕನ  ಜೊತೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಪೀಲಿಂಗ್ಸ್ ಹಾಡು  ಕೇಳುತ್ತಿದ್ದಂತೆ  ವೃದ್ಧೆ  ಯುವಕ ನೊಂದಿಗೆ ಡ್ಯಾನ್ಸ್ ಮಾಡುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ಅಜ್ಜಿ ಕುಣಿಯುವ ಉತ್ಸಾಹ ಮತ್ತು ಉಲ್ಲಾಸ ನೋಡುಗರನ್ನೇ  ಆಶ್ಚರ್ಯಗೊಳಿಸುವಂತೆ ಮಾಡಿದೆ. ರಶ್ಮಿಕಾ ಯಾವ  ರೀತಿ ಸ್ಟೆಪ್ ಹಾಕಿದ್ದಾರೋ ಅದೇ ರೀತಿ ಸರಿ ಸಮಾನವಾಗಿ ಡ್ಯಾನ್ಸ್ ಮಾಡಿದ್ದಾರೆ. ಅಜ್ಜಿ 18ರ ಯುವತಿಯಂತೆ  ಸ್ಟೆಪ್ಸ್ ಹಾಕಿರೋದನ್ನು ನೋಡಿ ನೆಟ್ಟಿಗರನ್ನೇ ಹುಬ್ರಿಬಸು ಮಾಡಿದೆ.

ಮೆಗಾ ಫ್ಯಾಮಿಲಿ ಫ್ಯಾನ್​ ಫಾರೆವರ್​ ಹೆಸರಿನ ಎಕ್ಸ್​ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು ಬಹಳಷ್ಟು ಮಂದಿ ಈ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿದ್ದು ರಶ್ಮಿಕಾ ಸೆಪ್ಟ್ ಅನ್ನು ಮೀರಿಸುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು  ಪುಷ್ಪಾ-3ರಲ್ಲಿ ಅಜ್ಜಿಗೆ  ಡ್ಯಾನ್ ಮಾಡಲು ಚಾನ್ಸ್ ಕೊಡಬೇಕು ಎಂದಿದ್ದಾರೆ. ಇನ್ನೊಬ್ಬರು ಅಜ್ಜಿ ಯುವತಿಯಾಗಿದ್ದಾಗ ಯಾವ ರೇಂಜ್​ನಲ್ಲಿ ಡ್ಯಾನ್ಸ್ ಮಾಡಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಈ ಅಜ್ಜಿಯ ಕಾರ್ ಡ್ರೈವಿಂಗ್‌ ಜೋಷ್ ‌ಕಂಡು ನೆಟ್ಟಿಗರೇ ಶಾಕ್! ವಿಡಿಯೊ ವೈರಲ್

Leave a Reply

Your email address will not be published. Required fields are marked *