ಲಖನೌ : ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮೇಳ (Mahakumbh 2025) ನಡೆಯುತ್ತಿದ್ದು, ಫೆ 26 ರವರೆಗೂ ಇರಲಿದೆ. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭ ಮೇಳಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಜಮಾಯಿಸುತ್ತಿದ್ದಾರೆ. ಒಟ್ಟು 40 ಕೋಟಿ ಭಕ್ತರು ಪ್ರಯಾಗ್ರಾಜ್ಗೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿಯಲ್ಲಿ ಮೊದಲ ದಿನ 50 ಲಕ್ಷಕ್ಕೂ ಅಧಿಕ ಜನ ಪುಣ್ಯ ಸ್ನಾನ ಮಾಡಿದ್ದಾರೆ. ವಿದೇಶಗಳಿಂದಲೂ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸುತ್ತಿದ್ದಾರೆ.
ಕುಂಭಮೇಳಕ್ಕಾಗಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶವನ್ನು ಮೀಸಲಿಡಲಾಗಿದೆ. ಮಹಾಕುಂಭ ಮೇಳವು ಉತ್ತರ ಪ್ರದೇಶ (Uttar Pradesh) ರಾಜ್ಯಕ್ಕೆ ಭಾರೀ ಪ್ರಮಾಣದ ಆದಯವನ್ನು ಒದಗಿಸಲಿದ್ದು, ರಾಜ್ಯದ ಆರ್ಥಿಕತೆ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ. ಮಹಾಕುಂಭ ಮೇಳ 2025ರ ಆಯೋಜನೆಯಿಂದಾಗಿ, ಉತ್ತರ ಪ್ರದೇಶ ಸರ್ಕಾರಕ್ಕೆ ಸರಾಸರಿ 2 ಲಕ್ಷ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ಕುಂಭಮೇಳಕ್ಕೆ ಅಂದಾಜು 45 ಕೋಟಿ ಜನ ಭೇಟಿ ಮಾಡುವ ನಿರೀಕ್ಷೆ ಇದ್ದು, ಪ್ರತಿ ವ್ಯಕ್ತಿ ಸರಾಸರಿ 5,000 ರೂ. ಖರ್ಚು ಮಾಡಿದರೆ, ಬರೋಬ್ಬರಿ 2 ಲಕ್ಷ ಕೋಟಿ ರೂ. ಸರ್ಕಾರದ ಬೊಕ್ಕಸ ಸೇರಲಿದೆ. 45 ದಿನಗಳ ಕಾಲ ನಡೆಯುವ ಈ ಬೃಹತ್ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರವು 7,000 ಕೋಟಿ ರೂ ಖರ್ಚು ಮಾಡಿದೆ.
ವರದಿಯ ಪ್ರಕಾರ ಕುಂಭ ಮೇಳಕ್ಕೆ ಬರುವ ಪ್ರತಿ ವ್ಯಕ್ತಿ ಸರಾಸರಿ 10 ಸಾವಿರ ರೂ . ಖರ್ಚು ಮಾಡಿದರೆ ಮಹಾಕುಂಭ ಮೇಳದಿಂದ ಉತ್ತರ ಪ್ರದೇಶ ಸರ್ಕಾರಕ್ಕೆ 4 ಲಕ್ಷ ಕೋಟಿ ರೂ. ಆದಾಯ ಬಂದರೂ ಅಚ್ಚರಿಯಿಲ್ಲ. ರಾಜ್ಯದ ನಾಮಮಾತ್ರ ಮತ್ತು ನೈಜ ಜಿಡಿಪಿ ದರವನ್ನು ಶೇ.1ರಷ್ಟು ಹೆಚ್ಚಿಸಲಿದೆ.
जहां संस्कृतियों का संगम भी है, श्रद्धा और समरसता का समागम भी है।
— Yogi Adityanath (@myogiadityanath) January 13, 2025
'अनेकता में एकता' का संदेश देता महाकुम्भ-2025, प्रयागराज मानवता के कल्याण के साथ ही सनातन से साक्षात्कार करा रहा है।#एकता_का_महाकुम्भ pic.twitter.com/kZt5xtBItW
ಈ ಹಿಂದೆ ಅಂದರೆ 2019 ರಲ್ಲಿ ನಡೆದ ಪ್ರಯಾಗ್ರಾಜ್ನ ಅರ್ಧ ಕುಂಭಮೇಳದಿಂದಾಗಿ ಉತ್ತರ ಪ್ರದೇಶ ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ಬಂದಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. 2019 ರಲ್ಲಿ ನಡೆದ ಅರ್ಧ ಕುಂಭಮೇಳವು ಸುಮಾರು 24 ಕೋಟಿ ಭಕ್ತರನ್ನು ಆಕರ್ಷಿಸಿತ್ತು.
ಈ ಸುದ್ದಿಯನ್ನೂ ಓದಿ : Mahakumbh 2025 : ಮಹಾಕುಂಭ ಮೇಳದಲ್ಲಿ ಮುಲಾಯಂ ಸಿಂಗ್ ಯಾದವ್ ಪ್ರತಿಮೆ- ಭಾರೀ ಆಕ್ರೋಶ