ವಾಷಿಂಗ್ಟನ್ : ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ಭೀಕರ ಕಾಡ್ಗಿಚ್ಚು (Los Angeles Wildfire) ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯ ರೌದ್ರ ನರ್ತನ ನಿಲ್ಲುವ ರೀತಿಯಲ್ಲಿ ಕಾಣಿಸುತ್ತಿಲ್ಲ. ಹಲವಾರು ಜನ ಮನೆ, ಕುಟುಬಂಸ್ಥರನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ತಮ್ಮ ಮನೆ ಬೆಂಕಿಯಲ್ಲಿ ಸುಟ್ಟು ಹೋಗುತ್ತಿರುವುದನ್ನು ನೋಡಿ ಅಸಹಾಯಕರಾಗಿದ್ದಾರೆ. ಮತ್ತೊಂದೆಡೆ ಸಾಕು ಪ್ರಾಣಿಗಳು ತಮ್ಮ ಒಡೆಯನನ್ನು ಕಳೆದುಕೊಂಡು ಮೂಕ ರೋಧನೆ ಮಾಡುತ್ತಿವೆ. ಅಂತಹುದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು, ಮಾಲೀಕನೊಬ್ಬ ತನ್ನ ಸಾಕು ನಾಯಿಯನ್ನು ಮತ್ತೆ ಸೇರಿದ್ದಾನೆ. ಇವರಿಬ್ಬರ ಸಂತೋಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Viral Video)
ಲಾಸ್ ಏಂಜಲಿಸ್‌ನ ಫೆಸಿಫಿಕ್‌ಪಾಲಿಡೇಸ್‌ನ ಕೇಸಿ ಕೊಲ್ವಿನ್ ಎಂಬ ವ್ಯಕ್ತಿಯೊಬ್ಬ ಕಾಡ್ಗಿಚ್ಚಿನಿಂದಾಗಿ ತನ್ನ ಸಾಕು ನಾಯಿಯನ್ನು ಕಳೆದುಕೊಂಡಿದ್ದ. ಆತ ಎಲ್ಲೆಡೆ ತನ್ನ ಪ್ರೀತಿಯ ನಾಯಿಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಟ್ರಾಕರ್ ಸಹಾಯದಿಂದ ನಾಯಿ ಇರುವ ಸ್ಥಳವನ್ನು ಪತ್ತೆ ಮಾಡಿದ್ದಾನೆ. ನಾಯಿಯನ್ನು ಭೇಟಿ ಮಾಡಲು ತೆರಳುವಾಗ ಅದರ ನೆಚ್ಚಿನ ಆಟಿಕೆಯನ್ನು ಕೈಯಲ್ಲಿ ಹಿಡಿದು ತೆರಳಿದ್ದಾನೆ.
Omg this man just reunited with his dog who survived 5 nights amidst the rubble of the Palisades Fire. 🥺
— Tiffany Fong (@TiffanyFong_) January 12, 2025
pic.twitter.com/6Guhsa0f0N
ಕೊನೆಗೂ ಭಾನುವಾರ ಆತನಿಗೆ ತನ್ನ ಸಾಕು ನಾಯಿ ದೊರೆತಿದೆ. ಆತ ನಾಯಿ ಇರುವ ಸ್ಥಳ ಕೊಲ್ವಿನ್ ಗೇಟ್ ಹತ್ತಿರ ಬಂದ ತಕ್ಷಣ ಸಾಕು ನಾಯಿ ತನ್ನ ಮಾಲೀಕನ ಗುರುತಿಸಿದೆ. ವ್ಯಕ್ತಿಯನ್ನು ಕಂಡ ಕೂಡಲೇ ನಾಯಿ ಆತನ ಬಳಿ ಓಡಿ ಬಂದಿದೆ. ಆತ ನಾಯಿಯನ್ನು ಎತ್ತಿ ಮುದ್ದಾಡಿದ್ದಾನೆ. ನಾಯಿಯನ್ನು ಎತ್ತಿಕೊಂಡಿದ್ದಾಗ ಆತನ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಆತ ಓ ಮೈ ಗಾಡ್! ನೀನು ಬದುಕಿರುವೆ! ಓ ಹನೀ! ಎಂದು ಕೂಗುತ್ತಾ ಸಂತೋಷ ವ್ಯಕ್ತಪಡಿಸಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ಮನ ಸೋತಿದ್ದಾರೆ. ಈ ವಿಡಿಯೋ ಕೇವಲ ಎರಡೇ ದಿನದಲ್ಲಿ 2.5 ಮಿಲಿಯನ್ ವೀಕ್ಷಣೆಗಳನ್ನು ಮತ್ತು 59,000ಕ್ಕೂ ಲೈಕ್ಸ್ ಗಳಿಸಿದೆ.
ತನ್ನ ನಾಯಿ ಕಳೆದ ಹೋದುದರ ಬಗ್ಗೆ ಮಾತನಾಡಿದ ವ್ಯಕ್ತಿ ತಾನು ಮನೆ ಬಿಟ್ಟು ಹೋಗುವಾಗ ಓರಿಯೋ (ನಾಯಿ) ಮನೆಯಲ್ಲಿರಲಿಲ್ಲ. ಅದಕ್ಕಾಗಿ ನಾನು ಸಾಕಷ್ಟು ಹುಡುಕಾಡಿದೆ ಆದರೆ ಅದು ನನಗೆ ಎಲ್ಲಿಯೂ ಸಿಗಲಿಲ್ಲ. ಅಗ್ನಿಶಾಮಕ ದಳದವರು ಬಂದು ಆದಷ್ಟು ಬೇಗ ಮನೆ ಖಾಲಿ ಮಾಡಬೇಕು ಎಂದರು. ಅನಿವಾರ್ಯವಾಗಿ ನಾನು ಹೋದೆ ಎಂದು ಹೇಳಿದ್ದಾರೆ. ನಂತರ ಹಲವು ಜನರ ಸಹಾಯ ಪಡೆದು ಕೊನೆಗೂ ಓರಿಯೋ ನನಗೆ ಸಿಕ್ಕಿದ್ದಾನೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Los Angeles Wildfire: ಅಮೆರಿಕಾದಲ್ಲಿ ಭೀಕರ ಕಾಡ್ಗಿಚ್ಚು; ಜೀವ ಪಣಕ್ಕಿಟ್ಟು ಮೊಲವನ್ನು ರಕ್ಷಿಸಿದ ಯುವಕ – ವಿಡಿಯೋ ವೈರಲ್