ಮುಂಬೈ: ಪುಣೆಯಲ್ಲಿ ಕರ್ತವ್ಯನಿರತ ಟ್ರಾಫಿಕ್ ಸಿಬ್ಬಂದಿ ಮೇಲೆ ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಹರಿದಾಡುತ್ತಿದೆ. ಮೂಲಗಳ ಪ್ರಕಾರ ಈ ಘಟನೆ ಮಗಾರಾಷ್ಟ್ರ ಪುಣೆಯ ಮಗರಪಟ್ಟಾ ಬಳಿ ನಡೆದಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿದ್ದ ಯುವಕ ಮಾತಿನ ಚಕಮಕಿ ನಡೆಸಿದ ಬಳಿಕ ಸಂಚಾರ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ (Viral Video).
ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸ್ ಮೇಲೆ ವ್ಯಕ್ತಿ ಹಲ್ಲೆ ಮಾಡುವ ವಿಡಿಯೊ ಭಾರೀ ವೈರಲ್ ಆಗಿದೆ. ಪುಣೆಯ ಮಗರಪಟ್ಟಾ ಪ್ರದೇಶದಲ್ಲಿ ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಮೇಲೆ ಕುಡಿದ ಅಮಲಿನಲ್ಲಿ ಯುವಕ ಕಪಾಳ ಮೋಕ್ಷ ಮಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದು ನೆಟ್ಟಿಗರಿಗೆ ಶಾಕ್‌ಗೆ ಒಳಗಾಗಿದ್ದಾರೆ.
#WATCH | #Pune: Drunk Youth Hits Traffic Cop Near Magarpatta; Incident Caught on Video#PuneNews #Maharashtra pic.twitter.com/x2bReqIU9f
— Free Press Journal (@fpjindia) January 12, 2025
ಪೊಲೀಸರ ಪ್ರಕಾರ, ಪೊಲೀಸ್ ಕಾನ್‌ಸ್ಟೇಬಲ್ ರಾಜು ಪವಾರ್ ಎನ್ನುವವರು ಟ್ರಾಫಿಕ್ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಯುವಕನೊಬ್ಬ ರಾಸ್ಕರ್ ಚೌಕ್‌ನಲ್ಲಿ ಹಿರಿಯ ನಾಗರಿಕರ ಮೇಲೆ ಎಗರಾಡುತ್ತಿದ್ದನು. ಈ ಸಮಯದಲ್ಲಿ ಸಂಚಾರ ಪೊಲೀಸ್ ಮಧ್ಯ ಪ್ರವೇಶಿಸಿದ್ದಾರೆ. ಆ ಸಂದರ್ಭ ಯುವಕ ಮತ್ತಷ್ಟು ಕೋಪಗೊಂಡು, ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾನೆ. ಕರ್ತವ್ಯ ನಿರತ ಅಧಿಕಾರಿಯ ಹಲ್ಲೆ ನಡೆಸಿದ್ದು, ಸ್ಥಳೀಯ ನಿವಾಸಿಗಳು ಕೂಡಲೇ ಪೊಲೀಸ್ ಸಹಾಯಕ್ಕೆ ಧಾವಿಸಿ ಆರೋಪಿಯನ್ನು ತಡೆದಿರುವುದನ್ನು ವಿಡಿಯೊದಲ್ಲಿ ಕಂಡುಬಂದಿದೆ. ಘಟನೆಯ ನಂತರ ಹಡಪ್ಸರ್ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರಬಹುದು ಎನ್ನಲಾಗಿದೆ. ಆರೋಪಿಯು ದಿಲ್ಲಿಯ ನಿವಾಸಿಯಾಗಿದ್ದು ತನ್ನ ಕುಟುಂಬ ಸದಸ್ಯರೊಂದಿಗೆ ವೈಯಕ್ತಿಕ ಕೆಲಸಕ್ಕಾಗಿ ಮುಂಬೈಗೆ ಆಗಮಿಸಿದ್ದನು. ಕುಟುಂಬಸ್ಥರು ಆತ ಮಾನಸಿಕವಾಗಿ ನೊಂದಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸರ ಮೇಲೆ ದೈಹಿಕ ದೌರ್ಜನ್ಯ ಎಸಗುವ ವಿಡಿಯೊ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದು ಪೊಲೀಸರ ಸುರಕ್ಷತೆ ಬಗ್ಗೆ ಕಳವಳವನ್ನು ಹುಟ್ಟು ಹಾಕುತ್ತಿದೆ.
ಇದನ್ನು ಓದಿ:BBK 11: ಟಿಆರ್ಪಿಯಲ್ಲಿ ಬಿಗ್ ಬಾಸ್ಗೆ ಬಿಗ್ ಶಾಕ್: ದಾಖಲೆ ಸೃಷ್ಟಿಸಿದ ‘ಸರಿಗಮಪ’