ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ (ವಿಜಯ್ ಕುಮಾರ್.ಆರ್-Sarigama Viji) ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ 4 ದಿನಗಳಿಂದ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಟ ಸರಿಗಮ ವಿಜಿ ಅವರಿಗೆ ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಆರೋಗ್ಯ ಸ್ಥಿತಿ ಇಂದು ಗಂಭೀರವಾಗಿದೆ ಎಂದು ಸರಿಗಮ ವಿಜಯ್ ಪುತ್ರ ರೋಹಿತ್ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಇವರು 1980ರಲ್ಲಿ ಗೀತಪ್ರಿಯಾ ನಿರ್ದೇಶನದ ‘ಬೆಳವಳದ ಮಡಿಲಲ್ಲಿ’ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ನಟನಾಗಿ ಗುರುತಿಸಿಕೊಂಡರು. ಒಟ್ಟಾರೆ ಇವರು 269 ಚಿತ್ರಗಳಲ್ಲಿ ನಟನೆ, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ. 2,400 ಧಾರಾವಾಹಿಗಳ ನಿರ್ದೇಶನದ ಜತೆಗೆ ನಟನೆ ಮಾಡಿದ್ದಾರೆ. ವಿಶೇಷ ಅಂದರೆ, ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಚಿತ್ರಗಳೇ ಹೆಚ್ಚಾಗಿದೆ. ಸರಿಗಮ ವಿಜಿ ಎಂದೇ ಫೇಮಸ್ ಆಗಿರುವ ಇವರ ಮೂಲ ಹೆಸರು ವಿಜಯ್ ಕುಮಾರ್ ಆರ್. ಆಗಿದೆ.
ಈ ಸುದ್ದಿಯನ್ನೂ ಓದಿ | Thalapathy 69: ಕಾಲಿವುಡ್ ಸ್ಟಾರ್ ವಿಜಯ್ ಅಭಿನಯದ ‘ದಳಪತಿ 69’ ಟಾಲಿವುಡ್ ಚಿತ್ರದ ರಿಮೇಕ್? ಯಾವುದು ಆ ಸಿನಿಮಾ?
ನಾವು ಸೇಫ್ ಆಗಿದ್ದೀವಿ… ಲಾಸ್ ಏಂಜಲೀಸ್ ಕಾಡ್ಗಿಚ್ಚು ಭೀಕರತೆ ಬಗ್ಗೆ ನಟಿ ಪ್ರೀತಿ ಜಿಂಟಾ ಹೇಳಿದ್ದೇನು?
ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲಿಸ್ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ಸಿಗದ ಹಿನ್ನಲೆ ಅಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ವರದಿಯ ಪ್ರಕಾರ, ಈ ಬೆಂಕಿಯಲ್ಲಿ ಅನೇಕ ಹಾಲಿವುಡ್ ಸೆಲೆಬ್ರಿಟಿಗಳ ಮನೆಗಳು ಸುಟ್ಟು ಭಸ್ಮವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ನಿವಾಸಗಳತ್ತಲೂ ಕಾಡ್ಗಿಚ್ಚು ವ್ಯಾಪಿಸುತ್ತಿದ್ದು, ಸೆಲಿಬ್ರಿಟಿಗಳು ಕೂಡ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇದೀಗ ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಾವು ಸುರಕ್ಷಿತವಾಗಿದ್ದೇವೆ. ತಮ್ಮನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳ ಸಿಬ್ಬಂದಿಗಳಿಗೆ ಧನ್ಯವಾದ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಪ್ಡೇಟ್ ಮಾಡಿದ್ದಾರೆ.
ಬಾಲಿವುಡ್ ನಟಿ ಪ್ರೀತಿ ಜಿಂಟಾ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಕಾಡ್ಗಿಚ್ಚುಗಳ ಮಧ್ಯೆ ತಾನು ಮತ್ತು ಅವರ ಕುಟುಂಬವು ಸುರಕ್ಷಿತವಾಗಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇಲ್ಲಿ ಉಂಟಾದ ಕಾಡ್ಗಿಚ್ಚು ನೋಡಿ ನಾನು ಬದುಕಿರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ಮತ್ತು ನನ್ನ ಕುಟುಂಬ ಸುರಕ್ಷಿತವಾಗಿದೆ. ಇಲ್ಲಿ ವಾಸಿಸುತ್ತಿದ್ದ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಾವು ಈಗ ಸುರಕ್ಷಿತವಾಗಿರುವುದಕ್ಕೆ ದೇವರಿಗೆ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
I never thought I would live to see a day where fires would ravage neighbourhoods around us in La, friends & families either evacuated or put on high alert, ash descending from smoggy skies like snow & fear & uncertainty about what will happen if the wind does not calm down with…
— Preity G Zinta (@realpreityzinta) January 11, 2025
ತಮ್ಮ ಪ್ರಾಣ ಉಳಿಸಲು ಹರಸಾಹಸ ಪಟ್ಟ ಅಗ್ನಿಶಾಮಕ ದಳ, ಅಗ್ನಿಶಾಮಕ ಸಿಬ್ಬಂದಿಗೆ ಹಾಗೂ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಕೂಡ ಈ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಲಾಸ್ ಏಂಜಲೀಸ್ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ನಟಿ ನೋರಾ ಫತೇಹಿ ಕೂಡ ಇಂತಹ ಸಂದರ್ಭದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡಿದ ರಕ್ಷಕರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ.
ಈಗಾಗಲೇ ಭೀಕರ ಕಾಡ್ಗಿಚ್ಚು ಅಪಾರ ಹಾನಿ ಯುಂಟುಮಾಡಿದೆ.ಕಟ್ಟಡಗಳು, ಐಷಾರಾಮಿ ಮನೆಗಳವರೆಗೆ ಎಲ್ಲವೂ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗುತ್ತಿದೆ.ಈ ಘಟನೆಯಲ್ಲಿ ಇದುವರೆಗೆ 13 ಜೀವಗಳು ಬಲಿಯಾಗಿದ್ದು,, ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡ ಲಾಗಿದೆ. ಕಾಡಿಚ್ಚು ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ:Koratagere News: ಟಾಟಾ ಏಸ್ ಪಲ್ಟಿಯಾ