Thursday, 31st October 2024

ಗ್ರಾಪಂ ಅಭ್ಯರ್ಥಿ ಮೇಲೆ ಹಲ್ಲೆ: ಆತಂಕದಲ್ಲಿ ಮತದಾನ ಸ್ಥಗಿತಗೊಳಿಸಿದ ಗ್ರಾಮಸ್ಥರು

ಪಾಂಡವಪುರ: ಪಾಂಡವಪುರ ತಾಲೂಕು ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಗ್ರಾಪಂ ಅಭ್ಯರ್ಥಿ ಮೇಲೆ ಇಬ್ಬರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.

ಅಭ್ಯರ್ಥಿ ತಮ್ಮಣ್ಣ ಎಂಬವರ ಮೇಲೆ ಪೋಲಿಂಗ್ ಬೂತ್ ಬಳಿ ಕಲ್ಲಿನಿಂದ ತಲೆಗೆ ಹೊಡೆದವರನ್ನು ಎಸ್.ಆರ್.ಲೋಕೇಶ್ ಮತ್ತು ನಂಜೇಗೌಡ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ ಪಿ ಭೇಟಿ, ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ಮತ ಚಲಾಯಿಸಲು ಆಗಮಿಸಿದ ವೇಳೆ ಮತಗಟ್ಟೆ ಬಳಿ ಗಲಾಟೆ ನಡೆದಿದೆ. ಸ್ಥಳಕ್ಕೆ ಒಂದು ರಿಸರ್ವ್, ಮೂರು ಪೊಲೀಸ್ ಜೀಪುಗಳಲ್ಲಿ ಪೊಲೀಸರ ಆಗಮನವಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಇದೆ.

ಘಟನೆಯಿಂದ ಮತದಾನ ಸ್ಥಗಿತಗೊಳಿಸಿದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.