ಕರ್ನಾಟಕ ರಾಜ್ಯ ಯಾದವ ಜನಜಾಗೃತಿ ಸಂಘ ಅಸ್ತಿತ್ವಕ್ಕೆ
ಚಿಂತಾಮಣಿ: ಕರ್ನಾಟಕ ರಾಜ್ಯ ಯಾದವ್ ಜನಜಾಗೃತಿ ಸಂಘಟನೆಯನ್ನು ಜನಪರ ಹಾಗೂ ಅನ್ಯಾಯ ವಾಗುತ್ತಿರುವ ಕಡೆ ಅವರೊಂದಿಗೆ ನಿಂತು ನ್ಯಾಯ ಕೊಡಿಸಲು ಎಲ್ಲರ ಹಿತಕ್ಕಾಗಿ ಸಂಘಟನೆಯನ್ನು ರಾಜ್ಯಮಟ್ಟದ ಸಂಘಟನೆಯಾಗಿ ನೋಂದಣಿ ಮಾಡಿಕೊಂಡಿದ್ದು ಅನ್ಯಾಯದ ಪರ ಧ್ವನಿಯೆತ್ತಲು ಮುಂಚೂಣಿಯಲ್ಲಿ ಇರುತ್ತೇವೆ ಎಂದು ಕರ್ನಾಟಕ ರಾಜ್ಯ ಯಾದವ್ ಜನಜಾಗೃತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೆ ಆರ್ ರಾಮಾಂಜನೇಯ ಯಾದವ್ ನುಡಿದರು.
ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಯಾದವ್ ಜನಜಾಗೃತಿ ಸಂಘಟನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಹೋರಾಟಗಳ ಹುಟ್ಟೂರಾಗಿರುವ ಚಿಂತಾಮಣಿಯಲ್ಲಿ ಸಂಘಟನೆ ಯನ್ನು ಆರಂಭ ಮಾಡಿದ್ದು ಮುಂದೆ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ವಿವರಿಸಿದವರು ಸಂಘಟನೆಯಲ್ಲಿ ಯಾವುದೇ ಬೇದಭಾವ ಇಲ್ಲ ಸಂಘಟನೆ ಎನ್ನುವುದು ಒಂದು ಬಲವಾದ ಶಕ್ತಿ ಸಂಘಟನೆಯಿAದ ಮಾತ್ರ ಸರ್ಕಾರದ ಸೌಲಭ್ಯಗಳು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎನ್ನುವುದು ಸದ್ದು ಮಾಡುತ್ತಿದೆ. ಮೊದಲನೆಯದಾಗಿ ಇದರ ವಿರುದ್ಧ ಧ್ವನಿ ಎತ್ತಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ನಡೆಸುತ್ತೇವೆ ಎಂದು ಹೇಳಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷರಾದ ರಾಜಣ್ಣ, ಬಿ ವಿ ರಮೇಶ್, ರಾಜ್ಯ ಗೌರವಾಧ್ಯಕ್ಷರಾದ ರಾಮಕೃಷ್ಣಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಆರ್, ಸಂಘಟನಾ ಕಾರ್ಯದರ್ಶಿ ಸತ್ಯನಾರಾಯಣ ಕೆ ಆರ್, ಖಜಾಂಚಿ ಸುಭಾಷಿಣಿ, ಸಂಚಾಲಕರಾದ ಶರಣ್ ಕುಮಾರ್, ಶ್ರೀರಾಮಪ್ಪ, ಲೋಕೇಶ್, ನವೀನ್ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: chikkaballapurnews