Sunday, 12th January 2025

Donald Trump: ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ: ವಿದೇಶಾಂಗ ಸಚಿವ ಜೈ ಶಂಕರ್‌ ಭಾಗಿ

ವಾಷಿಂಗ್ಟನ್: ಎರಡನೇ ಅವಧಿಗೆ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (S Jaishankar) ಭಾಗಿಯಾಗಲಿದ್ದಾರೆ. ಜ. 20ರಂದು ವಾಷಿಂಗ್ಟನ್‌ ಡಿಸಿಯಲ್ಲಿ ನಡೆಯುವ ಸಮಾರಂಭದಲ್ಲಿ ಅಧ್ಯಕ್ಷ ಜೋ ಬೈಡನ್‌ ಅವರು ಟ್ರಂಪ್‌ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಅಮೆರಿಕದ ಆಹ್ವಾನದ ಮೇರೆಗೆ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅದೇ ಸಂದರ್ಭದಲ್ಲಿ ಅಮೆರಿಕ ಆಡಳಿತದ ಪ್ರತಿನಿಧಿಗಳು, ಇತರ ರಾಷ್ಟ್ರಗಳ ಗಣ್ಯರೊಂದಿಗೆ ದೇಶಗಳ ನಡುವಿನ ಬಾಂಧವ್ಯದ ಕುರಿತಾಗಿ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌, ಆ್ಯಪಲ್‌ ಕಂಪನಿಯ ಸಿಇಒ ಟಿಮ್‌ ಕುಕ್‌ ಸೇರಿದಂತೆ ವಿವಿಧ ದೇಶಗಳ ಮುಖ್ಯಸ್ಥರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಅಧಿಕಾರಕ್ಕೆ ಬರುವ ಮುಂಚೆಯೇ ಟ್ರಂಪ್ ಯುದ್ಧಕ್ಕೆ ಸಿದ್ಧತೆ!

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್​​ ಟ್ರಂಪ್​​ ಅವರು, ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಗ್ರೀನ್‌ಲ್ಯಾಂಡ್ ಪ್ರಧಾನ ಮಂತ್ರಿ ಮ್ಯೂಟ್ ಎಗೆಡೆ ಅವರು ಡೊನಾಲ್ಡ್​​ ಟ್ರಂಪ್ ಮಾತನಾಡಲು ಸಿದ್ದವಾಗಿರುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಅಮೆರಿಕದ ದೈನಿಕ ಪತ್ರಿಕೆಯೊಂದು ಈಗಾಗಲೇ ಡೊನಾಲ್ಡ್​​ ಟ್ರಂಪ್ ಹಾಗೂ ಮ್ಯೂಟ್ ಎಗೆಡೆ ಅವರ ನಡುವೆ ಖಾಸಗಿ ಮಾತುಕತೆ ನಡೆದಿದೆ ಎಂದು ವರದಿ ಮಾಡಿದೆ.

ಡೊನಾಲ್ಡ್​​ ಟ್ರಂಪ್ ಅವರ ತಂಡವು ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕದ ಸೇನಾ ಚಟುವಟಿಕೆಯನ್ನು ಹೆಚ್ಚಿಸಲು ಅಥವಾ ಸೇನೆಯ ಮೂಲಕ ಇಡೀ ಗ್ರೀನ್‌ಲ್ಯಾಂಡ್ ದ್ವೀಪವನ್ನೇ ವಶಪಡಿಸಕೊಳ್ಳಬೇಕೆಂಬ ಸಾಕಷ್ಟು ಊಹಾಪೋಹದ ನಡುವೆ ಗ್ರೀನ್‌ಲ್ಯಾಂಡ್ ಪ್ರಧಾನ ಮಂತ್ರಿ ಮ್ಯೂಟ್ ಎಗೆಡೆ ಅವರು ಡೊನಾಲ್ಡ್​​ ಟ್ರಂಪ್ ಜತೆಗೆ ಮಾತನಾಡಲು ಸಿದ್ದವಾಗಿರುವುದಾಗಿ ತಿಳಿಸಿದ್ದರು.

ಜ. 20ರಂದು ಅಧಿಕಾರ ವಹಿಸಿಕೊಳ್ಳಲಿರುವ ಟ್ರಂಪ್ ಅವರು, ಡ್ಯಾನಿಶ್ ಸಾಮ್ರಾಜ್ಯದ ಅರೆ ಸ್ವಾಯತ್ತ ಭೂ ಪ್ರದೇಶವಾದ ಗ್ರೀನ್‌ಲ್ಯಾಂಡ್‌ನ ಮೇಲೆ ಅಮೆರಿಕಾದ ಸಂಪೂರ್ಣ ನಿಯಂತ್ರಣವನ್ನು ಬಯಸಿದ್ದಾರೆ. ಇದಕ್ಕಾಗಿ ಡೆನ್ಮಾರ್ಕ್ ರಾಷ್ಟ್ರದ ವಿರುದ್ಧ ಸುಂಕಗಳು ಸೇರಿದಂತೆ ಮಿಲಿಟರಿ ಅಥವಾ ಆರ್ಥಿಕ ವಿಧಾನಗಳ ಸಂಭಾವ್ಯ ಬಳಕೆಯ ಬೆದರಿಕೆ ಒಡ್ಡಿದ್ದರು.

ಈ ಸುದ್ದಿಯನ್ನೂ ಓದಿ:Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?

Leave a Reply

Your email address will not be published. Required fields are marked *