ದೆಹಲಿಯಲ್ಲಿ ಲಘು ಭೂಕಂಪನ: 2.3ರಷ್ಟು ತೀವ್ರತೆ Friday, December 25th, 2020 ವಿಶ್ವವಾಣಿ ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ನಂಗೋಲಿ ಭಾಗದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.3ರಷ್ಟು ತೀವ್ರತೆ ದಾಖಲಾಗಿದೆ. 5 ಗಂಟೆ 2 ನಿಮಿಷ ದಲ್ಲಿ ಭೂಕಂಪನ ಸಂಭವಿಸಿದೆ. ಆಸ್ತಿಪಾಸ್ತಿ ನಷ್ಟವಾದ ಮಾಹಿತಿ ಇಲ್ಲ.