ವಾಷಿಂಗ್ಟನ್: ಅಮೆರಿಕದ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡಿವೊಸ್ ಮತ್ತು ಸಾರಿಗೆ ಕಾರ್ಯದರ್ಶಿ ಎಲೈನ್ ಚಾವೊ ತಮ್ಮ ಸ್ಥಾನ ಗಳಿಗೆ ರಾಜೀನಾಮೆ ನೀಡಿದ್ದಾರೆ.
‘ಸಂಸತ್ ಭವನದ ಮೇಲಿನ ದಾಳಿ ನನ್ನ ನಿರ್ಧಾರಕ್ಕೆ ಬಹು ದೊಡ್ಡ ತಿರುವು ನೀಡಿದೆ’ ಎಂದು ಬೆಟ್ಸಿ ಡಿವೊಸ್, ‘ನಾವು ನಿಮ್ಮ ಆಡಳಿತದ ಸಾಧನೆಯನ್ನು ಪ್ರಜೆಗಳೊಂದಿಗೆ ಸೇರಿ ಸಂಭ್ರಮಿಸಬೇಕಾಗಿತ್ತು. ಆದರೆ ಇದೀಗ ನಿಮ್ಮ ಬೆಂಬಲಿ ಗರು ಸಂಸತ್ ಭವನದ ಮೇಲೆ ದಾಳಿ ನಡೆಸುವ ಮೂಲಕ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸರಿಪಡಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ’ ಎಂದು ಡಿವೊಸ್ ಟ್ರಂಪ್‌ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
‘ಈ ರೀತಿಯ ನಡವಳಿಕೆ ನಮ್ಮ ದೇಶಕ್ಕೆ ಕೆಟ್ಟ ಹೆಸರನ್ನು ತಂದಿದೆ. ನಿಮ್ಮ ವಾಕ್ ಚಾತುರ್ಯವು ಪರಿಸ್ಥಿತಿ ಮೇಲೆ ಇನ್ನಷ್ಟು ಪರಿಣಾಮ ಬೀರಿದೆ’ ಎಂದು ತಿಳಿಸಿ ದ್ದಾರೆ.
ಇನ್ನೊಂದೆಡೆ ಎಲೈನ್ ಚಾವೊ ಅವರು ‘ಈ ಘಟನೆಯಿಂದ ತಮಗೆ ದೊಡ್ಡ ಅಘಾತವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಸಂಸತ್ ಭವನದ (ಕ್ಯಾಪಿಟಲ್) ಮೇಲೆ ನಡೆಸಿದ ದಾಳಿಯಿಂದ ಬೇಸರಗೊಂಡ ಅಮೆರಿಕದ ಕ್ಯಾಬಿಟನ್‌ನ ಈ ಇಬ್ಬರು ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.