Saturday, 23rd November 2024

ಬಿಟ್ ಕಾಯಿನ್: ಇಂದು $33,176ರಲ್ಲಿ ವಹಿವಾಟು

ನವದೆಹಲಿ: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಏಷ್ಯಾದಲ್ಲಿ ಸೋಮವಾರ $ 33,176ರಲ್ಲಿ ವಹಿವಾಟು ನಡೆಸಿದೆ. ಕಳೆದ ಭಾನುವಾರ ದಾಖಲೆಯ ಎತ್ತರ $ 34,800ಕ್ಕೆ ಏರಿತ್ತು. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡುವುದನ್ನು ಹೂಡಿಕೆದಾರರು ಮುಂದುವರಿಸಿದ್ದಾರೆ.

2020ರ ಡಿಸೆಂಬರ್ 16ರಂದು ಬಿಟ್ ಕಾಯಿನ್ ಮೊದಲ ಬಾರಿಗೆ $ 20,000 ಗಡಿ ದಾಟಿತ್ತು. ಕಳೆದ ವರ್ಷ ಮಾರ್ಚ್ ಮಧ್ಯದಿಂದ ಇಲ್ಲಿಯ ತನಕ 800% ಪರ್ಸೆಂಟ್ ಹೆಚ್ಚಳವಾಗಿದೆ ಬಿಟ್ ಕಾಯಿನ್ ಮೌಲ್ಯ. ನಿಯಮಿತವಾದ ಬಿಟ್ ಕಾಯಿನ್ ಪೂರೈಕೆಯಿಂದಲೇ ಅದರ ಮೇಲ್ಮುಖವಾದ ಓಟಕ್ಕೆ ಕಾರಣ.

ಯಾವಾಗ ಬಿಟ್ ಕಾಯಿನ್ ದೊಡ್ಡ ಪ್ರಮಾಣದಲ್ಲಿ ಗಳಿಕೆ ಕಾಣಲು ಶುರುವಾಯಿತೋ ಯು.ಎಸ್.ನ ದೊಡ್ಡ ಹೂಡಿಕೆದಾರರಿಂದ ಬೇಡಿಕೆ ಶುರುವಾಯಿತು.

ಹಲವಾರು ಎಕ್ಸ್ ಚೇಂಜ್ ಗಳಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ನಡೆಯುತ್ತದೆ. ಅದರಲ್ಲಿ ದೊಡ್ಡದು ಅಂದರೆ ಕಾಯಿನ್ ಬೇಸ್. ಇದು ಯು.ಎಸ್. ನ ಪ್ರಮುಖ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಆಗಿ, ಇನ್ನೇನು ಸಾರ್ವಜನಿಕವಾಗಿ ಷೇರು ವಿತರಣೆ ಮಾಡಿ, ವಾಲ್ ಸ್ಟ್ರೀಟ್ ನಲ್ಲಿ ಲಿಸ್ಟಿಂಗ್ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.